ಮಾಧುರಿ ದೀಕ್ಷಿತ್ ರಿಯಾಲಿಟಿ ಶೋಗೆ ಪಡೆಯುತ್ತಾರೆ 25 ಕೋಟಿ ರೂಪಾಯಿ; ಒಟ್ಟೂ ಆಸ್ತಿ ಎಷ್ಟು?
ಮಾಧುರಿ ದೀಕ್ಷಿತ್ ಅವರು ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ನಟಿ. 70 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ ಅವರು, 250 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಚಲನಚಿತ್ರಗಳು, ಜಾಹೀರಾತುಗಳು ಮತ್ತು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಮೂಲಕ ಅವರು ತಮ್ಮ ಸಂಪತ್ತನ್ನು ಗಳಿಸಿದ್ದಾರೆ.

ಮಾಧುರಿ ದೀಕ್ಷಿತ್ (Madhuri Dixit) ಅವರು ಚಿತ್ರರಂಗಕ್ಕೆ ಅಪಾರ ಕೊಡಗೆ ನೀಡಿದ್ದಾರೆ. 70ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರು ಹಲವು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 1980ರ ದಶಕದಿಂದ ಇಂದಿನವರೆಗೂ ಅವರು ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಡ್ಯಾನ್ಸ್ ಕಂಡು ಬೆರಗಾಗದವರೇ ಇಲ್ಲ ಎಂದು ಹೇಳಿದರೂ ಅಚ್ಚರಿ ಏನಿಲ್ಲ. ಇಂದು (ಮೇ 15) ಮಾಧುರಿ ದೀಕ್ಷಿತ್ಗೆ ಬರ್ತ್ಡೇ. ಅವರಿಗೆ ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು, ಸೆಲೆಬ್ರಿಟಿಗಳು ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಾ ಇದ್ದಾರೆ. ಅವರ ಒಟ್ಟೂ ಆಸ್ತಿ ಬಗ್ಗೆ ನೋಡೋಣ.
ಮಾಧುರಿ ದೀಕ್ಷಿತ್ ಅವರು ಕೇವಲ 17ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟರು. ಅವರಿಗೆ ಈಗ 56 ವರ್ಷ. ಆದಾಗ್ಯೂ ಇನ್ನೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಮಾಧುರಿ ದೀಕ್ಷಿತ್ ಅವರ ಒಟ್ಟೂ ಆಸ್ತಿ 250 ಕೋಟಿ ರೂಪಾಯಿಗೂ ಅಧಿಕವಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಚಿತ್ರಕ್ಕೆ ಅವರು 4-5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಮಾಧುರಿ ದೀಕ್ಷಿತ್ ಅವರು ಡ್ಯಾನ್ಸ್ನಲ್ಲಿ ಪಳಗಿದ್ದಾರೆ. ಅವರು ಹಲವು ಹಿಟ್ ಸಾಂಗ್ಗಳನ್ನು ನೀಡಿದರು. ಹೀಗಾಗಿ, ಡ್ಯಾನ್ಸ್ ರಿಯಾಲಿಟಿ ಶೋಗೆ ಅವರು ಜಡ್ಜ್ ಆದ ಉದಾಹರಣೆ ಇದೆ.
ರಿಯಾಲಿಟಿ ಶೋ ಜಡ್ಜ್ ಆಗಲು ಪ್ರತಿ ಸೀಸನ್ಗೆ 25 ಕೋಟಿ ರೂಪಾಯಿ ಹಾಗೂ ಒಂದು ಜಾಹೀರಾತಿನಲ್ಲಿ ನಟಿಸಲು 8 ಕೋಟಿ ರೂಪಾಯಿ ಪಡೆಯುತ್ತಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅವರು ಬೇರೆ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡಿರುವುದರಿಂದ ಅವರ ಆಸ್ತಿ ಹೆಚ್ಚಿದೆ.
ಇದನ್ನೂ ಓದಿ: 17ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಮಾಧುರಿ ದೀಕ್ಷಿತ್ ಸಲ್ಲುಗಿಂತ ಜಾಸ್ತಿ ಸಂಭಾವನೆ ಪಡೆದರು
ಇದು ಒಟಿಟಿ ಜಮಾನಾ. ಅನೇಕ ನಟ-ನಟಿಯರ ರೀತಿಯಲ್ಲಿ ಮಾಧುರಿ ದೀಕ್ಷಿತ್ ಕೂಡ ವೆಬ್ ಸರಣಿಯಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದರು. ಅವರ ನಟನೆಯ ‘ದಿ ಫೇಮ್ ಗೇಮ್’ ವೆಬ್ ಸರಣಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಇದು ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಆಯಿತು. ಆದರೆ, ಈ ಸರಣಿ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಇತ್ತೀಚೆಗೆ ಅವರು ‘ಭೂಲ್ ಭುಲಯ್ಯ 3’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಮಿಶ್ರಪ್ರತಿಕ್ರಿಯೆ ಮಧ್ಯೆಯೂ ಒಳ್ಳೆಯ ಗಳಿಕೆ ಮಾಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:06 am, Thu, 15 May 25







