‘ಹೇರಾ ಫೇರಿ 3’ ಫ್ಯಾನ್ಸ್ಗೆ ಬಾಬುರಾವ್ ಶಾಕ್; ಚಿತ್ರದಿಂದ ಹೊರ ನಡೆದ ಪರೇಶ್ ರಾವಲ್
ಬಾಲಿವುಡ್‌ನ ಯಶಸ್ವಿ ಹೇರಾ ಫೇರಿ ಫ್ರಾಂಚೈಸ್‌ನ ಮೂರನೇ ಭಾಗದಿಂದ ಪರೇಶ್ ರಾವಲ್ ಹೊರನಡೆದಿದ್ದಾರೆ. ಭಿನ್ನಾಭಿಪ್ರಾಯಗಳಿಂದಾಗಿ ಅವರು ಚಿತ್ರದಿಂದ ಹಿಂದೆ ಸರಿದಿದ್ದಾರೆ. ಅಕ್ಷಯ್ ಕುಮಾರ್ ಚಿತ್ರದಲ್ಲಿದ್ದಾರೆ. ಪರೇಶ್ ರಾವಲ್ ಅವರ ಬಾಬುರಾವ್ ಪಾತ್ರದ ಅನುಪಸ್ಥಿತಿಯಿಂದ ಚಿತ್ರದ ಭವಿಷ್ಯ ಅನಿಶ್ಚಿತವಾಗಿದೆ. ಈ ಸುದ್ದಿ ಅಭಿಮಾನಿಗಳಲ್ಲಿ ನಿರಾಶೆಯನ್ನುಂಟುಮಾಡಿದೆ.

ಬಾಲಿವುಡ್‌ನ ಯಶಸ್ವಿ ಫ್ರಾಂಚೈಸ್ಗಳಲ್ಲಿ ‘ಹೇರಾ ಫೇರಿ’ (Hera Pheri) ಕೂಡ ಒಂದು. ಅಕ್ಷಯ್ ಕುಮರ್, ಸುನೀಲ್ ಶೆಟ್ಟಿ, ಪರೇಶ್ ರಾವಲ್ ಈ ಚಿತ್ರದಲ್ಲಿ ನಟಿಸಿದ್ದರು. ಈಗ ‘ಹೇರಾ ಫೇರಿ 3’ ಸಿನಿಮಾ ಬರುತ್ತಿದೆ. ಅಕ್ಷಯ್ ಕುಮಾರ್ ಆರಂಭದಲ್ಲಿ ಸಿನಿಮಾ ಮಾಡಲು ಒಪ್ಪಿರಲಿಲ್ಲ. ಆದರೆ, ಅವರ ಮನ ಒಲಿಸಿ ನಿರ್ಮಾಪಕರು ಚಿತ್ರಕ್ಕೆ ಅವರನ್ನು ಕರೆದುಕೊಂಡು ಬಂದಿದ್ದರು. ಈ ಬನ್ನೆಲ್ಲೇ ಬಾಬುರಾವ್ ಪಾತ್ರ ಮಾಡಿದ್ದ ಪರೇಶ್ ರಾವಲ್ ಚಿತ್ರದಿಂದ ಹೊರ ನಡೆದಿದ್ದಾರೆ. ಇದು ಅನೇಕರಿಗೆ ಶಾಕ್ ಎನಿಸಿದೆ.
ಬಾಬುರಾವ್ ಪಾತ್ರ ತುಂಬಾನೇ ಐಕಾನಿಕ್ ಎನಿಸಿಕೊಂಡಿದೆ. ಈ ಪಾತ್ರಕ್ಕೆ ಪರೇಶ್ ಬಿಟ್ಟು ಬೇರೆ ಯಾರು ಕೂಡ ಸರಿ ಹೊಂದುವುದಿಲ್ಲ. ‘ಹೇರಾ ಫೇರಿ’ ಹಾಗೂ ‘ಫಿರ್ ಹೇರಾ ಫೇರಿ’ ಚಿತ್ರಗಳಲ್ಲಿ ಇದು ಸಾಬೀತಾಗಿದೆ. ಮೂರನೇ ಪಾರ್ಟ್ನಿಂದ ಪರೇಶ್ ಹೊರ ನಡೆದಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈಗ ಇದು ನಿಜವಾಗಿದೆ. ಅವರು ಸಿನಿಮಾದಿಂದ ಹೊರ ನಡೆದ ವಿಚಾರವನ್ನು ಖಚಿತಪಡಿಸಿದ್ದಾರೆ.
ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಪರೇಶ್ ರಾವಲ್ ಅವರಿಗೆ ಈ ಬಗ್ಗೆ ಕೇಳಲಾಗಿದೆ. ಇದಕ್ಕೆ ಅವರು ‘ಅದೇ ಸತ್ಯ’ ಎಂದು ಹೇಳಿದ್ದಾರೆ. ಹಾಗಾದರೆ ಅವರು ಹೊರ ಹೋಗಿದ್ದು ಏಕೆ? ಇದಕ್ಕೆ ಮೂಲಗಳಿಂದ ಉತ್ತರ ಸಿಕ್ಕಿದೆ. ಸಿನಿಮಾ ನಿರ್ದೇಶಕರು ಹಾಗೂ ಪರೇಶ್ ಮಧ್ಯೆ ಕಥೆಯ ವಿಚಾರದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಬಂದಿವೆ. ಇದರ ಬಲದಾವಣೆಗೆ ತಂಡ ಒಪ್ಪದ ಕಾರಣ ಪರೇಶ್ ಅವರು ಸಿನಿಮಾದಿಂದಲೇ ಹಿಂದೆ ಸರಿದಿದ್ದಾರೆ.
ಆರಂಭದಲ್ಲಿ ಅಕ್ಷಯ್ ಕುಮಾರ್ ಅವರನ್ನು ಸಿನಿಮಾದಿಂದ ಹೊರಗಿಟ್ಟು ಕಾರ್ತಿಕ್ ಆರ್ಯನ್ ಅವರನ್ನು ಸಿನಿಮಾಗೆ ಸೇರ್ಪಡೆ ಮಾಡುವ ಆಲೋಚನೆ ತಂಡಕ್ಕೆ ಇತ್ತು. ಆದರೆ, ಈ ಆಲೋಚನೆ ಕೈ ಬಿಟ್ಟ ನಿರ್ಮಾಪಕರು ಅಕ್ಷಯ್ ಕುಮಾರ್ನ ಮನ ಒಲಿಸಿದ್ದರು. ಈಗ ಬಾಬುರಾವ್ ಪಾತ್ರದಲ್ಲಿ ಬೇರೆಯವರನ್ನು ಕಲ್ಪನೆ ಮಾಡಿಕೊಳ್ಳುವುದು ಅಭಿಮಾನಿಗಳಿಗೆ ಕಷ್ಟ ಎನಿಸುತ್ತಿದೆ.
ಇದನ್ನೂ ಓದಿ: ‘ಹೇರಾ ಫೇರಿ 3’ ಚಿತ್ರದಲ್ಲಿ ನಟಿಸಬೇಕಿತ್ತು ಕಾರ್ತಿಕ್ ಆರ್ಯನ್; ಆಮೇಲೇನಾಯ್ತು?
‘ಅಂದಾಜ್ ಅಪ್ನಾ ಅಪ್ನಾ’ ರೀ ರಿಲೀಸ್ ಸಂದರ್ಭದಲ್ಲಿ ಅಭಿಮಾನಿಯಿಬ್ಬರು ಈ ಬಗ್ಗೆ ಪ್ರಶ್ನೆ ಮಾಡಿದ್ದರು. ‘ಹೇರಾ ಫೇರಿ 3’ ಸಿನಿಮಾ ಬಗ್ಗೆ ಅಪ್ಡೇಟ್ ಕೇಳಿದ್ದರು. ‘ಸೂನ್ ಸೂನ್! ಬಿಫೋರ್ ದಿ ನೆಕ್ಸ್ಟ್ ಮಾನ್ಸೂನ್’ ಎಂದಿದ್ದರು. ಅಂದರೆ, ಮಾನ್ಸೂನ್ ಒಳಗೆ ಮಾಹಿತಿ ಸಿಗುತ್ತದೆ ಎಂದಿದ್ದರು. ಈಗ ಅದೇ ರೀತಿ ಆಗಿದೆ. ಈಗ ಪರೇಶ್ ಅವರೇ ಸಿನಿಮಾದಿಂದ ಹೊರ ನಡೆದಿರುವುದರಿಂದ ಚಿತ್ರ ಸೆಟ್ಟೇರುವುದೇ ಅನುಮಾನ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








