ಅಕ್ಟೋಬರ್​ಗೆ ಮತ್ತೆ ಬರ್ತೀನಿ, ಚಿತ್ರಮಂದಿರ ಖಾಲಿ ಇಟ್ಟಿರಿ: ದರ್ಶನ್

Darshan Thoogudeepa: ದರ್ಶನ್ ತಮ್ಮ ಮುಂದಿನ ಸಿನಿಮಾದ ಬಿಡುಗಡೆ ಬಗ್ಗೆ ಮಾತನಾಡಿದ್ದಾರೆ. ‘ಅಕ್ಟೋಬರ್​ನಲ್ಲಿ ಚಿತ್ರಮಂದಿರ ಖಾಲಿ ಇಟ್ಟಿರಿ, ಬರ್ತಿದ್ದೀನಿ’ ಎಂದಿದ್ದಾರೆ.

ಅಕ್ಟೋಬರ್​ಗೆ ಮತ್ತೆ ಬರ್ತೀನಿ, ಚಿತ್ರಮಂದಿರ ಖಾಲಿ ಇಟ್ಟಿರಿ: ದರ್ಶನ್
Follow us
ಮಂಜುನಾಥ ಸಿ.
|

Updated on: Feb 20, 2024 | 2:35 PM

ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ 50 ದಿನ ಪೂರೈಸಿದೆ. ಪ್ರಸನ್ನ ಚಿತ್ರಮಂದಿರದಲ್ಲಿ ‘ಕಾಟೇರ’ ಸಿನಿಮಾದ 50 ದಿನದ ಸಂಭ್ರಮಾಚರಣೆಯನ್ನು ಆಯೋಜಿಸಲಾಗಿತ್ತು. ದರ್ಶನ್, ನಾಯಕಿ ಆರಾಧನಾ, ನಟಿ ಶ್ರುತಿ ಸೇರಿದಂತೆ ಚಿತ್ರತಂಡದ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಹಲವು ವಿಷಯಗಳ ಬಗ್ಗೆ ನಟ ದರ್ಶನ್ ಮಾತನಾಡಿದರು. ‘ಕಾಟೇರ’ ಸಿನಿಮಾದ ಯಶಸ್ಸಿನ ಜೊತೆಗೆ ಇನ್ನೂ ಕೆಲವು ವಿಷಯಗಳ ಬಗ್ಗೆ ಮಾತನಾಡಿದರು. ತಮಗೆ ಹಾಗೂ ಪ್ರಸನ್ನ ಚಿತ್ರಮಂದಿರಕ್ಕೂ ಇರುವ ನಂಟಿನ ಬಗ್ಗೆಯೂ ಮಾತನಾಡಿದರು. ಇದರ ನಡುವೆ ದರ್ಶನ್ ತಮ್ಮ ಮುಂದಿನ ಸಿನಿಮಾ ಬಗ್ಗೆಯೂ ಮಾತನಾಡಿದರು.

ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಹತ್ವದ ಬಗ್ಗೆ ಮಾತನಾಡುತ್ತಾ, ‘ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಇದ್ದರಷ್ಟೆ ನಿರ್ಮಾಪಕರು, ಸಿನಿಮಾಗಳು ಬದುಕುವುದಕ್ಕೆ ಸಾಧ್ಯ. ಮಲ್ಟಿಪ್ಲೆಕ್ಸ್​ಗಳಲ್ಲಿ ಬಹಳ ವೇರಿಯೇಷನ್ ನಡೆಯುತ್ತಿರುತ್ತದೆ. ಆದರೆ ಸಿಂಗಲ್ ಸ್ಕ್ರೀನ್​ನಲ್ಲಿ ಮಾರಾಟವಾಗುವ ಪ್ರತಿ ಟಿಕೆಟ್​ನಲ್ಲಿಯೂ ಇಂತಿಷ್ಟೆಂದು ನಿರ್ಮಾಪಕರ ಕೈಗೆ ಸೇರುತ್ತದೆ. ಸಿಂಗಲ್ ಸ್ಕ್ರೀನ್​ಗಳಿಂದಲೇ ಸ್ಟಾರ್​ಗಳು ಹುಟ್ಟೋದು ಸಹ’ ಎಂದರು ದರ್ಶನ್.

‘ಅಂಬರೀಶ’ ಸಿನಿಮಾ ಬಿಡುಗಡೆ ಮಾಡುವ ಸಮಯದಲ್ಲಿ ನಮಗೆ ಕೆಜಿ ರೋಡ್ ಮೇನ್ ಚಿತ್ರಮಂದಿರ ಸಿಕ್ಕಿರಲಿಲ್ಲ. ಆಗ ನಾನು ಸಾಕಷ್ಟು ಗಲಾಟೆ ಮಾಡಿದೆ. ಅಪ್ಪಿ-ರಾಘು ಬಳಿ ಫೋನ್​ನಲ್ಲಿ ಏನೇನೋ ಮಾತನಾಡಿದ್ದೆ. ಮನೆಯ ಬಳಿ ಹೋಗಿಯೂ ಗಲಾಟೆ ಮಾಡಿದ್ದಿದೆ. ಅಯ್ಯೋ ಇವನ ಸವಾಸ ಬೇಡ ಅಂದುಕೊಂಡು ಚಿತ್ರಮಂದಿರ ಕೊಟ್ಟಿದ್ದರು, ಇದನ್ನೇ ನಾವು ಮುಖ್ಯ ಚಿತ್ರಮಂದಿರ ಮಾಡಿಕೊಂಡಿದ್ದೆವು’ ಎಂದಿದ್ದಾರೆ ದರ್ಶನ್.

ಇದನ್ನೂ ಓದಿ:ದರ್ಶನ್​ ವರ್ಸಸ್​ ಉಮಾಪತಿ: ‘ಕಾಟೇರ’ ಶೀರ್ಷಿಕೆ ಬಗ್ಗೆ ​ಕೊನೆಗೂ ಮೌನ ಮುರಿದ ಡಿ ಬಾಸ್​

ವರ್ಷಕ್ಕೆರಡು ಸಿನಿಮಾಗಳನ್ನು ಮಾಡಬೇಕು ಎಂದು ಕೆಲವರು ಹೇಳಿದರು, ನಾನಂತೂ ಅದನ್ನೇ ಮಾಡಿಕೊಂಡು ಬರುತ್ತಿದ್ದೇನೆ. ಈಗ ಮತ್ತೆ ಅಕ್ಟೋಬರ್ ತಿಂಗಳಿಗೆ ಬರುತ್ತಿದ್ದೇನೆ, ಚಿತ್ರಮಂದಿರಗಳನ್ನು ಖಾಲಿ ಇಟ್ಟುಕೊಳ್ಳಿ, ಮರೆಯದೇ ನಮಗೆ ಚಿತ್ರಮಂದಿರ ಕೊಡಿ, ಈಗಾಗಲೇ ಪ್ರಕಾಶ್​ಗೆ ಹೇಳಿದ್ದೀನಿ, ಅಕ್ಟೋಬರ್​ಗೆ ರಿಲೀಸ್ ಮಾಡೋಣ, ಏನಾದರೂ ಮಾಡಿ ಧಮ್ ಕಟ್ಟಿಯಾದರೂ ಕೆಲಸ ಮಾಡೋಣ ಒಟ್ಟಿನಲ್ಲಿ ಅಕ್ಟೋಬರ್ ತಿಂಗಳಿಗೆ ಬಿಡುಗಡೆ ಮಾಡೋಣ ಅಂದಿದ್ದೀನಿ, ತಪ್ಪದೇ ಅಕ್ಟೋಬರ್​ಗೆ ಬರ್ತೀನಿ’ ಎಂದಿದ್ದಾರೆ ದರ್ಶನ್.

ಮಿಲನಾ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಸಿನಿಮಾದ ಪ್ರೋಮೋ ಇದೀಗ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ವಿಲನ್ ಶೇಡ್​ನಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಅಕ್ಟೋಬರ್​ನಲ್ಲಿ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ