AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿರಿಯ ನಟ ಪರೇಶ್ ರಾವಲ್ ವಿರುದ್ಧ ದೂರು, 25 ಕೋಟಿ ರೂ ಪರಿಹಾರಕ್ಕೆ ಒತ್ತಾಯ

Hera Peri 3: ಪರೇಶ್ ರಾವಲ್ ಬಾಲಿವುಡ್​ನ ಹಿರಿಯ ಮತ್ತು ಬಲು ಬೇಡಿಕೆಯ ಪೋಷಕ ನಟ. ‘ಹೇರಾ ಪೇರಿ’ ಸಿನಿಮಾದ ಬಾಬು ಭಯ್ಯ ಪಾತ್ರವಂತೂ ಐಕಾನಿಕ್. ಆದರೆ ಇದೀಗ ಅದೇ ‘ಹೇರಾ ಪೇರಿ’ ನಿರ್ಮಾಪಕರು ಪರೇಶ್ ರಾವಲ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಪರೇಶ್ ರಾವನ್ ಅವರಿಂದ ಸಂಸ್ಥೆಗೆ ನಷ್ಟವಾಗಿದ್ದು 25 ಕೋಟಿ ಪರಿಹಾರ ಕೊಡಿಸಬೇಕು ಎಂದಿದ್ದಾರೆ.

ಹಿರಿಯ ನಟ ಪರೇಶ್ ರಾವಲ್ ವಿರುದ್ಧ ದೂರು, 25 ಕೋಟಿ ರೂ ಪರಿಹಾರಕ್ಕೆ ಒತ್ತಾಯ
Hera Peri 3
ಮಂಜುನಾಥ ಸಿ.
|

Updated on: May 20, 2025 | 1:08 PM

Share

ಪರೇಶ್ ರಾವಲ್ (paresh rawal) ಬಾಲಿವುಡ್​ನ ಹಿರಿಯ ಮತ್ತು ಬೇಡಿಕೆಯ ಪೋಷಕ ನಟ. ಬಾಲಿವುಡ್ ಮಾತ್ರವೇ ಅಲ್ಲದೆ ತೆಲುಗು ಹಾಗೂ ಇತರೆ ಕೆಲವು ಭಾಷೆಗಳ ಸಿನಿಮಾಗಳಲ್ಲಿಯೂ ಸಹ ಪರೇಶ್ ರಾವಲ್ ನಟಿಸಿದ್ದಾರೆ. ಬಿಜೆಪಿಯ ಸಂಸದರೂ ಆಗಿದ್ದ ಪರೇಶ್ ರಾವಲ್, ಇತ್ತೀಚೆಗೆ ರಾಜಕೀಯದಿಂದ ಬಿಡುವು ಪಡೆದು ಕೇವಲ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಿದ್ದಾರೆ. ಆದರೆ ಇದೀಗ ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಪರೇಶ್ ರಾವಲ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದು ಬರೋಬ್ಬರಿ 25 ಕೋಟಿ ರೂಪಾಯಿಗಳ ಪರಿಹಾರ ಕೊಡಬೇಕೆಂದು ಒತ್ತಾಯಿಸಿದೆ.

ಪರೇಶ್ ರಾವಲ್, ‘ಹೇರಾ ಪೇರಿ’ ಸಿನಿಮಾದ ಬಾಬು ಭಯ್ಯಾ ಪಾತ್ರದಿಂದಾಗಿ ಬಹಳ ಜನಪ್ರಿಯರು. ಬಾಬು ಭಯ್ಯ ಪಾತ್ರ ಪರೇಶ್ ರಾವಲ್ ಅವರಿಗೆ ಭಾರಿ ಜನಪ್ರಿಯತೆ ಮತ್ತು ದೊಡ್ಡ ಅಭಿಮಾನಿ ವರ್ಗವನ್ನು ಸಂಪಾದಿಸಿಕೊಟ್ಟಿದೆ. ಇತ್ತೀಚೆಗಷ್ಟೆ ನಿರ್ಮಾಣ ಸಂಸ್ಥೆಯಾದ ಕೇಪ್ ಆಫ್ ಗುಡ್ ಹೋಪ್ ಫಿಲಮ್ಸ್​ ‘ಹೇರಾ ಪೇರಿ 3’ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. 20 ವರ್ಷಗಳ ಬಳಿಕ ‘ಹೇರಾ ಪೇರಿ 3’ ಸಿನಿಮಾ ಬರುತ್ತಿರುವ ಬಗ್ಗೆ ಅಭಿಮಾನಿಗಳು ಖುಷಿಯಾಗಿದ್ದರು. ಆದರೆ ಅಚಾನಕ್ಕಾಗಿ ನಟ ಪರೇಶ್ ರಾವಲ್ ತಾವು ‘ಹೇರಾ ಪೇರಿ 3’ ಸಿನಿಮಾದಿಂದ ಹೊರ ನಡೆಯುತ್ತಿರುವುದಾಗಿ ಘೋಷಣೆ ಮಾಡಿದರು.

ಈ ಬಗ್ಗೆ ಟ್ವೀಟ್ ಮಾಡಿದ ಪರೇಶ್ ರಾವಲ್, ತಾವು ‘ಹೇರಾ ಪೇರಿ 3’ ಸಿನಿಮಾದಿಂದ ಹೊರಗೆ ಹೋಗುತ್ತಿರುವುದಾಗಿ ಹೇಳಿದರು. ಆದರೆ ತಮಗೆ ನಿರ್ದೇಶಕರೊಟ್ಟಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ನಿರ್ದೇಶಕ ಪ್ರಿಯದರ್ಶನ್ ಅವರನ್ನು ಬಹುವಾಗಿ ಗೌರವಿಸುತ್ತೇನೆ ಎಂದಿದ್ದಾರೆ. ತಾವು ಆ ಪಾತ್ರದಿಂದ ರಿಟೈರ್ ಆಗುತ್ತಿರುವುದಾಗಿ ಪರೇಶ್ ರಾವಲ್ ಹೇಳಿದ್ದರು.

ಇದನ್ನೂ ಓದಿ:ರೇಟಿಂಗ್ ಸಿಕ್ಕರೂ ಅಕ್ಷಯ್ ಕುಮಾರ್ ಚಿತ್ರಕ್ಕಿಲ್ಲ ಗೆಲುವು; ಕುಸಿಯಿತು ಮಾರುಕಟ್ಟೆ

ಇದು ನಿರ್ಮಾಣ ಸಂಸ್ಥೆ ಕೇಪ್ ಆಫ್ ಗುಡ್ ಹೋಪ್ ಫಿಲಮ್ಸ್​ಗೆ ಭಾರಿ ನಷ್ಟ ಉಂಟು ಮಾಡಿದೆ. ನಿರ್ಮಾಣ ಸಂಸ್ಥೆಯು ಈಗಾಗಲೇ ಸಿನಿಮಾಕ್ಕೆ ತಯಾರಿ ಆರಂಭಿಸಿತ್ತು. ಸಿನಿಮಾದ ಫೋಟೊಶೂಟ್ ಸಹ ಆಗಿತ್ತು. ಆದರೆ ಈಗ ಪರೇಶ್ ರಾವಲ್ ಸಿನಿಮಾದಿಂದ ಹೊರಗೆ ಹೋಗಿರುವುದು ನಿರ್ಮಾಣ ಸಂಸ್ಥೆಗೆ ಭಾರಿ ನಷ್ಟ ಉಂಟು ಮಾಡಿದೆ. ಇದೇ ಕಾರಣಕ್ಕೆ ನಿರ್ಮಾಣ ಸಂಸ್ಥೆಯು ಪರೇಶ್ ರಾವಲ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದು, ತಮಗೆ ಆಗಿರುವ ನಷ್ಟಕ್ಕೆ ಪರಿಹಾರ ಕೊಡಿಸುವಂತೆ ಮನವಿ ಮಾಡಿದೆ. ಬರೋಬ್ಬರಿ 25 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಡಲಾಗಿದೆ.

ಕೆಲ ವಾರಗಳ ಹಿಂದೆ ‘ಲಲ್ಲನ್​ಟಾಪ್’ ಯೂಟ್ಯೂಬ್ ಚಾನೆಲ್​ಗೆ ಸಂದರ್ಶನ ನೀಡಿದ್ದ ಪರೇಶ್ ರಾವಲ್, ‘ಹೇರಾ ಪೇರಿ’ಯ ಬಾಬು ಭಯ್ಯ ಪಾತ್ರದ ಬಗ್ಗೆ ಮಾತನಾಡುತ್ತಾ. ಆ ಪಾತ್ರ ಕೊರಳಿಗೆ ಸುತ್ತಿರುವ ನೇಣು ಹಗ್ಗದಂತೆ. ನನ್ನನ್ನು ಪದೇ ಪದೇ ಕೆಳಕ್ಕೆ ಎಳೆಯುತ್ತಲೇ ಇದೆ. ಆ ಪಾತ್ರದಿಂದ ನನಗೆ ಬಿಡುಗಡೆ ಬೇಕಾಗಿದೆ’ ಎಂದಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ