‘ಸ್ಟಾರ್ ನಟರು ಎರಡು ವರ್ಷಕ್ಕೊಂದು ಸಿನಿಮಾ ಮಾಡಿದರೆ ಚಿತ್ರಮಂದಿರಗಳು ಉಳಿಯಲ್ಲ’

‘ಸ್ಟಾರ್ ನಟರು ಎರಡು ವರ್ಷಕ್ಕೊಂದು ಸಿನಿಮಾ ಮಾಡಿದರೆ ಚಿತ್ರಮಂದಿರಗಳು ಉಳಿಯಲ್ಲ’

ಮಂಜುನಾಥ ಸಿ.
|

Updated on:Mar 14, 2024 | 5:51 PM

Theaters: ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ನಶಿಸುತ್ತಿದ್ದು, ಸ್ಟಾರ್ ನಟರು ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡಿದರೆ ಚಿತ್ರರಂಗ ಉಳಿಯುವುದು ಕಷ್ಟವಾಗುತ್ತದೆ ಎಂದಿದ್ದಾರೆ ಫಿಲಂ ಚೇಂಬರ್ ಅಧ್ಯಕ್ಷ ಸುರೇಶ್.

ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು (Theater) ಎದುರಿಸುತ್ತಿರುವ ಸಮಸ್ಯೆಯ ಕುರಿತು ಹಾಗೂ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ಕುರಿತಾಗಿ ಫಿಲಂ ಚೇಂಬರ್​ನಲ್ಲಿ ಮಾರ್ಚ್ 13 ರಂದು ಪ್ರದರ್ಶಕರ ವಲಯದ ಸಭೆ ನಡೆದಿದೆ. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಚೇಂಬರ್ ಅಧ್ಯಕ್ಷ ಎನ್​ಎಂ ಸುರೇಶ್, ಚಿತ್ರಮಂದಿರಗಳು ತೀವ್ರ ಸಂಕಷ್ಟದ ಸ್ಥಿತಿಯಲ್ಲಿವೆ. ಹಾಗಾಗಿ ಚಿತ್ರಮಂದಿರಗಳಿಗೆ ಪರ್ಸೆಂಟೇಜ್ ವ್ಯವಸ್ಥೆ ಮಾಡುವ ಬಗ್ಗೆ ಯೋಜನೆ ಹಾಕುತ್ತಿದ್ದೇವೆ. ಚಿತ್ರಮಂದಿರಗಳು ಮುಚ್ಚಿದರೆ ಸಿನಿಮಾ ನಿರ್ಮಾಣದ ಮೇಲೆ ಹೊಡೆತ ಬೀಳುತ್ತದೆ, ಆಗ ಸಿನಿಮಾವನ್ನೇ ನಂಬಿಕೊಂಡ ಕಾರ್ಮಿಕರು ಬೀದಿ ಪಾಲಾಗುತ್ತಾರೆ. ಹಾಗಾಗಿ ಚಿತ್ರಮಂದಿರಗಳನ್ನು ಉಳಿಸಲು ಎಲ್ಲರೂ ಒಗ್ಗೂಡಬೇಕಿದೆ. ವಿಶೇಷವಾಗಿ ಸ್ಟಾರ್ ನಟರುಗಳು ಈ ಬಗ್ಗೆ ಮನಸ್ಸು ಮಾಡಬೇಕಿದೆ. ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡುವ ಬದಲಿಗೆ ವರ್ಷಕ್ಕೆ ಎರಡು ಸಿನಿಮಾ ಮಾಡುವತ್ತ ಅವರು ಗಮನ ಹರಿಸಿದರೆ ಚಿತ್ರಮಂದಿರಗಳು ಉಳಿಯುತ್ತವೆ ಎಂದು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Mar 14, 2024 05:50 PM