AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲೀಸ್​ಗೆ ತಿಂಗಳಿರುವಾಗ ‘ಟಾಕ್ಸಿಕ್​​’ಗೆ ಸಂಕಷ್ಟ; ಧರ್ಮದ ವಿಷಯದಲ್ಲಿ ಬಂತು ತೊಂದರೆ

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್ ಭಾರೀ ವಿವಾದ ಸೃಷ್ಟಿಸಿದೆ. ಟೀಸರ್‌ನಲ್ಲಿನ ಅಡಲ್ಟ್ ಹಾಗೂ ಕ್ರೈಸ್ತ ಧರ್ಮಕ್ಕೆ ಅಪಮಾನವಾಗುವ ದೃಶ್ಯಗಳ ಬಗ್ಗೆ ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಷನ್ ಆಕ್ಷೇಪ ವ್ಯಕ್ತಪಡಿಸಿದೆ. ದೇವದೂತ ಸಂತ ಮಿಕಯೇಲ್​ಗೆ ಅವಮಾನವಾಗಿದೆ ಎಂದು ಆರೋಪಿಸಿ, ದೃಶ್ಯಗಳನ್ನು ತೆಗೆದುಹಾಕಲು ಮತ್ತು ಕ್ಷಮೆ ಕೇಳುವಂತೆ ದೂರು ನೀಡಿದೆ.

ರಿಲೀಸ್​ಗೆ ತಿಂಗಳಿರುವಾಗ ‘ಟಾಕ್ಸಿಕ್​​’ಗೆ ಸಂಕಷ್ಟ; ಧರ್ಮದ ವಿಷಯದಲ್ಲಿ ಬಂತು ತೊಂದರೆ
ಯಶ್
Mangala RR
| Edited By: |

Updated on: Feb 11, 2026 | 12:55 PM

Share

‘ಟಾಕ್ಸಿಕ್’ ಸಿನಿಮಾದ (Toxic Movie) ಟೀಸರ್ ಸೃಷ್ಟಿಸಿದ ಹಲ್​ಚಲ್​ ತುಂಬಾನೇ ದೊಡ್ಡದು. ಈ ಟೀಸರ್​​ನಲ್ಲಿ ಅಡಲ್ಟ್ ದೃಶ್ಯಗಳು ಇವೆ ಎಂದು ಅನೇಕರು ಕೊಂಕು ತೆಗೆದಿದ್ದರು. ಈಗ ಕ್ರೈಸ್ತ ಸಮುದಾಯದವರು ಈ ಸಿನಿಮಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಷನ್ (ಎನ್​​ಸಿಎಫ್) ಟಾಕ್ಸಿಕ್ ಸಿನಿಮಾ ವಿರುದ್ಧ ದೂರು ದಾಖಲು ಮಾಡಿದೆ. ಸಿನಿಮಾದ ದೃಶ್ಯಗಳಲ್ಲಿ ಕ್ರೈಸ್ತರಿಗೆ ಮುಜುಗರ ಹಾಗೂ ಧರ್ಮಕ್ಕೆ ಅಪಮಾನವಾಗಿದೆ ಎಂದು ಆರೋಪಿಸಲಾಗಿದೆ.

‘ಟಾಕ್ಸಿಕ್’ ಸಿನಿಮಾ ಟೀಸರ್ ಜನವರಿ 8ರಂದು ರಿಲೀಸ್ ಆಯಿತು. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ನಟಿಸಿದ್ದಾರೆ. ಈ ಚಿತ್ರದ ಟೀಸರ್ ನೋಡಿ ಅಪಸ್ವರ ಶುರುವಾಗಿದೆ. ಜೊತೆಗೆ ಸಿನಿಮಾಗೆ ಮತ್ತೊಂದು ಅಡಚಣೆ ಬರೋ ಸೂಚನೆ ಸಿಕ್ಕಿದೆ. ಟೀಸರ್ ಅಲ್ಲಿ ಕಥಾ ನಾಯಕ ರಾಯ ಕಾರಲ್ಲಿ ಲೈಂಗಿಕ ಕ್ರಿಯೆ ನಡೆಸೋ ದೃಶ್ಯ ಇದೆ. ಇದರಿಂದ ಕಾರು ಅಲುಗಾಡುತ್ತದೆ. ಕಾರು ಅಲುಗಾಡಿ ಡೆಟೋನೇಟರ್ ಮೂಲಕ ಬಾಂಬ್ ಸಿಡಿಸಲಾಗುತ್ತದೆ. ಕಾರಿನ ದೃಶ್ಯದ ವಿಷಯದಲ್ಲಿ ಕೊಂಕು ತೆಗೆಯಲಾಗಿದೆ.

ಸಿನಿಮಾದಲ್ಲಿ ದೇವದೂತ ಸಂತ ಮಿಕಯೇಲ್​ಗೆ ಅಪಮಾನ ಮಾಡಲಾಗಿದೆ ಎಂಬುದು ಕ್ರೈಸ್ತ ಸಮುದಾಯದವರು ದೂರು. ‘ದೇವದೂತರ ಮುಂದೆ ಅಶ್ಲೀಲ ಚಿತ್ರೀಕರಿಸಿದ್ದಾರೆ. ಯೂಟ್ಯೂಬ್ ಪೋಸ್ಟ್ ತೆಗೆಯಬೇಕು, ದೃಶ್ಯಗಳನ್ನ ತೆಗೆಯಬೇಕು’ ಎಂದು ದೂರಿನಲ್ಲಿ ಕೋರಲಾಗಿದೆ. ಕ್ರೈಸ್ತರ ಒಕ್ಕೂಟ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ದಾಖಲು ಮಾಡಿದೆ.

ಇದನ್ನೂ ಓದಿ: ಅಬ್ಬಬ್ಬಾ, ಯಶ್ ಬುದ್ಧಿವಂತಿಕೆ ಮೆಚ್ಚಲೇಬೇಕು; ಈ ಡೀಲ್​​​ನಿಂದ ‘ಟಾಕ್ಸಿಕ್​​’ಗೆ ದೊಡ್ಡ ಲಾಭ

ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹಸಚಿವರು, ಸೆನ್ಸರ್ ಬೋರ್ಡ್​​ಗೂ ದೂರು ನೀಡಲಾಗಿದೆ. ಕ್ರೈಸ್ತರ ಕ್ಷಮೆ ಕೇಳಬೇಕು ಎಂದು ಒತ್ತಾಯ ಮಾಡಲಾಗಿದೆ. ಅಲ್ಲದೆ, ಸಿನಿಮಾ ವಿರುದ್ದ ಕಾನೂನು ಹೋರಾಟದ ಎಚ್ಚರಿಕೆ ನೀಡಲಾಗಿದೆ. ಸಾಮಾನ್ಯವಾಗಿ ಈ ರೀತಿಯ ದೃಶ್ಯಗಳನ್ನು ಮಾಡಿ ಮೊದಲೇ ಚರ್ಚೆ ಆದರೆ ಸೆನ್ಸಾರ್ ವೇಳೆ ಆ ವಿಷಯವನ್ನು ಮಂಡಳಿಯವರು ಗಂಭೀರವಾಗಿ ಸ್ವೀಕರಿಸೋ ಸಾಧ್ಯತೆ ಇರುತ್ತದೆ. ‘ಟಾಕ್ಸಿಕ್’ ವಿಷಯದಲ್ಲೂ ಹಾಗೆಯೇ ಆಗುತ್ತದೆಯೇ ಎಂಬ ಅನುಮಾನ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.