AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

17ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಮಾಧುರಿ ದೀಕ್ಷಿತ್ ಸಲ್ಲುಗಿಂತ ಜಾಸ್ತಿ ಸಂಭಾವನೆ ಪಡೆದರು

Madhuri Dixit Birthday: ಮಾಧುರಿ ದೀಕ್ಷಿತ್ ಅವರಿಗೆ ಇಂದು ಜನ್ಮದಿನ. 17ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿದ ಅವರು, 'ತೇಜಾಬ್' ಮತ್ತು 'ಹಮ್ ಆಪ್ಕೆ ಹೈ ಕೌನ್' ಮುಂತಾದ ಚಿತ್ರಗಳ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದರು. ಸಲ್ಮಾನ್ ಖಾನ್ ಗಿಂತ ಹೆಚ್ಚು ಸಂಭಾವನೆ ಪಡೆದ ಅವರು ಇಂದಿಗೂ ಚಿತ್ರರಂಗ ಮತ್ತು ಟಿವಿಯಲ್ಲಿ ಸಕ್ರಿಯರಾಗಿದ್ದಾರೆ.

17ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಮಾಧುರಿ ದೀಕ್ಷಿತ್ ಸಲ್ಲುಗಿಂತ ಜಾಸ್ತಿ ಸಂಭಾವನೆ ಪಡೆದರು
ಮಾಧುರಿ-ಸಲ್ಮಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: May 15, 2025 | 7:47 AM

Share

ಮಾಧುರಿ ದೀಕ್ಷಿತ್ (Madhuri Dixit) ಅವರಿಗೆ ಇಂದು (ಮೇ 15) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಮಾಧುರಿ ದೀಕ್ಷಿತ್ ಅವರು ಇತ್ತೀಚೆಗೆ ಅಷ್ಟಾಗಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿಲ್ಲದೇ ಇರಬಹುದು. ಆದರೆ, ಸಾಲು ಸಾಲು ಚಿತ್ರಗಳನ್ನು ನೀಡಿ ಒಂದು ಕಾಲದಲ್ಲಿ ಭರ್ಜರಿ ಫೇಮಸ್ ಆಗಿದ್ದರು. ವಿಶೇಷ ಎಂದರೆ ಸಲ್ಮಾನ್ ಖಾನ್ ಅವರಿಗಿಂತ ಹೆಚ್ಚಿನ ಸಂಭಾವನೆ ಪಡೆದು ಅವರು ಗಮನ ಸೆಳೆದಿದ್ದರು. ಇದು ಅವರ ಹೆಚ್ಚುಗಾರಿಕೆ ಎಂದೇ ಹೇಳಬಹುದು.

ಮಾಧುರಿ ದೀಕ್ಷಿತ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಕೇವಲ 17ನೇ ವಯಸ್ಸಿಗೆ ಅನ್ನೋದು ನಿಮಗೆ ಗೊತ್ತಾ? ಅವರು ನಟಿಸಿದ ಮೊದಲ ಸಿನಿಮಾ ‘ಅಬೋದ್’. ಈ ಚಿತ್ರವು 1984ರಲ್ಲಿ ತೆರೆಗೆ ಬಂತು. ಅಂದರೆ ಸರಿಯಾಗಿ 41 ವರ್ಷಗಳ ಹಿಂದೆ ಮಾಧುರಿ ಅವರು ಬಣ್ಣದ ಲೋಕವನ್ನು ಪ್ರವೇಶ ಮಾಡಿದ್ದರು. ಆ ಬಳಿಕ ಅವರು ನಟಿಸಿದ್ದು ‘ತೇಜಾಬ್’ ಚಿತ್ರದಲ್ಲಿ. ಇದರ ‘ಏಕ್​ ದೋ ತೀನ್​..’ ಹಾಡು ಸೂಪರ್​ ಹಿಟ್ ಎನಿಸಿಕೊಂಡಿತು. ಆ ಬಳಿಕ ಮಾಧುರಿ ಅವರು ದೇಶಾದ್ಯಂತ ಜನಪ್ರಿಯತೆ ಪಡೆದರು. ರಾತ್ರೋ ರಾತ್ರಿ ಅವರು ಸ್ಟಾರ್ ಆಗಿ ಬಿಟ್ಟರು. ಮಾಧುರಿ ಅವರನ್ನು ಯಾರೂ ಹಿಡಿಯುವವರೇ ಇರಲಿಲ್ಲ.

80ರ ದಶಕದಲ್ಲಿ ಬಾಲಿವುಡ್​ನಲ್ಲಿ ಶ್ರೀದೇವಿ ದೊಡ್ಡ ಹೆಸರು ಮಾಡಿದ್ದರು. ಅವರಿಗೆ ಸರಿಸಾಟಿಯಾಗಿ ನಿಲ್ಲವಷ್ಟು ಜನಪ್ರಿಯತೆ ಮಾಧುರಿ ದೀಕ್ಷಿತ್ ಅವರಿಗೆ ಇತ್ತು. ಇಲ್ಲಿ ಅವರು ಕೇವಲ ಗ್ಲಾಮರ್ ಪಾತ್ರಗಳ ಬದಲು ನಟನೆಗೆ ತೂಕ ಇರೋ ಸಿನಿಮಾಗಳನ್ನು ಒಪ್ಪಿಕೊಂಡ ಕಾರಣಕ್ಕೆ ಬೇಗ ಜನಪ್ರಿಯತೆ ಪಡೆದರು ಅವರು. ‘ಆಜ ನಚಲೇ’ ಮತ್ತು ‘ಗುಲಾಬ್​ ಗ್ಯಾಂಗ್’​ ಸಿನಿಮಾಗಳವರೆಗೂ ಅವರು ಇದೇ ಸೂತ್ರವನ್ನು ಅನುಸರಿಸಿಕೊಂಡು ಬಂದರು.

ಇದನ್ನೂ ಓದಿ
Image
ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಿದ ರಕ್ಷಕ್ ಬುಲೆಟ್; ತಂದೆಯೇ ಕಾರಣ
Image
ಸಿನಿಮಾ ರಂಗದ ಹರಿಕಾರ ದಾದಾಸಾಹೇಬ್ ಫಾಲ್ಕೆ ಬಯೋಪಿಕ್​ನಲ್ಲಿ ಜೂ.ಎನ್​ಟಿಆರ್?
Image
ಅನುಷ್ಕಾ-ವಿರಾಟ್ ಕೈಯಲ್ಲಿ ಎಲೆಕ್ಟ್ರಾನಿಕ್ ಉಂಗುರ; ವಿಶೇಷತೆ ಏನು?
Image
ಉಪೇಂದ್ರ ನಿರ್ದೇಶನಕ್ಕೆ ನಾನು ದೊಡ್ಡ ಫ್ಯಾನ್ ಎಂದ ರಜನಿ ಸಿನಿಮಾ ಡೈರೆಕ್ಟರ್

ಇದನ್ನೂ ಓದಿ: ಅನುಷ್ಕಾ-ವಿರಾಟ್ ಲಂಡನ್​ನಲ್ಲಿ ಸೆಟಲ್ ಆಗಿದ್ದೇಕೆ? ಮಾಧುರಿ ದೀಕ್ಷಿತ್ ಪತಿಯಿಂದ ಮಾಹಿತಿ ರಿವೀಲ್

1994ರಲ್ಲಿ ‘ಹಮ್​ ಆಪ್ಕೆ ಹೈ ಕೌನ್’​ ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಮಾಧುರಿ ದೀಕ್ಷಿತ್ ಒಟ್ಟಿಗೆ ನಟಿಸಿದ್ದರು. ಸಲ್ಲು ಕೂಡ ಜನಪ್ರಿಯತೆ ಪಡೆದಿದ್ದರು. ಈ ಸಿನಿಮಾದಲ್ಲಿ ಸಲ್ಮಾನ್​ ಖಾನ್​ಗಿಂತಲೂ ಹೆಚ್ಚು ಸಂಭಾವನೆಯನ್ನು ಮಾಧುರಿಗೆ ನೀಡಲಾಗಿತ್ತಂತೆ ಅನ್ನೋದು ಅಚ್ಚರಿಯ ವಿಚಾರ. ಮಾಧುರಿಗೆ ಅಂದು ಇದ್ದ ಬೇಡಿಕೆಗೆ ಸಾಕ್ಷಿ ಇದು. ಇಂದಿಗೂ ಡ್ಯಾನ್ಸ್​ ಸಂಬಂಧಿತ ಟಿವಿ ಕಾರ್ಯಕ್ರಮಗಳ ಜಡ್ಜ್​ ಆಗಿ ಅವರು ಕೆಲಸ ಮಾಡುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಮಾಧುರಿಗೆ ಇಂದು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಅವರು ‘ಭೂಲ್ ಭುಲಯ್ಯ 3’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!