‘ಕೂಲಿ’ ಸಿನಿಮಾದ ಬಹುತೇಕ ಶೂಟ್ನ ಬಾಡಿ ಡಬಲ್ ಮೂಲಕವೇ ಮುಗಿಸಿದ ನಿರ್ದೇಶಕ
ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ. ಚಿತ್ರೀಕರಣದಲ್ಲಿ, ರಜನಿಕಾಂತ್ ಅವರ 70 ದಿನಗಳ ಶೂಟಿಂಗ್‌ನಲ್ಲಿ 45 ದಿನಗಳಷ್ಟು ಬಾಡಿ ಡಬಲ್ ಬಳಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ವಯಸ್ಸಾದ ಕಾರಣ ಮತ್ತು ಆಕ್ಷನ್ ದೃಶ್ಯಗಳಿಗಾಗಿ ಈ ತಂತ್ರ ಅನುಸರಿಸಲಾಗಿದೆ.

ರಜನಿಕಾಂತ್ (Rajinikanth) ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ 14ರಂದು ರಿಲೀಸ್ ಆಗಲಿದೆ. ಈಗಾಗಲೇ ಬಹುತೇಕ ಶೂಟ್ ಪೂರ್ಣಗೊಳಿಸಿಕೊಂಡಿರೋ ತಂಡ ಪ್ರಚಾರ ಆರಂಭಿಸಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ, ಪ್ಯಾನ್ ಇಂಡಿಯಾ ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ. ಈ ಮಧ್ಯೆ ರಜನಿಕಾಂತ್ ಅವರ ಪಾತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಗಾಸಿಪ್ ಹಬ್ಬಿದೆ. ರಜನಿಕಾಂತ್ ಅವರು ಮಾಡಿರೋ 70 ದಿನಗಳ ಶೂಟ್ ಪೈಕಿ 45 ದಿನಗಳಷ್ಟು ಶೂಟ್ನ ಬಾಡಿ ಡಬಲ್ ಮೂಲಕ ಪೂರ್ಣಗೊಳಿಸಲಾಗಿದೆಯಂತೆ.
ಬಾಡಿ ಡಬಲ್ ತಂತ್ರವನ್ನು ಚಿತ್ರರಂಗದಲ್ಲಿ ಮೊದಲಿನಿಂದಲೂ ಮಾಡುತ್ತಾ ಬರಲಾಗುತ್ತಿದೆ. ಹೀರೋ ರೀತಿಯೇ ಇರುವ ಮತ್ತೋರ್ವ ವ್ಯಕ್ತಿಯನ್ನು ಕರೆತರಲಾಗುತ್ತದೆ. ಮುಖ ಕಾಣದೇ ಇರುವ ದೃಶ್ಯಗಳನ್ನು ಶೂಟ್ಗಳನ್ನು ಮಾಡುವಾಗ ಆತನ ಬಳಕೆ ಮಾಡಿಕೊಳ್ಳಲಾಗುತ್ತದೆ. ರಜನಿ ಬಾಡಿ ಡಬಲ್ ಮಾಡೋ ವ್ಯಕ್ತಿ ಈಗ 45 ದಿನಗಳ ಶೂಟ್ನ ಪೂರ್ಣಗೊಳಿಸಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ರಜನಿಕಾಂತ್ ಅವರಿಗೆ ಈಗ 73 ವರ್ಷ ವಯಸ್ಸು. ಈ ಸಮಯದಲ್ಲಿ ಅವರ ಆ್ಯಕ್ಷನ್ ದೃಶ್ಯ ಮಾಡೋದು, ಬಿಸಿಲಿನಲ್ಲಿ ಹೆಚ್ಚು ಹೊತ್ತು ನಿಲ್ಲೋದು ತುಂಬಾನೇ ಕಷ್ಟಕರ. ಹೀಗಾಗಿ, ನಿರ್ದೇಶಕರು ರಜನಿ ಫೇಸ್ ಕಾಣದೇ ಇರುವ ಕಡೆಗಳಲ್ಲಿ ಬಾಡಿ ಡಬಲ್ ಬಳಕೆ ಮಾಡಿದ್ದಾರೆ. ಇದರಿಂದ ರಜನಿಕಾಂತ್ಗೆ ಸಾಕಷ್ಟು ವಿಶ್ರಾಂತಿ ಸಿಕ್ಕಂತೆ ಆಗಿದೆ.
‘ಕೂಲಿ’ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳು ಇರಲಿವೆ. ಇದನ್ನು ರಜನಿಕಾಂತ್ ಬದಲು ಡ್ಯೂಪ್ ಮೂಲಕ ಮಾಡಿಸಲಾಗಿದೆ. ಇದನ್ನು ಸಾಕಷ್ಟು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಎಲ್ಲಿಯೂ ತೆರೆಮೇಲೆ ಇರೋದು ರಜನಿಕಾಂತ್ ಅಲ್ಲ ಎಂದು ಅಭಿಮಾನಿಗಳಿಗೆ ಅನಿಸಬಾರದು.
ಇದನ್ನೂ ಓದಿ: ‘ನಾನು ಕಲಾವಿದರ ಮೂರು ವರ್ಷ ಕೂರಿಸಲ್ಲ’; ರಾಜಮೌಳಿಗೆ ಟಾಂಗ್ ಕೊಟ್ಟ ‘ಕೂಲಿ’ ನಿರ್ದೇಶಕ
ಲೋಕೇಶ್ ಕನಗರಾಜ್ ಅವರು ‘ಕೂಲಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅವರು ಕೇವಲ 7-8 ತಿಂಗಳಲ್ಲಿ ಸಿನಿಮಾ ಶೂಟ್ನ ಪೂರ್ಣಗೊಳಿಸಿರೋದು ಅವರ ಹೆಚ್ಚುಗಾರಿಕೆ. ಈ ಚಿತ್ರದಲ್ಲಿ ಕನ್ನಡದ ಉಪೇಂದ್ರ, ತೆಲುಗಿನ ನಾಗಾರ್ಜುನ, ಹಿಂದಿಯ ಆಮಿರ್ ಖಾನ್ ಅವರು ನಟಿಸಿದ್ದಾರೆ ಅನ್ನೋದು ವಿಶೇಷ. ಆಗಸ್ಟ್ 14ರಂದು ಈ ಸಿನಿಮಾ ತಮಿಳಿನ ಜೊತೆ ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:32 am, Tue, 13 May 25








