AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakesh Poojary Death: ‘ಕಾಂತಾರ: ಚಾಪ್ಟರ್ 1’ ಶೂಟ್ ಮುಗಿಸಿ ಬಂದಿದ್ದ ರಾಕೇಶ್ ಪೂಜಾರಿ; ರಾತ್ರೋರಾತ್ರಿ ಹೃದಯಾಘಾತ

Kantara: Chapter 1: ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಆಪ್ತ ಗೆಳೆಯ ಗೋವಿಂದೇ ಗೌಡ (ಜಿಜಿ) ಅವರು ರಾಕೇಶ್ ಅವರ ಕೊನೆಯ ಕ್ಷಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಂತಾರ ಚಿತ್ರೀಕರಣದ ನಂತರ ಗೆಳೆಯನ ಮದುವೆಯಲ್ಲಿ ಭಾಗವಹಿಸಿದ್ದ ರಾಕೇಶ್, ಮಧ್ಯರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಜಿಜಿ ತಿಳಿಸಿದ್ದಾರೆ.

Rakesh Poojary Death: ‘ಕಾಂತಾರ: ಚಾಪ್ಟರ್ 1’ ಶೂಟ್ ಮುಗಿಸಿ ಬಂದಿದ್ದ ರಾಕೇಶ್ ಪೂಜಾರಿ; ರಾತ್ರೋರಾತ್ರಿ ಹೃದಯಾಘಾತ
ರಾಕೇಶ್ ಪೂಜಾರಿ
ರಾಜೇಶ್ ದುಗ್ಗುಮನೆ
|

Updated on:May 12, 2025 | 7:59 AM

Share

‘ಕಾಮಿಡಿ ಕಿಲಾಡಿಗಳು ಸೀಸನ್ 3’ ಖ್ಯಾತಿಯ ರಾಕೇಶ್ ಪೂಜಾರಿ (Rakesh Poojary) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇದು ಅವರ ಆಪ್ತರಿಗೆ ಹಾಗೂ ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ. ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನಾಗಿತ್ತು ಎಂಬುದನ್ನು ರಾಕೇಶ್ ಪೂಜಾರಿ ಅವರ ಆಪ್ತ ಬಳಗದಲ್ಲಿ ಒಬ್ಬರಾದ ನಟ ಗೋವಿಂದೇ ಗೌಡ (ಜಿಜಿ) ವಿವರಿಸಿದ್ದಾರೆ. ಮೇ 11ರ ಬೆಳಿಗ್ಗೆ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ರ ಶೂಟ್​ನಲ್ಲಿ ಅವರು ಇದ್ದರು. ಮಧ್ಯರಾತ್ರಿ ಅವರಿಗೆ ಸಾವು ಸಂಭವಿಸಿದೆ.

ಟಿವಿ9 ಕನ್ನಡದ ಜೊತೆ ಮಾತನಾಡಿರೋ ಜಿಜಿ, ‘ಒಳ್ಳೆಯ ಕಲಾವಿದ ಎನ್ನುವುದಕ್ಕಿಂತ ಒಳ್ಳೆಯ ಮನುಷ್ಯನಾಗಿದ್ದ. ನನಗೂ ಆತ ತುಂಬಾನೇ ಆಪ್ತ. ಎಲ್ಲರ ಪ್ರೀತಿ ಪಾತ್ರ ವ್ಯಕ್ತಿ ಆಗಿದ್ದ. ಪ್ಲೇಟ್​ಲೆಟ್ಸ್ ಕಡಿಮೆ ಇತ್ತು. ಆ ಬಳಿ ಹಾರ್ಟ್​ ಅಟ್ಯಾಕ್ ಆಗಿದೆ. ವಿಷಯ ಕೇಳಿ ತುಂಬಾನೇ ನೋವಾಗುತ್ತಿದೆ. ಇದನ್ನು ನಂಬೋಕೆ ಆಗುತ್ತಿಲ್ಲ’ ಎಂದು ಭಾವುಕರಾಗಿ ಮಾತನಾಡಿದ್ದಾರೆ. ಅವರಿಗೆ ಈ ವಿಚಾರವನ್ನು ಅರಗಿಸಿಕೊಳ್ಳೋಕೆ ಸಾಧ್ಯವೇ ಆಗುತ್ತಿಲ್ಲ.

‘ಬೆಳಿಗ್ಗೆ ಕಾಂತಾರ ಸಿನಿಮಾ ಶೂಟ್​ನಲ್ಲಿ ಇದ್ದ. ಶೂಟ್ ಮುಗಿಸಿ ಸಂಜೆ ಗೆಳೆಯರ ಮದುವೆ ಫಂಕ್ಷನ್​ಗೆ ಹೋಗಿದ್ದಾನೆ. ಸುಸ್ತು ಎನ್ನುತ್ತಿದ್ದ. ಮಧ್ಯರಾತ್ರಿ ಹಾರ್ಟ್​ ಅಟ್ಯಾಕ್ ಆಯ್ತು. ಎಲ್ಲರೂ ನನಗೆ ಕಾಲ್ ಮಾಡಿದ್ದರು. ಆದರೆ ಮೊಬೈಲ್ ಸೈಲೆಂಟ್​ನಲ್ಲಿ ಇದ್ದಿದ್ದರಿಂದ ವಿಷಯ ಗೊತ್ತಾಗಿರಲಿಲ್ಲ. ಬೆಳಿಗ್ಗೆ ಎದ್ದು ನೋಡಿದಾಗ ವಿಷಯ ತಿಳಿಯಿತು’ ಎಂದಿದ್ದಾರೆ ಅವರು ಜಿಜಿ.

ಇದನ್ನೂ ಓದಿ
Image
ವಿಧಿ ಕ್ರೂರ; ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ್ ಪೂಜಾರಿ ನಿಧನ
Image
ರಾಧಿಕಾ ಪಂಡಿತ್ ಕೂದಲ ಮೇಲೆ ಯಶ್​ಗೆ ಇದೆ ವಿಶೇಷ ಪ್ರೀತಿ; ಇಲ್ಲಿದೆ ಸಾಕ್ಷಿ
Image
ಪ್ರೀತಿಯಿಂದ ವಿಜ್ಜು ಎಂದು ಕರೆದು ಬರ್ತ್​ಡೇ ವಿಶ್ ತಿಳಿಸಿದ ರಶ್ಮಿಕಾ ಮಂದಣ್ಣ
Image
ಪೊಲೀಸರಿಗೆ ಆವಾಜ್ ಹಾಕಿದ ‘ಜೈಲರ್’ ಖ್ಯಾತಿಯ ವಿನಾಯಕನ್; ಮತ್ತೆ ನಟನ ಕಿರಿಕ್

‘ಇತ್ತೀಚೆಗೆ ರಾಕೇಶ್​ಗೆ ಬೈಕ್ ಸ್ಕಿಡ್ ಆಗಿ ಅಪಘಾತ ಆಗಿತ್ತು. ಆದರೆ, ಬೇಗ ರಿಕವರಿ ಆದ. ಅದನ್ನು ಹೊರತುಪಡಿಸಿ ಅವನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆತ ತುಂಬಾನೇ ಆ್ಯಕ್ಟೀವ್ ಆಗಿದ್ದ. ಎಲ್ಲರಿಗೂ ಬೇಕಾಗಿದ್ದ ವ್ಯಕ್ತಿ. ತುಂಬಾನೇ ನೋವಾಗುತ್ತಿದೆ. ಮಾನವೀಯ ವ್ಯಕ್ತಿ. ಅದು ನನಗೆ ಅನುಭವಕ್ಕೆ ಬಂದಿತ್ತು. ನನ್ನ ಪಾಪು ಯಾರ ಜೊತೆಯೂ ಹೋಗುತ್ತಿರಲಿಲ್ಲ. ಆದರೆ, ಅವನ ಜೊತೆ ತುಂಬಾನೇ ಹೊತ್ತು ಆಟ ಆಡಿದ್ದ’ ಎಂದಿದ್ದಾರೆ ಜಿಜಿ.

ಇದನ್ನೂ ಓದಿ: ವಿಧಿ ಕ್ರೂರ; ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ

ರಾಕೇಶ್ ನಿಧನ ವಾರ್ತೆ ಇನ್ನೂ ತಾಯಿಗೆ ಸಿಕ್ಕಿಲ್ಲ. ರಾಕೇಶ್​ಗೆ ತಂದೆಯೂ ಇಲ್ಲ. ಈಗ ಮಗನ ಸಾವಿನ ವಿಚಾರವನ್ನು ಅವರ ತಾಯಿ ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಅನ್ನೊದು ಸದ್ಯದ ಪ್ರಶ್ನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:54 am, Mon, 12 May 25

ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ