‘ಸೀತಾ ರಾಮ’: ಸಿಹಿ ಆತ್ಮವೇ ಹೆದರಿ ಮನೆಬಿಟ್ಟು ಹೋದಾಗ.. ವೀಕ್ಷಕರಲ್ಲಿ ಮೂಡಿದೆ ಅಸಮಾಧಾನ
‘ಸೀತಾ ರಾಮ’ ಧಾರಾವಾಹಿಯಲ್ಲಿ ಸಿಹಿಯ ಆತ್ಮ ಮನೆಬಿಟ್ಟು ಹೋಗಿದೆ. ಭಾರ್ಗವಿಯ ಬೆದರಿಕೆಯಿಂದಾಗಿ ಇದು ಸಂಭವಿಸಿದೆ. ವೀಕ್ಷಕರು ಈ ಟ್ವಿಸ್ಟ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೀತಾಳ ಅನುಮಾನ ಮತ್ತು ಮುಂದಿನ ಘಟನಾವಳಿಗಳು ಕುತೂಹಲ ಹುಟ್ಟಿಸಿವೆ. ಭಾರ್ಗವಿಯನ್ನು ಮಣಿಸಲು ಯಾವ ಪ್ಲ್ಯಾನ್ ಮಾಡಲಾಗುತ್ತದೆ ಎಂಬುದು ಕುತೂಹಲಕರ ಸಂಗತಿಯಾಗಿದೆ.

‘ಸೀತಾ ರಾಮ’ (Seetha Raama Serial) ಧಾರಾವಾಹಿಯಲ್ಲಿ ಹಲವು ರೀತಿಯ ಟ್ವಿಸ್ಟ್ಗಳನ್ನು ನೀಡುವ ಕೆಲಸ ಈ ಮೊದಲಿನಿಂದಲೂ ಆಗುತ್ತಾ ಬರುತ್ತಿದೆ. ಸಿಹಿಯ ಆತ್ಮದ ಕಥೆಯನ್ನು ಇಷ್ಟು ದಿನ ಹೈಲೈಟ್ ಮಾಡಲಾಗಿತ್ತು. ಆದರೆ, ಈಗ ‘ಸೀತಾ ರಾಮ’ ಧಾರಾವಾಹಿಗೆ ದೊಡ್ಡ ಟ್ವಿಸ್ಟ್ ಕೊಡಲಾಗಿದೆ. ಈ ಆತ್ಮವೇ ಮನೆ ಬಿಟ್ಟು ಹೋಗುವಂತೆ ಮಾಡಿದ್ದಾಳೆ ಭಾರ್ಗವಿ. ಈ ಟ್ವಿಸ್ಟ್ ನೋಡಿ ಅನೇರಿಗೆ ಬೇಸರ ಆಗಿದೆ. ಈ ಬಗ್ಗೆ ಅನೇಕರು ಅಸಮಾಧಾನ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ.
ಸಿಹಿ ಆತ್ಮ ಇದೆ ಎಂಬುದು ಭಾರ್ಗವಿಗೆ ಗೊತ್ತಾಗಿದೆ. ಅಲ್ಲದೆ, ಸಿಹಿ ಹೆಸರಲ್ಲಿ ಬಂದಿರೋ ಸುಬ್ಬಿಯ ನಿಜವಾದ ಕಥೆ ಕೂಡ ಭಾರ್ಗವಿಗೆ ತಿಳಿದಿದೆ. ಈ ಕಾರಣದಿಂದಲೇ ಆಕೆ ಸಿಹಿ ಮತ್ತು ಸುಬ್ಬಿಯನ್ನು ಬೇರೆ ಮಾಡುವ ಪ್ರಯತ್ನ ಮಾಡಿದಳು ಮತ್ತು ಇದರಲ್ಲಿ ಯಶಸ್ಸು ಕಂಡಿದ್ದಾಳೆ ಭಾರ್ಗವಿ. ಇದು ವೀಕ್ಷಕರಿಗೆ ಬೇಸರ ಮೂಡಿಸಿದೆ.
ಸಿಹಿಯನ್ನು ಭಾರ್ಗವಿಯೇ ಕೊಂದಿದ್ದಾಳೆ. ಸಿಹಿಯ ಆತ್ಮ ಇಲ್ಲಿಯೇ ಇದ್ದರೆ ಸೀತಾಳನ್ನು ಹಾಗೆಯೇ ಕೊಲ್ಲುತ್ತೇನೆ ಎಂದು ಭಾರ್ಗವಿ ಹೆದರಿಸಿದ್ದಾಳೆ. ಇದರಿಂದ ಭಯ ಬಿದ್ದ ಆತ್ಮವು ಮನೆ ಬಿಟ್ಟು ಹೋಗಿದ್ದನ್ನು ಎಪಿಸೋಡ್ನಲ್ಲಿ ನೀವು ವೀಕ್ಷಿಸಬಹುದಾಗಿದೆ. ಇದೆಂಥ ಟ್ವಿಸ್ಟ್ ಎಂದು ಅನೇಕರು ಹೇಳಿಕೊಳ್ಳುತ್ತಿದ್ದಾರೆ.
ಸಿಹಿ ಆತ್ಮ ಆಗಿರೋದರಿಂದ ಆಕೆಗೆ ಏನು ಬೇಕಾದರೂ ಮಾಡುವ ಶಕ್ತಿ ಇದೆ. ಆದರೆ, ಭಾರ್ಗವಿಗೆ ಹೆದರಿ ಸಿಹಿಯೇ ಮನೆ ಬಿಟ್ಟು ಹೋಗಿದ್ದಾಳೆ. ಇದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆ ಆಗಿದೆ. ಈ ಟ್ವಿಸ್ಟ್ನ ಅನೇಕರಿಗೆ ನಂಬಲು ಸಾಧ್ಯವಾಗುತ್ತಿಲ್ಲ.
View this post on Instagram
View this post on Instagram
ಇನ್ನು, ಸಿಹಿ ಸತ್ತ ಬಳಿಕ ಸೀತಾಳು ಕಂಗಾಲಾಗಿದ್ದಳು. ಗೊಂಬೆಯನ್ನೇ ಸಿಹಿ ಎಂದು ನಂಬಿದ್ದಳು. ಅದಕ್ಕೆ ಊಟ ಬಡಿಸುತ್ತಿದ್ದಳು. ಅದಕ್ಕೆ ಪಾಠ ಮಾಡುತ್ತಿದ್ದಳು. ಹೀಗಿರುವ ಸೀತಾಗೆ ಈಗ ಮನೆಯಲ್ಲಿರೋದು ಸಿಹಿ ಅಲ್ಲ ಎಂಬ ಅನುಮಾನ ಬಂದಿದೆ. ಮೊದಲು ಗೊಂಬೆಯನ್ನೇ ಸಿಹಿ ಎಂದು ನಂಬಿಕೊಂಡಿದ್ದ ಆಕೆಯು ಈಗ ಸಿಹಿ ರೂಪದಲ್ಲೇ ಇರುವ ಸುಬ್ಬಿಯನ್ನು ಏಕೆ ಸ್ವೀಕರಿಸುತ್ತಿಲ್ಲ ಅನ್ನೋದು ಅನೇಕರ ಪ್ರಶ್ನೆ ಆಗಿದೆ.
ಇದನ್ನೂ ಓದಿ: ‘ಸೀತಾ ರಾಮ’: ಹೊಸ ಆಟ ಶುರು ಮಾಡಿದ ಅಶೋಕ; ಭಾಗರ್ವಿಗೆ ನಡುಕ
ಮುಂದಿನ ದಿನಗಳಲ್ಲಿ ವಿಲನ್ ಭಾರ್ಗವಿಯನ್ನು ಮಣಿಸಲು ಯಾವ ರೀತಿಯಲ್ಲಿ ಪ್ಲ್ಯಾನ್ ನಡೆಯುತ್ತದೆ, ಸಿಹಿ ಆತ್ಮ ಮತ್ತೆ ಬರುತ್ತದೆಯೇ ಎನ್ನುವುದು ಸದ್ಯದ ಪ್ರಶ್ನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:06 am, Thu, 15 May 25







