AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಡಿಯೂರಪ್ಪರಿಂದ ನನಗೆ ಬರೀ ಮೋಸವಾಗಿದೆ, ಇನ್ನು ಅವರನ್ನು ನಂಬಲಾಗಲ್ಲ: ಕೆ ಎಸ್ ಈಶ್ವರಪ್ಪ

ಯಡಿಯೂರಪ್ಪರಿಂದ ನನಗೆ ಬರೀ ಮೋಸವಾಗಿದೆ, ಇನ್ನು ಅವರನ್ನು ನಂಬಲಾಗಲ್ಲ: ಕೆ ಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 14, 2024 | 7:22 PM

ಕಾಂತೇಶ್ ನನ್ನು ಎಂಎಲ್ ಸಿ ಮಾಡ್ತೀನಿ ಅಂತ ಈಗ ಹೇಳುತ್ತಾ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ತನಗೆ ಕೋರ್ಟ್ ಕ್ಲೀನ್ ಕೊಟ್ಟ ತಕ್ಷಣ ಪುನಃ ಮಂತ್ರಿ ಮಾಡುವುದಾಗಿ ಹೇಳಿದ್ದ ಯಡಿಯೂರಪ್ಪ ಆಗಲೂ ಮೋಸಮಾಡಿದರು, 40 ವರ್ಷಗಳ ಪಕ್ಷದ ಸಂಘಟನೆ ಮಾಡಿದ ತನ್ನಂಥವನಿಗೆ ಇಷ್ಟು ದೊಡ್ಡ ಮೋಸಗಳನ್ನು ಮಾಡಿದರೆ ಅವರನ್ನು ನಂಬೋದಾದರೂ ಹೇಗೆ ಎಂದು ಈಶ್ವರಪ್ಪ ಕೇಳಿದರು.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರಿಂದ ತನಗೆ ಕೇವಲ ಮೋಸ ಮತ್ತು ವಂಚನೆ ಮಾತ್ರ ಆಗಿದೆ, ಇನ್ನು ಅವರನ್ನು ನಂಬಲಾಗಲ್ಲ ಎಂದು ಅವರ ದಶಕಗಳ ದೋಸ್ತಿ ಕೆಎಸ್ ಈಶ್ವರಪ್ಪ (KS Eshwarappa) ಗುಡುಗಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ತನ್ನ ಮಗನಿಗೆ ಹಾವೇರಿ ಕ್ಷೇತ್ರದ (Haveri constituency) ಟಿಕೆಟ್ ಕೊಡಿಸುವ ಭರವಸೆ ಯಡಿಯೂರಪ್ಪ ನೀಡಿದ ಬಳಿಕ ಕಾಂತೇಶ್ ಅಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಾ ಜನರ ಅನುರಾಗ ಗಳಿಸಿದ್ದ. ಇನ್ನೇನು ಟಿಕೆಟ್ ಸಿಗುತ್ತದೆ ಅಂದುಕೊಳ್ಳುವಾಗಲೇ ಮೋಸ ಮಾಡಿಬಿಟ್ಟರು. ಕಾಂತೇಶ್ ನನ್ನು ಎಂಎಲ್ ಸಿ ಮಾಡ್ತೀನಿ ಅಂತ ಈಗ ಹೇಳುತ್ತಾ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ತನಗೆ ಕೋರ್ಟ್ ಕ್ಲೀನ್ ಕೊಟ್ಟ ತಕ್ಷಣ ಪುನಃ ಮಂತ್ರಿ ಮಾಡುವುದಾಗಿ ಹೇಳಿದ್ದ ಯಡಿಯೂರಪ್ಪ ಆಗಲೂ ಮೋಸಮಾಡಿದರು, 40 ವರ್ಷಗಳ ಪಕ್ಷದ ಸಂಘಟನೆ ಮಾಡಿದ ತನ್ನಂಥವನಿಗೆ ಇಷ್ಟು ದೊಡ್ಡ ಮೋಸಗಳನ್ನು ಮಾಡಿದರೆ ಅವರನ್ನು ನಂಬೋದಾದರೂ ಹೇಗೆ ಎಂದು ಈಶ್ವರಪ್ಪ ಕೇಳಿದರು.

ತಾನು ರಾಯಣ್ಣ ಬ್ರಿಗೇಡ್ ಮಾಡಿದಾಗಲೂ ಅಮಿತ್ ಶಾ ಅವರಿಗೆ ಹೇಳಿ ಅದಕ್ಕೆ ಅಡ್ಡಗಾಲು ಹಾಕಿ ನಿಲ್ಲಿಸಿಬಿಟ್ಟರು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಶೋಭಾ ಅಭಿಯಾನ ನಡೆದರೂ ಅವರಿಗೆ ಡಿವಿ ಸದಾನಂದಗೌಡ ಪ್ರತಿನಿಧಿಸುವ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೊಡಿಸಿದ್ದಾರೆ, ಅದೇ ಹಟಮಾರಿತನವನ್ನು ಅವರು ತನ್ನ ಮಗನ ವಿಷಯದಲ್ಲಿ ಯಾಕೆ ಪ್ರದರ್ಶಿಸಲಿಲ್ಲ ಎಂದು ಈಶ್ವರಪ್ಪ ಖಾರವಾಗಿ ಪ್ರಶ್ನಿಸಿದರು. ಕಾರ್ಯಕರ್ತರೊಡನೆ ಚರ್ಚಿಸಿ ತಮ್ಮ ಮುಂದಿನ ನಡೆ ತಿಳಿಸುವುದಾಗಿ ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿ ಎರಡನೇ ಪಟ್ಟಿ: ವಿರೋಧಿಗಳಿಗೆ ಟಿಕೆಟ್ ತಪ್ಪಿಸುವಲ್ಲಿ ಬಿಎಸ್ ಯಡಿಯೂರಪ್ಪ ಮೇಲುಗೈ, ಸಂತೋಷ್ ಬಣಕ್ಕೆ ಅಲ್ಪ ಯಶಸ್ಸು