‘ನಾನು ಕಲಾವಿದರ ಮೂರು ವರ್ಷ ಕೂರಿಸಲ್ಲ’; ರಾಜಮೌಳಿಗೆ ಟಾಂಗ್ ಕೊಟ್ಟ ‘ಕೂಲಿ’ ನಿರ್ದೇಶಕ
ಲೋಕೇಶ್ ಕನಗರಾಜ್ ಅವರ ಮುಂಬರುವ ಚಿತ್ರ 'ಕೂಲಿ' ರಜನಿಕಾಂತ್, ನಾಗಾರ್ಜುನ, ಆಮಿರ್ ಖಾನ್, ಉಪೇಂದ್ರ, ಸೌಬಿನ್ ಶಾಹಿರ್ ಮತ್ತು ಶ್ರುತಿ ಹಾಸನ್ ಅವರಂತಹ ಬಹುಭಾಷಾ ತಾರಾಗಣವನ್ನು ಒಳಗೊಂಡಿದೆ. ಚಿತ್ರವನ್ನು 6-8 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಲೋಕೇಶ್ ಅವರು ರಾಜಮೌಳಿ ಅವರ ಚಿತ್ರಗಳಿಗೆ ಹೋಲಿಸಿದರೆ ತಮ್ಮ ಚಿತ್ರಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ವಿಧಾನವನ್ನು ವಿವರಿಸಿದ್ದಾರೆ

ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಅವರು ತಮ್ಮ ವೃತ್ತಿ ಜೀವನದಲ್ಲಿ ಕೇವಲ ಒಂದೇ ಒಂದು ಫ್ಲಾಪ್ ಕೊಟ್ಟಿದ್ದಾರೆ. ಉಳಿದಂತೆ, ‘ಕೈದಿ’, ‘ವಿಕ್ರಮ್’ ಮೊದಲಾದವು ಹಿಟ್ ಸಿನಿಮಾಗಳು. ಇದು ಅವರ ಹೆಚ್ಚುಗಾರಿಕೆ. ಈ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿವೆ. ಈಗ ‘ಕೂಲಿ’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ರಜನಿಕಾಂತ್ ನಟನೆಯ ಈ ಚಿತ್ರ ಆಗಸ್ಟ್ 14ರಂದು ತೆರೆಗೆ ಬರಲಿದೆ. ವಿಶೇಷ ಎಂದರೆ ಈ ಚಿತ್ರವನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಿದ್ದಾರೆ ಲೋಕೇಶ್. ಈ ಬಗ್ಗೆ ಮಾತನಾಡುವಾಗ ರಾಜಮೌಳಿ ಬಗ್ಗೆ ನೇರವಾಗಿ ಹೇಳಿದ್ದಾರೆ.
‘ಕೂಲಿ’ ಸಿನಿಮಾದಲ್ಲಿ ಕೇವಲ ರಜನಿಕಾಂತ್ ಮಾತ್ರ ಇಲ್ಲ. ಇದು ಮಲ್ಟಿಸ್ಟಾರರ್ ಸಿನಿಮಾ. ತೆಲುಗಿನಿಂದ ನಾಗಾರ್ಜುನ, ಹಿಂದಿಯಿಂದ ಆಮಿರ್ ಖಾನ್, ಕನ್ನಡದಿಂದ ಉಪೇಂದ್ರ, ಮಲಯಾಳಂನಿಂದ ಸೌಬಿನ್ ಶಾಹಿರ್, ಬಹುಭಾಷಾ ನಟಿ ಶ್ರುತಿ ಹಾಸನ್ ಈ ಚಿತ್ರದಲ್ಲಿ ಇದ್ದಾರೆ. ಪ್ಯಾನ್ ಇಂಡಿಯಾ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಈ ಕಲಾವಿದರ ಆಯ್ಕೆ ನಡೆದಿದೆ. ಬಿಗ್ ಬಜೆಟ್ ಸಿನಿಮಾ ಬಗ್ಗೆ ಲೋಕೇಶ್ ಮಾತನಾಡಿದ್ದಾರೆ.
‘ನಾನು ಒಂದು ದೊಡ್ಡ ಮಲ್ಟಿಸ್ಟಾರರ್ ಸಿನಿಮಾ ಮಾಡುತ್ತಿದ್ದರೂ, ನಟರನ್ನು 3 ವರ್ಷಗಳ ಕಾಲ ಕುಳಿತುಕೊಳ್ಳುವಂತೆ ಮಾಡುವ ‘ಆರ್ಆರ್ಆರ್ ರೀತಿಯ ಸಿನಿಮಾಗಳನ್ನು ನಾನು ಮಾಡುವುದಿಲ್ಲ. ನಾನು ನನ್ನ ಸಿನಿಮಾಗಳನ್ನು 6-8 ತಿಂಗಳಲ್ಲಿ ಮುಗಿಸುತ್ತೇನೆ. ಆ ಸಮಯದಲ್ಲಿ ನಟರು ಈ ಚಿತ್ರಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು. ಏಕೆಂದರೆ, ಅವರ ಗೆಟಪ್ಗೆ ಯಾವುದೇ ಅಡ್ಡಿ ಬರಬಾರದು ಎಂಬುದು ನನ್ನ ಒತ್ತಾಯ’ ಎಂದಿದ್ದಾರೆ ಲೋಕೇಶ್.
‘ಕೂಲಿ’ ಸಿನಿಮಾ ಶೂಟ್ ವೇಳೆ ಸೌಬಿನ್ ಅವರಿಗೆ ಏನಿಲ್ಲ ಎಂದರೂ 6-7 ಸಿನಿಮಾಗಳು ಬಂದಿದ್ದವಂತೆ. ಆದರೆ, ಅದನ್ನು ಅವರು ಒಪ್ಪಿಕೊಂಡಿಲ್ಲ. ಈ ಚಿತ್ರಕ್ಕಾಗಿ ಸಂಪೂರ್ಣ ತೊಡಗಿಸಿಕೊಂಡರು. ಒಂದೊಮ್ಮೆ 3 ವರ್ಷಗಳ ಕಾಲ ಒಂದೇ ಸಿನಿಮಾ ಮಾಡಬೇಕು ಎಂದರೆ ಆ ಕಲಾವಿದನಿಗೆ 20-25 ಆಫರ್ಗಳು ತಪ್ಪುತ್ತಿದ್ದವು.
ಇದನ್ನೂ ಓದಿ: ಜೂ ಎನ್ಟಿಆರ್-ರಾಮ್ ಚರಣ್ ಜೊತೆ ಸೇರಿದ ಮಹೇಶ್ ಬಾಬು, ರಾಜಮೌಳಿ, ವಿಷಯ ಏನು?
ರಾಜಮೌಳಿ ಸಿನಿಮಾ ಮಾಡಿದರೆ ಈ ಚಿತ್ರದ ಪ್ರಮುಖ ಕಲಾವಿದರು ಯಾವಾಗಲೂ ಬೇರೆ ಸಿನಿಮಾ ಒಪ್ಪಿಕೊಳ್ಳಬಾರದು. ಇದನ್ನು ಅನೇಕ ಕಲಾವಿದರು ಪಾಲಿಸಿದ್ದಾರೆ. ಆದರೆ, ಇದೇ ವಿಚಾರದಲ್ಲಿ ರಾಜಮೌಳಿಗೆ ಟೀಕೆ ವ್ಯಕ್ತವಾಗಿದೆ. ಈ ಟೀಕೆಗಳ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:03 pm, Mon, 12 May 25







