ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುವುದಕ್ಕೂ ಮುನ್ನವೇ ಧರ್ಮ ಕೀರ್ತಿರಾಜ್ ಮತ್ತು ಅನುಷಾ ಅವರು ಪರಿಚಿತರಾಗಿದ್ದರು. ಆದರೆ ಅವರ ನಡುವೆ ಮನಸ್ತಾಪ ಆಗಿತ್ತು. ಬ್ರೇಕಪ್ ಕೂಡ ಆಗಿತ್ತಾ ಎಂಬ ಅನುಮಾನ ಕೆಲವರಿಗೆ ಇದೆ. ಆ ಬಗ್ಗೆ ಸ್ವತಃ ಧರ್ಮ ಕೀರ್ತಿರಾಜ್ ಅವರು ಈಗ ಮಾತನಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಿಂದ ಎಲಿಮಿನೇಟ್ ಆದ ಬಳಿಕ ಅವರು ‘ಟಿವಿ 9’ ಜೊತೆ ಮಾತನಾಡಿ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.