ತಂಗಿ ಮದುವೆ ನಾವು ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ಬಹಳ ಚೆನ್ನಾಗಿ ಸಹೋದರಿಯ ಮದುವೆ ಮಾಡಬೇಕು ಎಂದು ರಾಕೇಶ್ ಪೂಜಾರಿ ಕನಸು ಕಂಡಿದ್ದರು. ಆ ಕನಸು ನನಸಾಗುವ ಮುಂಚೆಯೇ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಈಗ ರಾಕೇಶ್ ಪೂಜಾರಿ ಕುಟುಂಬಕ್ಕೆ ‘ಕಾಮಿಡಿ ಕಿಲಾಡಿಗಳು’ ತಂಡದ ಕಲಾವಿದರು ನೆರವಾಗುತ್ತಿದ್ದಾರೆ. ಆ ಬಗ್ಗೆ ಸ್ನೇಹಿತ ಸೀರುಂಡೆ ರಘು ಮಾತಾಡಿದ್ದಾರೆ.
ತಂಗಿಯ ಮದುವೆಯನ್ನು ಚೆನ್ನಾಗಿ ಮಾಡಬೇಕು ಎಂದು ರಾಕೇಶ್ ಪೂಜಾರಿ (Rakesh Poojary) ಅವರು ಕನಸು ಕಂಡಿದ್ದರು. ಆ ಕನಸು ನನಸಾಗುವ ಮುನ್ನವೇ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಈಗ ಅವರ ಕುಟುಂಬಕ್ಕೆ ‘ಕಾಮಿಡಿ ಕಿಲಾಡಿಗಳು’ (Comedy Khiladigalu) ತಂಡದ ಕಲಾವಿದರು ಆಸರೆ ಆಗುತ್ತಿದ್ದಾರೆ. ಆ ಬಗ್ಗೆ ಸ್ನೇಹಿತ ಸೀರುಂಡೆ ರಘು (Seerunde Raghu) ಮಾತನಾಡಿದ್ದಾರೆ. ‘ತಾಯಿ ಮತ್ತು ತಂಗಿ ಬಗ್ಗೆ ನಮಗೆ ಯೋಚನೆ ಆಗುತ್ತಿದೆ. ಅವರಿಗೆ ನಾವೆಲ್ಲ ಬೆಂಬಲವಾಗಿ ಇರುತ್ತೇವೆ. ಕಾಮಿಡಿ ಕಿಲಾಡಿಗಳು ಶೋನಿಂದ ಬಂದ ನಾವೆಲ್ಲ ಒಂದು ಕುಟುಂಬದ ರೀತಿ ಇದ್ದೇವೆ. ತಂಗಿ ಮದುವೆಗೆ ನಾವೆಲ್ಲರೂ ಸಪೋರ್ಟ್ ಮಾಡುತ್ತೇವೆ’ ಎಂದು ರಘು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.