ಸುಡು ಬೇಸಿಗೆಯಲ್ಲಿ ಬಡವರಿಗೆ ವಾಟರ್ ಕೂಲರ್ ನೀಡಿದ ನಟಿ ತಾಪ್ಸಿ ಪನ್ನು
ದೆಹಲಿಯ ಸ್ಲಂ ನಿವಾಸಿಗಳಿಗೆ ನಟಿ ತಾಪ್ಸಿ ಪನ್ನು ಅವರು ವಾಟರ್ ಕೂಲರ್ ವಿತರಿಸಿದ್ದಾರೆ. ಅವರ ಈ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಫ್ಯಾನ್ಸ್ ಸಹ ಇದೇ ರೀತಿ ಜನಪರ ಕಾರ್ಯಗಳನ್ನು ಮಾಡಲಿ ಎಂದು ತಾಪ್ಸಿ ಪನ್ನು ಅವರು ಬಯಸಿದ್ದಾರೆ. ಸಿನಿಮಾದ ಹೊರತಾಗಿ ಇಂಥ ಕೆಲಸಗಳಿಂದಲೂ ತಾಪ್ಸಿ ಮೆಚ್ಚುಗೆ ಪಡೆಯುತ್ತಿದ್ದಾರೆ.

ನಟಿ ತಾಪ್ಸಿ ಪನ್ನು (Taapsee Pannu) ಅವರು ಈಗ ಮೊದಲಿನಷ್ಟು ಬ್ಯುಸಿ ಆಗಿಲ್ಲ. ಮೊದಲಿಲ್ಲ ವರ್ಷಕ್ಕೆ ಹಲವು ಸಿನಿಮಾ ಮಾಡುತ್ತಿದ್ದ ಅವರು ಈಗ ಅಲ್ಲೊಂದು ಇಲ್ಲೊಂದು ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ಅದರ ನಡುವೆಯೂ ಅವರು ಜನಪರ ಕಾರ್ಯಗಳನ್ನು ಮಾಡುವುದು ಮರೆತಿಲ್ಲ. ಕೆಲವೇ ದಿನಗಳ ಹಿಂದೆ ತಾಪ್ಸಿ ಪನ್ನು ಅವರು ಸ್ಲಂ ನಿವಾಸಿಗಳಿಗೆ ಫ್ಯಾನ್ ವಿತರಣೆ ಮಾಡಿದ್ದರು. ಈಗ ವಾಟರ್ ಕೂಲರ್ (Water Cooler) ನೀಡಿದ್ದಾರೆ. ಅವರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಕೆಲವು ಫೋಟೋಗಳನ್ನು ತಾಪ್ಸಿ ಪನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಿರು ಬೇಸಿಗೆ ಇನ್ನೂ ಇದೆ. ಕೆಲವು ಕಡೆಗಳಲ್ಲಿ ಮಳೆ ಆಗುತ್ತಿದ್ದರೂ ಕೂಡ ಹಲವೆಡೆ ಸುಡು ಬಿಸಿಲು ಮುಂದುವರಿದಿದೆ. ದೆಹಲಿ ಮುಂತಾದ ನಗರದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಶ್ರೀಮಂತರು ಹೇಗೋ ಈ ಬೇಗೆಯಿಂದ ಬಚಾವ್ ಆಗುತ್ತಾರೆ. ಆದರೆ ಬಡವರ ಪಾಡು ಕಷ್ಟಕರ ಆಗಿರುತ್ತದೆ. ಹಾಗಾಗಿ ದೆಹಲಿಯ ಕೊಳಗೇರಿಗಳಿಗೆ ತೆರಳಿ ತಾಪ್ಸಿ ಪನ್ನು ಅವರು ವಾಟರ್ ಕೂಲರ್ ವಿವರಣೆ ಮಾಡಿದ್ದಾರೆ.
ಸಮಾಜಮುಖಿ ಕಾರ್ಯು ಮಾಡುತ್ತಿರುವ ಎನ್ಜಿಓ ಜೊತೆ ತಾಪ್ಸಿ ಪನ್ನು ಅವರು ಕೈ ಜೋಡಿಸಿದ್ದಾರೆ. ತಮ್ಮ ತಂಡದ ಜೊತೆ ಮನೆ ಮನೆಗೂ ತೆರಳಿ ಅವರು ವಾಟರ್ ಕೂಲರ್ಗಳನ್ನು ನೀಡಿದ್ದಾರೆ. ಸರಿಯಾದ ಸಮಯಕ್ಕೆ ಇಂಥ ಸಹಾಯ ಸಿಕ್ಕಿದ್ದಕ್ಕೆ ಬಡವರ ಮುಖದಲ್ಲಿ ನಗು ಅರಳಿದೆ. ತಾಪ್ಸಿ ಪನ್ನು ಅವರು ಮಾಡಿರುವ ಈ ಕೆಲಸ ಇತರರಿಗೂ ಸ್ಫೂರ್ತಿಯಾಗಿದೆ. ಅಭಿಮಾನಿಗಳು ತಾಪ್ಸಿ ಪನ್ನು ಅವರನ್ನು ಹೊಗಳುತ್ತಿದ್ದಾರೆ.
View this post on Instagram
ತಮ್ಮ ಅಭಿಮಾನಿಗಳು ಕೂಡ ಇದೇ ರೀತಿಯ ಸಮಾಜಮುಖಿ ಕಾರ್ಯ ಮಾಡಲಿ ಎಂದು ತಾಪ್ಸಿ ಪನ್ನು ಅವರು ನಿರೀಕ್ಷಿಸಿದ್ದಾರೆ. ಕಮೆಂಟ್ಗಳ ಮೂಲಕ ತಾಪ್ಸಿ ಪನ್ನು ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್ ಸಿನಿಮಾದಲ್ಲಿ ನನಗೆ ಕಡಿಮೆ ಸಂಬಳ ಕೊಟ್ಟರು: ಸ್ಟಾರ್ ನಟಿ ತಾಪ್ಸಿ
2010ರಿಂದಲೂ ತಾಪ್ಸಿ ಪನ್ನು ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಬಾಲಿವುಡ್ಗೆ ಮಾತ್ರ ಅವರು ಸೀಮಿತವಾಗಿಲ್ಲ. ಅವರು ವೃತ್ತಿ ಜೀವನದ ಆರಂಭಿಸಿದ್ದು ತೆಲುಗು ಸಿನಿಮಾ ಮೂಲಕ. ಆ ಬಳಿಕ ಅವರಿಗೆ ಮಲಯಾಳಂ, ತಮಿಳಿನಲ್ಲೂ ಅವಕಾಶ ಸಿಕ್ಕಿತು. ಇತ್ತೀಚಿನ ವರ್ಷಗಳಲ್ಲಿ ಅವರು ಸೌತ್ ಸಿನಿಮಾ ಬದಲು ಬಾಲಿವುಡ್ನಲ್ಲಿ ಸಕ್ರಿಯವಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








