ಅಕಾಯ್-ವಮಿಕಾ ಎಷ್ಟು ದೊಡ್ಡವರಾಗಿದ್ದಾರೆ ನೋಡಿ; ಮುದ್ದಾದ ವಿಡಿಯೋ ವೈರಲ್
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಮಕ್ಕಳಾದ ಅಕಾಯ್ ಮತ್ತು ವಮಿಕಾ ಅವರ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ತಮ್ಮ ತಾಯಿಯೊಂದಿಗೆ ಆಡುತ್ತಿರುವುದು ಕಾಣುತ್ತದೆ. ಮಕ್ಕಳ ಖಾಸಗಿತನವನ್ನು ರಕ್ಷಿಸಲು ಪ್ರಯತ್ನಿಸಿದರೂ, ಈ ವಿಡಿಯೋ ಲೀಕ್ ಆಗಿದೆ. ವಮಿಕಾ ಮತ್ತು ಅಕಾಯ್ ಅವರ ಬೆಳವಣಿಗೆಯನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ (Virat Kohli) ಅವರ ಮಕ್ಕಳಾದ ಅಕಾಯ್ ಹಾಗೂ ವಮಿಕಾ ಫೋಟೋ ಹಾಗೂ ವಿಡಿಯೋಗಳು ಶೇರ್ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಆದಾಗ್ಯೂ ಕೆಲವೊಮ್ಮೆ ವಿಡಿಯೋ ಹಾಗೂ ಫೋಟೋಗಳು ಲೀಕ್ ಆದ ಉದಾಹರಣೆ ಇದೆ. ಈಗ ಅನುಷ್ಕಾ ಶರ್ಮಾ ಅವರು ತಮ್ಮ ಹುಟ್ಟೂರಾದ ಉತ್ತರ ಪ್ರದೇಶದ ಅಯೋಧ್ಯೆಗೆ ತೆರಳಿದ್ದಾರೆ. ಈ ವೇಳೆ ಅನುಷ್ಕಾ ಅವರು ಮಕ್ಕಳನ್ನು ಎತ್ತಿ ಆಡಿಸಿರೋ ವಿಡಿಯೋ ವೈರಲ್ ಆಗಿದೆ.
ಅನುಷ್ಕಾ ಶರ್ಮಾ ಅವರು ತಾಯಿ ಮನೆಗೆ ಆಗಮಿಸಿದ್ದಾರೆ. ಈ ವೇಳೆ ಅನುಷ್ಕಾ ತಾಯಿ ಮೊಮ್ಮಗನನ್ನು ಎತ್ತಿಕೊಂಡಿದ್ದಾರೆ. ಈ ದಂಪತಿಯ ನಾಲ್ಕು ವರ್ಷದ ಮಗಳು ವಮಿಕಾ ಅಲ್ಲೇ ನಿಂತಿದ್ದಳು. ಅಮ್ಮನ ನೋಡುತ್ತಾ ಆಟ ಆಡುತ್ತಿದ್ದಳು. ಮಕ್ಕಳ ಮುಖ ರಿವೀಲ್ ಆಗಬಾರದು ಎಂದು ಅನುಷ್ಕಾ ಈ ಮೊದಲೇ ಕೋರಿಕೆ ಇಟ್ಟಿದ್ದರು. ಖುಷಿಯ ವಿಚಾರ ಎಂದರೆ ವಮಿಕಾ ಮುಖಕ್ಕೆ ಎಮೋಜಿ ಹಾಕಲಾಗಿದೆ. ಅಕಾಯ್ ಮುಖ ಎಲ್ಲಿಯೂ ಕಾಣಿಸಿಲ್ಲ.
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಎಷ್ಟೇ ಖಾಸಗಿತನ ಕಾಪಾಡಿಕೊಳ್ಳಬೇಕು ಎಂದರೂ ಅದು ಭಾರತದಲ್ಲಿ ಆಗುತ್ತಿಲ್ಲ. ಇದಕ್ಕೆ ಈಗ ಲೀಕ್ ಆಗಿರೋ ವಿಡಿಯೋ ಹೊಸ ಸಾಕ್ಷಿ ಆಗಿದೆ. ಫ್ಯಾನ್ ಪೇಜ್ಗಳಲ್ಲಿ ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ವಮಿಕಾ ಹಾಗೂ ಅಕಾಯ್ ತುಂಬಾನೇ ಬೆಳೆದಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಸದ್ಯ ಅನುಷ್ಕಾ ಮತ್ತು ವಿರಾಟ್ ಖಾಸಗಿತನ ಬೇಕು ಎಂದು ಲಂಡನ್ನಲ್ಲಿ ಸೆಟಲ್ ಆಗಿದ್ದಾರೆ.
View this post on Instagram
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು 2013ರಲ್ಲಿ ಜಾಹೀರಾತು ಶೂಟ್ನಲ್ಲಿ ಪರಸ್ಪರ ಭೇಟಿ ಆದರು. ಆ ಬಳಿಕ ಇಬ್ಬರಲ್ಲೂ ಪ್ರೀತಿ ಮೂಡಿತು. ಕೆಲ ವರ್ಷ ಡೇಟಿಂಗ್ ಮಾಡಿದ ಅನುಷ್ಕಾ ಹಾಗೂ ವಿರಾಟ್ 2017ರಲ್ಲಿ ವಿವಾಹ ಆದರು. ಇಟಲಿಯಲ್ಲಿ ಇವರ ವಿವಾಹ ನೆರವೇರಿತು. ಮಾಧ್ಯಮಗಳ ಕಣ್ಣು ತಪ್ಪಿಸಲು ಇವರು ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡರು.
ಇದನ್ನೂ ಓದಿ: ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಕೈಯಲ್ಲಿ ಎಲೆಕ್ಟ್ರಾನಿಕ್ ಉಂಗುರ; ಏನಿದರ ವಿಶೇಷತೆ?
2021ರ ಜನವರಿಯಲ್ಲಿ ವಮಿಕಾ ಜನಿಸಿದರೆ, 2024ರ ಫೆಬ್ರವರಿಯಲ್ಲಿ ಅಕಾಯ್ ಜನಿಸಿದ. ಅನುಷ್ಕಾ ಶರ್ಮಾ ಸದ್ಯ ಮಗುವಿನ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಅನುಷ್ಕಾ ನಟನೆಯ ‘ಚಕ್ದಾ ಎಕ್ಸ್ಪ್ರೆಸ್’ ಸಿನಿಮಾ ಬಗ್ಗೆ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








