ಉಪೇಂದ್ರ ನಿರ್ದೇಶನಕ್ಕೆ ನಾನು ದೊಡ್ಡ ಫ್ಯಾನ್ ಎಂದ ರಜನಿ ಸಿನಿಮಾ ಡೈರೆಕ್ಟರ್
ಲೋಕೇಶ್ ಕನಗರಾಜ್ ಅವರು ತಮ್ಮ ಸಂದರ್ಶನದಲ್ಲಿ ರಜನಿಕಾಂತ್ ನಟನೆಯ 'ಕೂಲಿ' ಚಿತ್ರದಲ್ಲಿ ಉಪೇಂದ್ರರೊಂದಿಗೆ ಕೆಲಸ ಮಾಡುವ ಅನುಭವ ಹಂಚಿಕೊಂಡಿದ್ದಾರೆ. ಅವರು ಉಪೇಂದ್ರ ಅವರ ಅಭಿಮಾನಿಯಾಗಿದ್ದು, ಅವರ ನಿರ್ದೇಶನದ ಶಕ್ತಿಯನ್ನು ಅರ್ಥಮಾಡಿಕೊಂಡ ಬಳಿಕ ಈ ಚಿತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಕನ್ನಡದ ಖ್ಯಾತ ನಿರ್ದೇಶಕ ಉಪೇಂದ್ರ (Upendra) ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿಡಿದ್ದಾರೆ. ಅವರು ನಿರ್ದೇಶನ ಮಾಡಿದ್ದ ‘ಓಂ’ ಸಿನಿಮಾ ಬೇರೆಯದೇ ದಾಖಲೆಯನ್ನು ಹೊಂದಿರೋದು ಗೊತ್ತೇ ಇದೆ. ಅವರಿಗೆ ಕೇವಲ ಜನ ಸಾಮಾನ್ಯರು ಮಾತ್ರವಲ್ಲ, ಸೆಲೆಬ್ರಿಟಿಗಳು ಕೂಡ ಅಭಿಮಾನಿ ಆಗಿದ್ದಾರೆ. ಇದರಲ್ಲಿ ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ನಿರ್ದೇಶಕ ಲೋಕೇಶ್ ಕನಗರಾಜ್ ಕೂಡ ಇದ್ದಾರೆ ಅನ್ನೋದು ಗೊತ್ತ? ಆ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.
ಲೋಕೇಶ್ ಕನಗರಾಜ್ ಅವರು ತಮಿಳಿನ ಖ್ಯಾತ ನಿರ್ದೇಶಕರು. ಅವರು ‘ಕೈದಿ’, ‘ಮಾಸ್ಟರ್’, ‘ವಿಕ್ರಮ್’ ರೀತಿಯ ಚಿತ್ರಗಳನ್ನು ನೀಡಿದ್ದು ಗೊತ್ತೇ ಇದೆ. ಅವರ ಕೊನೆಯ ಸಿನಿಮಾ ‘ಲಿಯೋ’ ಹೆಚ್ಚು ಸದ್ದು ಮಾಡದೆ ಇರಬಹುದು. ಆದರೆ, ಸಿನಿಮಾ ಮೆಚ್ಚುಗೆಯನ್ನಂತೂ ಪಡೆದಿದೆ. ಉತ್ತಮ ಬಿಸ್ನೆಸ್ ಮಾಡಿದೆ. ಈಗ ಅವರು ನಿರ್ದೇಶನ ಮಾಡುತ್ತಿರುವ ‘ಕೂಲಿ’ ಚಿತ್ರದಲ್ಲಿ ರಜನಿಕಾಂತ್ ಜೊತೆ ಉಪೇಂದ್ರ ಕೂಡ ಇದ್ದಾರೆ.
ಉಪೇಂದ್ರ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ ಲೋಕೇಶ್ ಅವರು. ‘ನನಗೆ ಉಪೇಂದ್ರ ಅಂದ್ರೆ ಇಷ್ಟ. ಉಪೇಂದ್ರ ಅವರ ನಿರ್ದೇಶನಕ್ಕೆ ನಾನು ಫ್ಯಾನ್. ಅವರ ಸ್ಟ್ರೆಂತ್ ಏನು ಎಂದು ತಿಳಿದುಕೊಳ್ಳದೆ ಅವರ ಜೊತೆ ಸಿನಿಮಾ ಮಾಡಲು ಸಾಧ್ಯವಿಲ್ಲ. ಅವರು ಸಿನಿಮಾದಲ್ಲಿ ಏನು ಮಾಡುತ್ತಾರೆ ಎಂದು ತಿಳಿದುಕೊಂಡ ಬಳಿಕವೇ ಸಿನಿಮಾ ಮಾಡಬೇಕು. ಇಲ್ಲವಾದಲ್ಲಿ ಫ್ಯಾನ್ಸ್ ನಿರಾಸೆ ಗೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ಅವರು ಹೇಳಿದ್ದಾರೆ.
View this post on Instagram
ಅಂದರೆ ಲೋಕೇಶ್ ಕನಗರಾಜ್ ಅವರು ಉಪೇಂದ್ರ ಜೊತೆ ಈ ಪಾತ್ರದ ಬಗ್ಗೆ ಮಾತನಾಡುವುದಕ್ಕೂ ಮೊದಲು ಆ ಬಗ್ಗೆ ಸಾಕಷ್ಟು ತಿಳಿದುಕೊಂಡು ಸಿದ್ಧತೆ ಮಾಡಿಕೊಂಡಿದ್ದರು ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಅವರ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.
ಇದನ್ನೂ ಓದಿ: ‘ಕೂಲಿ’ ಸಿನಿಮಾದ ಬಹುತೇಕ ಶೂಟ್ನ ಬಾಡಿ ಡಬಲ್ ಮೂಲಕವೇ ಮುಗಿಸಿದ ನಿರ್ದೇಶಕ
‘ಕೂಲಿ’ ಸಿನಿಮಾದಲ್ಲಿ ರಜನಿಕಾಂತ್, ಉಪೇಂದ್ರ ಜೊತೆಗೆ ಆಮಿರ್ ಖಾನ್, ಅಕ್ಕಿನೇನಿ ನಾಗಾರ್ಜುನ, ಶ್ರುತಿ ಹಾಸನ್, ಸೌಬಿನ್ ಶಾಹಿರ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರ ಆಗಸ್ಟ್ 14ರಂದು ರಿಲೀಸ್ ಆಗಲಿದೆ. ಇನ್ನು, ಉಪೇಂದ್ರ ಅವರು ಸದ್ಯ ಪರಭಾಷೆಯಲ್ಲಿ ಹಾಗೂ ಕನ್ನಡದಲ್ಲಿ ಬ್ಯುಸಿ ಇದ್ದಾರೆ. ಅವರ ನಟನೆಯ ‘45’ ಸಿನಿಮಾ ರಿಲೀಸ್ ಆಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:45 am, Wed, 14 May 25







