ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಿದ ರಕ್ಷಕ್ ಬುಲೆಟ್; ತಂದೆಯ ಕಾರಣಕ್ಕೆ ಈ ನಿರ್ಧಾರ
ರಕ್ಷಕ್ ಬುಲೆಟ್ ಅವರು ಜೀ ಕನ್ನಡದ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ರಲ್ಲಿ ತಮ್ಮ ಯಕೃತ್ ದಾನ ಮಾಡುವ ಪ್ರತಿಜ್ಞೆಯನ್ನು ಮಾಡಿದ್ದಾರೆ. ತಂದೆಗೆ ಬಂದ ಪರಿಸ್ಥಿತಿ ನೆನೆದು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ನಿರ್ಧಾರಕ್ಕೆ ರಚಿತಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಮೋಲಾ ಕೂಡ ಅವರನ್ನು ಅನುಸರಿಸಿ ಯಕೃತ್ ದಾನ ಮಾಡಲು ನಿರ್ಧರಿಸಿದ್ದಾರೆ.

ನಟ ರಕ್ಷಕ್ ಬುಲೆಟ್ (Rakshak Bullet) ಅವರು ಎಷ್ಟೇ ಟ್ರೋಲ್ ಆದರೂ ಕೆಲವೊಮ್ಮೆ ಜನರಿಗೆ ಇಷ್ಟ ಆಗುವ ಕೆಲಸ ಮಾಡುತ್ತಾರೆ. ಆಗ ಅನೇಕರು ರಕ್ಷಕ್ ಬುಲೆಟ್ ಅವರನ್ನು ಹೊಗಳಿದ ಉದಾಹರಣೆ ಇದೆ. ಈಗ ರಕ್ಷಕ್ ಕಡೆಯಿಂದ ಒಂದೊಳ್ಳೆಯ ಕೆಲಸ ಆಗಿದೆ. ಇದನ್ನು ಎಲ್ಲರೂ ಹೊಗಳುತ್ತಿದ್ದಾರೆ. ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಅವರು ಇಂಥ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅವರ ಕಾರ್ಯಕ್ಕೆ ಎಲ್ಲ ಕಡೆಗಳಿಂದ ಶ್ಲಾಘನೆ ವ್ಯಕ್ತವಾಗಿದೆ.
ಪುನೀತ್ ರಾಜ್ಕುಮಾರ್, ಲೋಕೇಶ್, ರಾಜ್ಕುಮಾರ್, ಸಂಚಾರಿ ವಿಜಯ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕರು ಅಂಗಾಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದರು. ಅಂತೆಯೇ ಅವರು ಸತ್ತ ಬಳಿಕ ಅದನ್ನು ದಾನ ಮಾಡಲಾಯಿತು. ಈ ಸೆಲೆಬ್ರಿಟಿಗಳನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಅನೇಕರು ಅಂಗಾಗ ದಾನ ಮಾಡಲು ಮುಂದೆ ಬಂದ ಉದಾಹರಣೆ ಇದೆ. ಇದರಿಂದ ಎಷ್ಟೋ ಜನರಿಗೆ ಸಹಾಯ ಆಗಿದೆ. ಈಗ ರಕ್ಷಕ್ ಬುಲೆಟ್ ಕೂಡ ತಮ್ಮ ಲಿವರ್ನ ಬೇರೆಯವರಿಗೆ ಕೊಡೋದಾಗಿ ಪ್ರತಿಜ್ಞೆ ಮಾಡಿದ್ದಾರೆ. ಇದು ಅವರ ಹೆಚ್ಚುಗಾರಿಕೆ. ಅವರನ್ನು ನೋಡಿ ರಮೋಲಾ ಕೂಡ ಇದೇ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ.
View this post on Instagram
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನಲ್ಲಿ ರಮೋಲಾ ಹಾಗೂ ರಕ್ಷಕ್ ಜೊತೆಯಾಗಿದ್ದಾರೆ. ಅವರು ಒಟ್ಟಾಗಿ ಸ್ಪರ್ಧಿಸಿ ಗಮನ ಸೆಳೆಯುತ್ತಿದ್ದಾರೆ. ಉಳಿದವರ ಜೊತೆ ಒಳ್ಳೆಯ ಸ್ಪರ್ಧೆಯನ್ನು ಇವರು ನೀಡುತ್ತಿದ್ದಾರೆ. ಈ ವೇಳೆ ರಕ್ಷಕ್ ಅವರು ಲಿವರ್ ದಾನ ಮಾಡುವ ಬಗ್ಗೆ ಘೋಷಣೆ ಮಾಡಿದರು.
ಇದನ್ನೂ ಓದಿ: ರಿಯಾಲಿಟಿ ಶೋ ವಿವಾದ: ಚಾಮುಂಡೇಶ್ವರಿ ಭಕ್ತರಿಗೆ ಕ್ಷಮೆ ಕೇಳಿದ ರಕ್ಷಕ್ ಬುಲೆಟ್
‘ನಮ್ಮ ತಂದೆಗೆ ಲಿವರ್ ಟ್ರಾನ್ಸ್ಫಾರ್ಮೇನ್ ಮಾಡಬೇಕಿತ್ತು. ಕೆಲವರು ಬಡವರಿಗೆ ಇದು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ನಾನು ಲಿವರನ್ ದಾನ ಮಾಡ್ತೀನಿ. ಇದು ನನ್ನ ಪ್ರಾಮಿಸ್’ ಎಂದರು ರಕ್ಷಕ್. ‘ಪುನೀತ್ ರಾಜ್ಕುಮಾರ್ ಅವರನ್ನು ನೋಡಿದ ಬಳಿಕ ರಕ್ಷಕ್ ಜೊತೆ ನಾನು ಕೂಡ ಲಿವರ್ ದಾನ ಮಾಡುತ್ತೇನೆ’ ಎಂದರು. ಈ ವೇಳೆ ರಚಿತಾ ಅವರು ‘ನಿಮಗೆ ಒಳ್ಳೆಯ ಹೃದಯ ಇದೆ’ ಎಂದು ಮೆಚ್ಚುಗೆಯ ಮಾತನ್ನು ಆಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








