ಹೊಸ ಸಿನಿಮಾಕ್ಕೆ ದೀಪಿಕಾ ಪಡೆಯುತ್ತಿದ್ದಾರೆ ದಾಖಲೆ ಮೊತ್ತದ ಸಂಭಾವನೆ, ಮೊತ್ತ ಎಷ್ಟು?
Deepika Padukone: ನಟಿ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೆ ತಾಯಿ ಆಗಿದ್ದಾರೆ. ತಾಯ್ತನದ ಕಾರಣ ಸುಮಾರು ಎರಡು ವರ್ಷಗಳಿಂದಲೂ ಅವರು ಚಿತ್ರೀಕರಣದಿಂದ ದೂರ ಉಳಿದಿದ್ದರು. ಇದೀಗ ಸಿನಿಮಾ ರಂಗಕ್ಕೆ ಮರಳುತ್ತಿದ್ದು, ರೀ ಎಂಟ್ರಿ ಸಿನಿಮಾಕ್ಕೆ ಭಾರಿ ಮೊತ್ತದ ಸಂಭಾವನೆಯನ್ನು ದೀಪಿಕಾ ಪಡುಕೋಣೆ ಪಡೆಯಲಿದ್ದಾರೆ.

ದೀಪಿಕಾ ಪಡುಕೋಣೆ (Deepika Padukone) ಸಿನಿಮಾ ಒಂದರಲ್ಲಿ ನಟಿಸಿ ಎರಡು ವರ್ಷಗಳಾಗುತ್ತಾ ಬಂದಿದೆ. ದೀಪಿಕಾ ಪಡುಕೋಣೆ ಕೊನೆಯದಾಗಿ ನಟಿಸಿದ ಸಿನಿಮಾ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ. ಆ ನಂತರ ಅವರು ತಾಯ್ತನಕ್ಕೆ ತೆರಳಿದರು. ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿರುವ ನಟಿ ದೀಪಿಕಾ ಪಡುಕೋಣೆ ಇದೀಗ ಮತ್ತೆ ಸಿನಿಮಾಕ್ಕೆ ಮರಳುತ್ತಿದ್ದಾರೆ. ತಾಯಿ ಆದ ಮೇಲೆ ನಟಿಯರಿಗೆ ಬೇಡಿಕೆ ಕಡಿಮೆ ಆಗುತ್ತದೆ ಎಂಬ ಮಾತು ಚಿತ್ರರಂಗದಲ್ಲಿದೆ. ಆದರೆ ದೀಪಿಕಾ ಪ್ರಕರಣದಲ್ಲಿ ಉಲ್ಟಾ ಆಗಿದೆ. ತಾಯಿ ಆದ ಮೇಲೆ ದೀಪಿಕಾರ ಸಂಭಾವನೆ ಬಹುತೇಕ ದುಪ್ಪಟ್ಟಾಗಿದೆ. ಸಂಭಾವನೆ ಪಡೆಯುವಲ್ಲಿ ಹೊಸ ದಾಖಲೆಯನ್ನೇ ಬರೆದಿದ್ದಾರೆ ನಟಿ.
ದೀಪಿಕಾ ಪಡುಕೋಣೆ ಚಿತ್ರರಂಗಕ್ಕೆ ಮರು ಎಂಟ್ರಿ ಕೊಡಲು ಸಜ್ಜಾಗಿದ್ದು, ದೇಹತೂಕ ಇಳಿಸುವ ಪ್ರಯತ್ನದಲ್ಲಿದ್ದಾರೆ. ಈಗಾಗಲೇ ದೀಪಿಕಾ ಪಡುಕೋಣೆಗೆ ಎರಡು ಸಿನಿಮಾ ಆಫರ್ಗಳು ಬಂದಿವೆ. ಮೊದಲನೇಯದ್ದು ಶಾರುಖ್ ಖಾನ್ ನಟನೆಯ ‘ಕಿಂಗ್’ ಮತ್ತು ಎರಡನೇಯದ್ದು ಪ್ರಭಾಸ್ ನಟನೆಯ ‘ಸ್ಪಿರಿಟ್’ ಎರಡೂ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರಂತೆ ನಟಿ ದೀಪಿಕಾ ಪಡುಕೋಣೆ.
ಅದರಲ್ಲಿಯೂ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾಕ್ಕೆ ಭಾರಿ ಸಂಭಾವನೆಯನ್ನು ದೀಪಿಕಾ ಪಡುಕೋಣೆ ಪಡೆದುಕೊಳ್ಳುತ್ತಿದ್ದಾರೆ. ‘ಸ್ಪಿರಿಟ್’ ಸಿನಿಮಾಕ್ಕೆ ದೀಪಿಕಾ ಪಡುಕೋಣೆಗೆ 20 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ. ಭಾರತದ ಇನ್ಯಾವುದೇ ನಟಿಯರು ಯಾವುದೇ ಚಿತ್ರರಂಗದಲ್ಲಿ ಇಷ್ಟು ದೊಡ್ಡ ಸಂಭಾವನೆಯನ್ನು ಈವರೆಗೆ ಪಡೆದಿದ್ದಲ್ಲ. ಆಲಿಯಾ ಭಟ್ಗೆ ಸಹ 10 ರಿಂದ 15 ಕೋಟಿ ಸಂಭಾವನೆ ನೀಡಲಾಗುತ್ತದೆ. ಆದರೆ ದೀಪಿಕಾ ತಮ್ಮ ಕಮ್ ಬ್ಯಾಕ್ ಸಿನಿಮಾಕ್ಕೆ 20 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ರಣಬೀರ್-ರಣವೀರ್ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆಯ ಪತಿ ರಣ್ವೀರ್ ಸಿಂಗ್ಗೆ ‘ಸಿಂಘಂ ಅಗೇನ್’ ಸಿನಿಮಾಕ್ಕೆ 10 ಕೋಟಿ ಅಷ್ಟೆ ನೀಡಲಾಗಿತ್ತಂತೆ. ಆದರೆ ದೀಪಿಕಾ, ಪತಿಯ ಸಂಭಾವನೆಯನ್ನೂ ಮೀರಿಸಿದ್ದಾರೆ. ‘ಸ್ಪಿರಿಟ್’ ಸಿನಿಮಾನಲ್ಲಿ ನಾಯಕನ ಪಾತ್ರಕ್ಕೆ ಇರುವಷ್ಟೆ ಪ್ರಾಧಾನ್ಯತೆ ನಾಯಕಿ ಪಾತ್ರಕ್ಕೂ ಇದ್ದು, ಇಬ್ಬರೂ ಸಹ ಸಮಾನ ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿದೆಯಂತೆ. ಇದೇ ಕಾರಣಕ್ಕೆ ಈ ಸಿನಿಮಾಕ್ಕೆ ದೀಪಿಕಾ ಪಡುಕೋಣೆಗೆ ಭಾರಿ ಮೊತ್ತದ ಸಂಭಾವನೆಯನ್ನು ಚಿತ್ರತಂಡ ನೀಡುತ್ತಿದೆ.
‘ಕಿಂಗ್’ ಮತ್ತು ‘ಸ್ಪಿರಿಟ್’ ಸಿನಿಮಾದ ಬಳಿಕ ಮತ್ತೆ ಪ್ರಭಾಸ್ ಜೊತೆಗೆ ‘ಕಲ್ಕಿ 2898 ಎಡಿ ಭಾಗ 2’ರಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ. ಈ ಸಿನಿಮಾನಲ್ಲಿ ಪ್ರಭಾಸ್ ಹಾಗೂ ಅಮಿತಾಬ್ ಬಚ್ಚನ್ ಸಹ ಇರಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




