AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ

‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ

Mangala RR
| Edited By: |

Updated on: Feb 12, 2026 | 10:13 PM

Share

‘WTC ಉತ್ಸವ’ ಮಹಿಳೆಯರ ಕ್ರಿಕೆಟ್ ಟೂರ್ನಮೆಂಟ್ ಇತ್ತೀಚೆಗೆ ನಡೆದಿತ್ತು. ಅದರಲ್ಲಿ ಹಲವು ನಟಿಯರು ಭಾಗಿಯಾಗಿದ್ದರು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಂಥನಾ ಕೂಡ ಈ ಟೂರ್ನಿಯಲ್ಲಿ ಆಟ ಆಡಿದ್ದರು. ಆ ಟೂರ್ನಿ ಮುಗಿಸಿ ಮನೆಗೆ ತೆರಳುವಾಗ ಮಂಥನಾ ಅವರ ಕಾರಿಗೆ ಅಪಘಾತ ಆಯಿತು.

ಇತ್ತೀಚೆಗೆ WTC ಉತ್ಸವ (WTC Utsava) ಎಂಬ ಹೆಸರಿನಲ್ಲಿ ಮಹಿಳೆಯರ ಕ್ರಿಕೆಟ್ ಟೂರ್ನಮೆಂಟ್ ನಡೆದಿತ್ತು. ಅದರಲ್ಲಿ ಹಲವು ನಟಿಯರು ಭಾಗಿಯಾಗಿದ್ದರು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಂಥನಾ ಕೂಡ ಆಟ ಆಡಿದ್ದರು. ಆ ಟೂರ್ನಿ ಮುಗಿಸಿ ಮನೆಗೆ ತೆರಳುವಾಗ ಮಂಥನಾ ಅವರ ಕಾರಿಗೆ ಅಪಘಾತ (Accident) ಆಯಿತು. ‘WTC ಉತ್ಸವ’ ಆಯೋಜಕರು ಆ ಸಂದರ್ಭದಲ್ಲಿ ಕಾಳಜಿ ತೋರಿಸಿಲ್ಲ ಎಂದು ಮಂಥನಾ (Manthana) ಆರೋಪಿಸಿದ್ದಾರೆ. ‘ಅಪಘಾತ ಆದ ಬಳಿಕ ನಾವು ಪೊಲೀಸ್ ಠಾಣೆಗೆ ಹೋಗಿದ್ದೆವು. ಆ ಸಮಯದಲ್ಲಿ ಆಯೋಜಕರು ಯಾರೂ ಕೂಡ ನಮ್ಮ ಬಗ್ಗೆ ಕಾಳಜಿ ವಹಿಸಿಲ್ಲ. ಹಣದ ಸಲುವಾಗಿ ನಾನು ಧ್ವನಿ ಎತ್ತಿಲ್ಲ. ಅವರು ಮಾನವೀಯತೆಯ ದೃಷ್ಟಿಯಿಂದಲೂ ಒಂದು ಮಾತು ವಿಚಾರಿಸಿಲ್ಲ. ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಸುರಕ್ಷತೆ ಇಲ್ಲ ಎಂದರೆ ಇವರು ಈ ರೀತಿ ಟೂರ್ನಮೆಂಟ್ ಮಾಡಬಾರದು’ ಎಂದು ಮಂಥನಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.