ಗಾಲಿ ಜನಾರ್ಧನ ರೆಡ್ಡಿಯವರು ರಾಜಕೀಯ ಬದುಕು ಅಬ್ರಪ್ಟ್ ಆಗಿ ಕೊನೆಗೊಂಡಿತೇ?
ಅಸೆಂಬ್ಲಿಗೆ, ಸಂಸತ್ತಿಗೆ ಆಯ್ಕೆಯಾಗುವ ಜನಪ್ರತಿನಿಧಿಗಳನ್ನು ಯಾವುದಾದರೂ ಪ್ರಕರಣದಲ್ಲಿ ಕೋರ್ಟು ದೋಷಿ ಅಂತ ತೀರ್ಪಿತ್ತರೆ ಅವರ ಸದಸ್ಯತ್ವ ರದ್ದಾಗುತ್ತದೆ ಮತ್ತು ಜೈಲು ಶಿಕ್ಷೆ ಪೂರೈಸಿ ಹೊರಬಂದ ನಂತರ ಕೂಡ ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಸಿಬಿಐ ಕೋರ್ಟ್ ರೆಡ್ಡಿಯವರಿಗೆ 7 ವರ್ಷ ಶಿಕ್ಷೆ ವಿಧಿಸಿದೆ, ಅವರ ರಾಜಕೀಯ ಬದುಕು ಅಬ್ರಪ್ಟ್ ಅಗಿ ಮುಗಿಯಬಹುದು ಅಂತ ಇದೇ ಕಾರಣಕ್ಕೆ ಹೇಳಿದ್ದು.
ಕೊಪ್ಪಳ, ಮೇ 13: ಗಾಲಿ ಜನಾರ್ಧನ ರೆಡ್ಡಿಯವರ ರಾಜಕೀಯ ಬದುಕು ಹೆಚ್ಚು ಕಡಿಮೆ ಮುಗಿದಂತಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ವಿಶೇಷ ಕೋರ್ಟ್ ನಿಂದ (CBI special court) ಶಿಕ್ಷೆಗೆ ಗುರಿಯಾಗಿರುವ ರೆಡ್ಡಿಯವರು ಪ್ರಸ್ತುತವಾಗಿ ಹೈದರಾಬಾದ್ ನಲ್ಲಿದ್ದಾರೆ. ಅದರೆ ಅವರ ಪತ್ನಿ ಅರುಣಾ ಇಂದು ಗಂಗಾವತಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ರೆಡ್ಡಿಯವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದ್ದರೂ ಅವರಿಗೆ ಜನಬೆಂಬಲ ಈಗಲೂ ಇದೆ ಅನ್ನೋದಿಕ್ಕೆ ಇಲ್ಲಿ ನೂರಾರು ಸಂಖ್ಯೆಯಲ್ಲಿ ನೆರೆದಿರುವ ಬೆಂಬಲಿಗರೇ ಸಾಕ್ಷಿ. ಬಹಳಷ್ಟ್ಟು ಜನ ಮಾತಾಡಿ ಅರುಣಾ ಅವರಿಗೆ ಬೆಂಬಲ ಸೂಚಿಸಿದರು ತಮ್ಮ ಯಾವ ಕಾರಣಕ್ಕೂ ರೆಡ್ಡಿಯವರಿಂದ ವಿಮುಖರಾಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಜನಾರ್ಧನ ರೆಡ್ಡಿ ವಿರುದ್ಧ ಕಾಮೆಂಟ್ ಮಾಡಲ್ಲವೆಂದು ಹೇಳಿ ದೊಡ್ಡತನ ಪ್ರದರ್ಶಿಸಿದ ಬಿ ಶ್ರೀರಾಮುಲು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ