ಬೆಂಗಳೂರಲ್ಲಿ ಅರ್ಧಗಂಟೆ ಸುರಿದ ಮಳೆಗೆ ಹೊಳೆಯಂತಾದ ರಸ್ತೆಗಳು, ಎಂದಿನಂತೆ ಪರದಾಡಿದ ವಾಹನ ಸವಾರರು
ಬೆಂಗಳೂರಲ್ಲಿ ಇಂದು ಮಧ್ಯಾಹ್ನ ಕೆಅರ್ ಮಾರ್ಕೆಟ್, ಟೌನ್ ಹಾಲ್, ಡಬಲ್ ರೋಡ್, ಶಾಂತಿನಗರ, ಮೈಸೂರು ಬ್ಯಾಂಕ್ ಪ್ರದೇಶ, ಮೆಜೆಸ್ಟಿಕ್, ಶೇಷಾದ್ರಿಪುರಂ, ವಿಲ್ಸನ್ ಗಾರ್ಡನ್ ಮೊದಲಾದ ಭಾಗಗಳಲ್ಲಿ ಭಾರೀ ಮಳೆಯಾಗಿದೆ ಮತ್ತು ರಸ್ತೆಗಳಲ್ಲಿ ಮೊಣಕಾಲು ಮಟ್ಟ ನೀರು ಹರಿದಿದೆ. ಜನ ಎಂದಿನಂತೆ ವಾಹನ ತಮ್ಮ ಓಡಿಸಿಕೊಂಡು ಹೋಗಲು ತಾಪತ್ರಯ ಪಟ್ಟಿದ್ದಾರೆ.
ಬೆಂಗಳೂರು, ಮೇ 13: ನಗರದಲ್ಲಿ ಇಂದು ಮಧ್ಯಾಹ್ನ ಸುಮಾರು ಅರ್ಧ-ಮುಕ್ಕಾಲು ಗಂಟೆ ಕಾಲ ಜೋರು ಮಳೆಯಾಗಿದೆ. ಮಳೆಯಾದರೆ ಗೊತ್ತಲ್ಲ ನಮ್ಮ ಬೆಂಗಳೂರು ಸ್ಥಿತಿ? ಇವತ್ತು ಕೂಡ ಅದೇ ಹಾಡು ಅದೇ ತಾಳ. ನಗರದ ವಾಹನ ಸವಾರರು (motorists) ಯಾಕಾದ್ರೂ ಸುರಿಯುತ್ತಪ್ಪ ಈ ಮಳೆ ಅಂತ ಮಳೆ ಬಂದಾಗೆಲ್ಲ ಅಂದುಕೊಳ್ಳುತ್ತಿರಬಹುದು. ಈ ವಿಡಿಯೋ ನಿಮಗೆ ತೋರಿಸಲು ಕಾರಣವಿದೆ. ನಗರದ ಫ್ಲೈ ಓವರೊಂದರ ಪಕ್ಕದಲ್ಲಿರುವ ಈ ಸರ್ವೀಸ್ ರೋಡಲ್ಲಿ ನೀರು ಹರಿಯುತ್ತಿದೆ ಮತ್ತು ಮೇಲಿಂದ ಮಳೆ ಸುರಿಯುವುದು ಮುಂದುವರಿದಿದೆ. ಹೊಂಡದಂತೆ ಕಾಣುತ್ತಿರುವ ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ಓಡಿಸಿಕೊಂಡು ಹೋಗುವುದು ಪುರುಷರಿಗೆ ಕಷ್ಟವಾಗುತ್ತಿದ್ದರೆ ಯುವತಿಯೊಬ್ಬರು, ರಸ್ತೆಯಲ್ಲಿ ನೀರೇ ಇಲ್ಲವೆಂಬಂತೆ ತಮ್ಮ ಸ್ಕೂಟರ್ ಓಡಿಸಿಕೊಂಡು ಹೋಗುತ್ತಾರೆ. ನಾರಿಶಕ್ತಿ ಕೀ ಜೈ ಹೋ!
ಇದನ್ನೂ ಓದಿ: ಬೆಂಗಳೂರು ಮಳೆ ಅವಾಂತರ: ತುಂತುರು ಅಲ್ಲಿ ನೀರ ಹಾಡು, ಹಗಲಿನಲಿ, ಇರುಳಿನಲಿ, ಬಿಬಿಎಂಪಿ ಮಲಗಿರಲಿ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ