‘ಜಾಕಿ’ ಬಿಡುಗಡೆ ಬಳಿಕ ಪುನೀತ್, ಸೂರಿ ಜೊತೆಯಾಗಿ ನೀಡಿದ್ದ ಸಂದರ್ಶನ ಇಲ್ಲಿದೆ..
ಮಾರ್ಚ್ 15ರಂದು ‘ಜಾಕಿ’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. 14 ವರ್ಷಗಳ ಹಿಂದೆ ಈ ಸಿನಿಮಾ ತೆರೆಕಂಡ ಬಳಿಕ ‘ಟಿವಿ9 ಕನ್ನಡ’ಕ್ಕೆ ನಿರ್ದೇಶಕ ಸೂರಿ ಮತ್ತು ನಟ ಪುನೀತ್ ರಾಜ್ಕುಮಾರ್ ಅವರು ಸಂದರ್ಶನ ನೀಡಿದ್ದರು. ಟಿವಿ9 ಡಿಜಿಟಲ್ನಲ್ಲಿ ಅದರ ಮರುಪ್ರಸಾರ ಲಭ್ಯವಿದೆ. ಅಂದು ಪುನೀತ್ ಮತ್ತು ದುನಿಯಾ ಸೂರಿ ಅವರು ಆಡಿದ ಮಾತುಗಳ ಮೆಲುಕು ಇಲ್ಲಿದೆ..
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಅಭಿಮಾನಿಗಳ ಪಾಲಿಗೆ ‘ಜಾಕಿ’ ಸಿನಿಮಾ ತುಂಬ ವಿಶೇಷವಾದದ್ದು. 2010ರ ಅಕ್ಟೋಬರ್ನಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಈಗ ಮತ್ತೆ ಮರುಬಿಡುಗಡೆ ಆಗುತ್ತಿದೆ. ಪುನೀತ್ ರಾಜ್ಕುಮಾರ್ ಅವರ ಜನ್ಮದಿನದ ಹೊಸ್ತಿಲಿನಲ್ಲಿ ಮಾರ್ಚ್ 15ರಂದು ‘ಜಾಕಿ’ ಚಿತ್ರ (Jackie Movie) ರೀ-ರಿಲೀಸ್ ಆಗಲಿದೆ. ಈ ಸಂದರ್ಭದಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. 2010ರಲ್ಲಿ ಸಿನಿಮಾ ಬಿಡುಗಡೆ ಆದ ಬಳಿಕ ‘ಟಿವಿ9 ಕನ್ನಡ’ಕ್ಕೆ ಪುನೀತ್ ರಾಜ್ಕುಮಾರ್ ಹಾಗೂ ನಿರ್ದೇಶಕ ಸೂರಿ (Duniya Suri) ಅವರು ಸಂದರ್ಶನ ನೀಡಿದ್ದರು. ಈಗ ಮರುಬಿಡುಗಡೆ ಪ್ರಯುಕ್ತ ಟಿವಿ9 ಡಿಜಿಟಲ್ನಲ್ಲಿ ಆ ಸಂದರ್ಶನದ ಮರು ಪ್ರಸಾರ ಆಗಿದೆ. ಈ ಸಿನಿಮಾವನ್ನು ಪುನೀತ್ ರಾಜ್ಕುಮಾರ್ ಅವರು ಒಪ್ಪಿಕೊಂಡಿದ್ದು ಹೇಗೆ? ತೆರೆ ಹಿಂದೆ ಏನೆಲ್ಲ ನಡೆದಿತ್ತು? ಹಾಡುಗಳು ಹುಟ್ಟಿದ ಕ್ಷಣ ಹೇಗಿತ್ತು? ಒಟ್ಟಾರೆ ಸಿನಿಮಾದ ವಿಶೇಷತೆ ಏನು ಎಂಬಿತ್ಯಾದಿ ಪ್ರಶ್ನೆಗಳಿಗೆ ಪುನೀತ್ ಮತ್ತು ಸೂರಿ ಅವರು ಉತ್ತರ ನೀಡಿದ್ದರು. 14 ವರ್ಷಗಳ ಹಿಂದಿನ ಅಪರೂಪದ ಸಂದರ್ಶನ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Daily Devotional: ದಕ್ಷಿಣಾಯನದ ಮಹತ್ವ ಹಾಗೂ ಇದರ ಫಲ ತಿಳಿಯಿರಿ

ಸರ್ಕಾರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು

ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್

ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
