ಜನಾರ್ಧನ ರೆಡ್ಡಿ ವಿರುದ್ಧ ಕಾಮೆಂಟ್ ಮಾಡಲ್ಲವೆಂದು ಹೇಳಿ ದೊಡ್ಡತನ ಪ್ರದರ್ಶಿಸಿದ ಬಿ ಶ್ರೀರಾಮುಲು
ಈ ಚುನಾವಣೆ ನಡೆಯುತ್ತಿರೋದು ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಮಾಡುವುದಕ್ಕೋಸ್ಕರ ಎಂದ ಶ್ರೀರಾಮುಲು, ಯಾರೇನೇ ಟೀಕೆ ಮಾಡಿದರೂ, ತನ್ನ ವಿರುದ್ಧ ಯಾರೆಷ್ಟೇ ದ್ವೇಷ ಕಾರಿದಾಗ್ಯೂ ಈ ಚುನಾವಣೆಯಲ್ಲಿ ಗೆದ್ದರೆ ಅದೇ ಅವರಿಗೆ ತಕ್ಕ ಉತ್ತರ ಕೊಟ್ಟಂತೆ ಎಂದು ಹೇಳಿದರು.
ಬಳ್ಳಾರಿ: ಲೋಕಸಭಾ ಚುನಾವಣೆಗೆ ಬಳ್ಳಾರಿ ಕ್ಷೇತ್ರದ ಟಿಕೆಟ್ ಸಿಕ್ಕರೂ ಮಾಜಿ ಸಚಿವ ಬಿ ಶ್ರೀರಾಮುಲು (B Sriramulu) ತಮ್ಮನ್ನು ಟೀಕಿಸಿದವರ ವಿರುದ್ಧ ಯಾವುದೇ ಕಾಮೆಂಟ್ ಮಾಡದೆ ದೊಡ್ಡತನ ಪ್ರದರ್ಶಿಸುತ್ತಿದ್ದಾರೆ. ನಗರದಲ್ಲಿಂದು ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ಅವರು ತನಗೆ ಈಗ ಟಿಕೆಟ್ ಸಿಕ್ಕಿದೆ ಮತ್ತು ಗಮನವೆಲ್ಲ ಚುನಾವಣೆಯಲ್ಲಿ ಗೆಲುವು ಸಾಧಿಸುವುದರ ಮೇಲೆ ಕೇಂದ್ರೀಕೃತವಾಗಿದೆ, ಹಾಗಾಗಿ ತಮ್ಮ ಬಗ್ಗೆ ಯಾರೇನೇ ಮಾತಾಡಿದರೂ ಕಾಮೆಂಟ್ ಮಾಡುವ ಗೋಜಿಗೆ ಹೋಗಲ್ಲ ಎಂದು ಹೇಳಿದರು. ಈ ಚುನಾವಣೆ ನಡೆಯುತ್ತಿರೋದು ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಮಾಡುವುದಕ್ಕೋಸ್ಕರ ಎಂದ ಶ್ರೀರಾಮುಲು, ಯಾರೇನೇ ಟೀಕೆ ಮಾಡಿದರೂ, ತನ್ನ ವಿರುದ್ಧ ಯಾರೆಷ್ಟೇ ದ್ವೇಷ (hatred) ಕಾರಿದಾಗ್ಯೂ ಈ ಚುನಾವಣೆಯಲ್ಲಿ ಗೆದ್ದರೆ ಅದೇ ಅವರಿಗೆ ತಕ್ಕ ಉತ್ತರ ಕೊಟ್ಟಂತೆ ಎಂದು ಹೇಳಿದರು. ವಿರೋಧಿಗಳು ಮಾತ್ರ ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಾರೆ, ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ್ಯಾರೂ ಮಾಡಲಾರರು. ಆದರೆ ಜನ ಅಥವಾ ಮತದಾರರು ತಮ್ಮ ಪರವಾಗಿ ನಿಂತಾಗ ಅದರ ಮುಂದೆ ಷಡ್ಯಂತ್ರ, ಕುತಂತ್ರಗಳೆಲ್ಲ ಕೊಚ್ಚಿಕೊಂಡು ಹೋಗುತ್ತವೆ ಎಂದು ಶ್ರೀರಾಮುಲು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲೋಕಸಭಾ ಚುನಾವಣೆ ಹೊತ್ತಲ್ಲೇ ರಾಜೀನಾಮೆ ನೀಡಿದ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್