ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
‘ಕಾಮಿಡಿ ಕಿಲಾಡಿಗಳು’ ಮೂಲಕ ಫೇಮಸ್ ಆಗಿದ್ದ ನಟ ರಾಕೇಶ್ ಪೂಜಾರಿ ನಿಧನದಿಂದ ಆಪ್ತರಿಗೆ ಹಾಗೂ ಅಭಿಮಾನಿಗಳಿಗೆ ತುಂಬಾ ನೋವಾಗಿದೆ. ರಾಕೇಶ್ ಜತೆಗಿನ ಒಡನಾಟವನ್ನು ಸ್ನೇಹಿತ ಸೀರುಂಡೆ ರಘು ಅವರು ನೆನಪಿಸಿಕೊಂಡಿದ್ದಾರೆ. ರಾಕೇಶ್ ಅವರಿಗೆ ಹೃದಯಾಘಾತ ಆಗಿದೆ ಎಂದಾಗ ನಂಬಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ (Rakesh Poojary) ನಿಧನದಿಂದ ಆಪ್ತರಿಗೆ ಮತ್ತು ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ರಾಕೇಶ್ ಜೊತೆಗಿನ ಒಡನಾಟವನ್ನು ಸ್ನೇಹಿತರು ನೆನಪಿಸಿಕೊಳ್ಳುತ್ತಿದ್ದಾರೆ. ‘ರಾಕೇಶ್ಗೆ ತುಂಬ ಎನರ್ಜಿ ಇತ್ತು. ಸದಾ ಆ್ಯಕ್ಟೀವ್ ಆಗಿ ಇರುತ್ತಿದ್ದ. ಅವನಿಗೆ ಹಾರ್ಟ್ ಅಟ್ಯಾಕ್ ಆಯ್ತು ಎಂದರೆ ನಂಬೋಕೆ ಆಗಲಿಲ್ಲ. ಮೊದಲೆಲ್ಲ ವಯಸ್ಸಾದವರಿಗೆ ಹೃದಯಾಘಾತ (Heart Attack) ಆಗುತ್ತಿತ್ತು. ಈಗ 33 ವರ್ಷದವರಿಗೆ ಈ ರೀತಿ ಆಗಿದೆ. ಎಲ್ಲರನ್ನೂ ರಾಕೇಶ್ ನಗಿಸುತ್ತಿದ್ದ. ಈಗ ನಮ್ಮನ್ನೆಲ್ಲ ಬಿಟ್ಟು ಹೊರಟು ಹೋದ. ಅವನ ಜೊತೆ ಆಪ್ತವಾಗಿದ್ದವರಿಗೆ ಎಷ್ಟು ನೋವಾಗಿರಬಹುದು. ಅದನ್ನು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಸೀರುಂಡೆ ರಘು (Seerunde Raghu) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ

ವಿಶ್ವಾಸ್ ಕುಮಾರ್ ರಮೇಶ್ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು

ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ

ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
