ಸಿನಿಮಾ ರಂಗದ ಹರಿಕಾರ ದಾದಾಸಾಹೇಬ್ ಫಾಲ್ಕೆ ಬಯೋಪಿಕ್‌ನಲ್ಲಿ ಜೂ.ಎನ್ಟಿಆರ್?
ಜೂನಿಯರ್ ಎನ್ಟಿಆರ್ ಅವರು 'ವಾರ್ 2', 'ಪ್ರಶಾಂತ್ ನೀಲ್' ನಿರ್ದೇಶನದ ಸಿನಿಮಾ ಮತ್ತು 'ದೇವರ 2' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅವರು ದಾದಾಸಾಹೇಬ್ ಫಾಲ್ಕೆ ಅವರ ಬಯೋಪಿಕ್‌ನಲ್ಲಿ ನಟಿಸುವ ಸುದ್ದಿ ಹೊರಬಿದ್ದಿದೆ. ಈ ಚಿತ್ರವನ್ನು ಎಸ್‌ಎಸ್ ರಾಜಮೌಳಿ ನಿರ್ಮಿಸಲಿದ್ದಾರೆ. ಈ ಬಯೋಪಿಕ್ ಭಾರತೀಯ ಚಿತ್ರರಂಗದ ಇತಿಹಾಸಕ್ಕೆ ಸಾಕ್ಷಿಯಾಗಲಿದೆ. ಜೂನಿಯರ್ ಎನ್ಟಿಆರ್ ಅವರ ಈ ಹೊಸ ಯೋಜನೆ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ಜೂನಿಯರ್ ಎನ್ಟಿಆರ್ (JR NTR) ಅವರು ಸದ್ಯ ‘ವಾರ್ 2’, ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಮತ್ತು ‘ದೇವರ 2’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಅವರು ಒಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನುವ ಬಗ್ಗೆ ವರದಿಗಳು ಹೊರ ಬಿದ್ದಿವೆ. ಅವರು ಭಾರತದಲ್ಲಿ ಸಿನಿಮಾ ಹುಟ್ಟಿಗೆ ಕಾರಣರಾದ ದಾದಾಸಾಹೇಬ್ ಫಾಲ್ಕೆ ಅವರ ಬಯೋಪಿಕ್‌ನಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೊಂದು ಪವರ್ಫುಲ್ ಬಯೋಪಿಕ್ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಈ ಚಿತ್ರವನ್ನು ನಿರ್ಮಾಣ ಮಾಡಲು ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ, ಅವರ ಮಗ ಕಾರ್ತಿಕೇಯ ಹಾಗೂ ಮ್ಯಾಕ್ಸ್ ಸ್ಟುಡಿಯೋ ವರುಣ್ ಗುಪ್ತಾ ಅವರು ರೆಡಿ ಆಗಿದ್ದಾರೆ. ರಾಜಮೌಳಿ ಅವರು ಈಗಾಗಲೇ ಜೂನಿಯರ್ ಎನ್ಟಿಆರ್ ಜೊತೆ ಮಾತುಕತೆ ನಡೆಸಿದ್ದಾರೆ. ಅವರು ಕೂಡ ಇದರಲ್ಲಿ ನಟಿಸಲು ಆಸಕ್ತಿ ತೋರಿಸಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ.
ಇನ್ನು ದಾದಾ ಸಾಹೇಬ್ ಫಾಲ್ಕೆ ಅವರ ಜೀವನವನ್ನು ತೆರೆಮೇಲೆ ತರೋದು ಅಷ್ಟು ಸುಲಭದ ಮಾತು ಅಲ್ಲವೇ ಅಲ್ಲ. ಇದು ಹಲವು ಚಾಲೆಂಜ್ಗಳನ್ನು ಒಳಗೊಂಡಿದೆ. ಇನ್ನು ಜೂನಿಯರ್ ಎನ್ಟಿಆರ್ ಅವರು ಮಾಸ್ ಸಿನಿಮಾಗಳ ಮೂಲಕ ಗಮನ ಸೆಳೆದವರು. ಅವರು ಈ ರೀತಿಯ ಪಾತ್ರವನ್ನು ಒಪ್ಪಿಕೊಂಡಾಗ ಜನರು ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಸದ್ಯದ ಪ್ರಶ್ನೆ.
ಇದನ್ನೂ ಓದಿ: ‘ದಾದಾಸಾಹೇಬ್ ಫಾಲ್ಕೆ’ ರೀತಿಯೇ ಡಾ. ರಾಜ್ ಹೆಸರಲ್ಲಿ ನೀಡುವ ಪ್ರಶಸ್ತಿ ಬಗ್ಗೆ ಹೊಸ ಕನಸು ಕಂಡಿದ್ದ ಪುನೀತ್
ದಾದಾ ಸಾಹೇಬ್ ಫಾಲ್ಕೆ ಅವರು 1870ರಲ್ಲಿ ಜನಿಸಿದರು. ದುಂಡಿರಾಜ್ ಗೋವಿಂದ ಫಾಲ್ಕೆ ಅನ್ನೋದು ಅವರ ಮೊದಲ ಹೆಸರು. 1903ರಲ್ಲಿ ಅವರು ಪುರಾತತ್ವ ಇಲಾಖೆಗೆ ಫೋಟೋಗ್ರಾಫರ್ ಆಗಿ ಸೇರಿದರು. ‘ಲೈಫ್ ಆಫ್ ಕ್ರಿಸ್ಟ್’ ಹೆಸರಿನ ಚಿತ್ರವನ್ನು 1910ರಲ್ಲಿ ನೋಡುವ ಅವರು ತಾವು ಸಿನಿಮಾ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಅಂತೆಯೇ 1913ರಲ್ಲಿ ‘ರಾಜಾ ಹರೀಶ್ಚಂದ್ರ’ ಹೆಸರಿನ ಸಿನಿಮಾನ ನಿರ್ದೇಶನ ಮಾಡಿದರು. ಇದು ಭಾರತದಲ್ಲಿ ಪ್ರದರ್ಶನಗೊಂಡ ಮೊದಲ ಪೂರ್ಣಪ್ರಮಾಣದ ಸಿನಿಮಾ. ಆ ಬಳಿಕ ಅವರು 95 ಸಿನಿಮಾಗಳನ್ನು ಮಾಡಿದರು. ಮೊದಲ ಚಿತ್ರ ಮಾಡಲು ಅವರು ತಮ್ಮ ಆಸ್ತಿಯನ್ನೆಲ್ಲ ಮಾರಿದ್ದರು. ಸಾಯುವಾಗ ಅವರು ತುಂಬಾನೇ ಬಡತನದಲ್ಲಿ ಸತ್ತರು. ಅವರನ್ನು ಈಗಲೂ ಭಾರತ ಚಿತ್ರರಂಗ ನೆನೆಪಿಸಿಕೊಳ್ಳುತ್ತದೆ. ಅವರ ಹೆಸರಲ್ಲಿ ಕೇಂದ್ರ ಸರ್ಕಾರ ಅವಾರ್ಡ್ ಕೂಡ ನೀಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.