AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರಿಗೆ ಆವಾಜ್ ಹಾಕಿದ ‘ಜೈಲರ್’ ಖ್ಯಾತಿಯ ವಿನಾಯಕನ್; ಮತ್ತೆ ಬಂಧನ

ಮಲಯಾಳಂ ಚಿತ್ರರಂಗದ ಪ್ರಸಿದ್ಧ ನಟ ವಿನಾಯಕನ್ ಅವರು ಮತ್ತೊಮ್ಮೆ ಮದ್ಯಪಾನದಿಂದಾಗಿ ಸುದ್ದಿಯಾಗಿದ್ದಾರೆ. ಕೇರಳದಲ್ಲಿ ಹೋಟೆಲ್‌ನಿಂದ ಹೊರಬರುವಾಗ ಜಗಳವಾಡಿದ್ದಾರೆ ಮತ್ತು ಬಂಧನಕ್ಕೊಳಗಾಗಿದ್ದಾರೆ. ಆ ಬಳಿಕ ಅವರನ್ನು ಬಿಡಲಾಗಿದೆ. 'ಜೈಲರ್' ಸಿನಿಮಾದಲ್ಲಿನ ಅವರ ಪಾತ್ರದಿಂದಾಗಿ ಜನಪ್ರಿಯರಾಗಿರುವ ವಿನಾಯಕನ್, ಈ ಹಿಂದೆಯೂ ಇದೇ ರೀತಿಯ ಘಟನೆಗಳಲ್ಲಿ ಭಾಗಿಯಾಗಿದ್ದಾರೆ.

ಪೊಲೀಸರಿಗೆ ಆವಾಜ್ ಹಾಕಿದ ‘ಜೈಲರ್’ ಖ್ಯಾತಿಯ ವಿನಾಯಕನ್; ಮತ್ತೆ ಬಂಧನ
ವಿನಾಯಕನ್
ರಾಜೇಶ್ ದುಗ್ಗುಮನೆ
|

Updated on:May 09, 2025 | 8:50 AM

Share

ಮಲಯಾಳಂ ನಟ ವಿನಾಯಕನ್ (Vinayakan) ಅವರು ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ಪುಂಡಾಟಿಕೆ ನಡೆಸಿದ ಅವರನ್ನು ಗುರುವಾರ (ಮೇ 9) ಬಂಧಿಸಲಾಗಿದೆ. ಕೇರಳದ ಅಂಚಲುಮ್ಮೂಡು ಭಾಗದಲ್ಲಿ ಈ ಘಟನೆ ನಡೆದಿದೆ. ‘ಜೈಲರ್’ ರೀತಿಯ ಹಿಟ್ ಚಿತ್ರಗಳನ್ನು ನೀಡಿದವರು ವಿನಾಯಕನ್. ವಿಲನ್ ಪಾತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ಆದರೆ, ಈ ರೀತಿಯ ಕಿರಿಕ್​ಗಳಿಂದ ಅವರು ಸುದ್ದಿ ಆಗುತ್ತಾರೆ.

ವಿನಾಯಕನ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಮಾಡುವ ವಿಲನ್ ಪಾತ್ರಗಳು ಸಖತ್ ಇಷ್ಟ ಆಗುತ್ತದೆ. ರಜನಿಕಾಂತ್, ಶಿವರಾಜ್​ಕುಮಾರ್ ಮೊದಲಾದವರು ನಟಿಸಿದ ‘ಜೈಲರ್’ ಚಿತ್ರದಲ್ಲಿ ಅವರು ಮಾಡಿದ ವರ್ಮ ಹೆಸರಿನ ಪಾತ್ರ ಸಾಕಷ್ಟು ಗಮನ ಸೆಳೆಯಿತು. ಈಗ ಅವರು ಬಂಧನಕ್ಕೆ ಒಳಗಾಗಿ ಸುದ್ದಿ ಆಗಿದ್ದಾರೆ.

ಮೇ 2ರಿಂದ ವಿನಾಯಕನ್ ಅವರು ಅಂಚಲುಮ್ಮೂಡು ಭಾಗದ ಹೋಟೆಲ್​ನಲ್ಲಿ ಉಳಿದುಕೊಂಡಿದ್ದಾರೆ. ಸಿನಿಮಾ ಶೂಟ್ ಹಿನ್ನೆಲೆಯಲ್ಲಿ ಅವರು ಇಲ್ಲಿ ವಾಸವಿದ್ದಾರೆ. ಗುರುವಾರ ಹೋಟೆಲ್​ನಿಂದ ಚೆಕ್​ಔಟ್ ಆಗುವಾಗ ಅವರು ಕಿರಿಕ್ ಮಾಡಿಕೊಂಡಿದ್ದಾರೆ. ಅವರು ಕುಡಿದ ಮತ್ತಿನಲ್ಲಿ ಜಗಳ ಆಡಿದ್ದಾರೆ.

ಇದನ್ನೂ ಓದಿ
Image
ಮದುವೆ ವಿಚಾರದಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತಿನಂತೆ ನಡೆದುಕೊಂಡ ಚೈತ್ರಾ
Image
ಚೈತ್ರಾ ಕುಂದಾಪುರ ಮದುವೆ; ವಿಡಿಯೋ ಮೂಲಕ ಹುಡುಗನ ಪರಿಚಯ
Image
ಶಾರುಖ್ ಮೋಸ ಮಾಡಿದರೆ...; ಗೌರಿ ಖಾನ್ ಬೋಲ್ಡ್ ಉತ್ತರ ಮೆಚ್ಚಲೇಬೇಕು
Image
‘ನಿನ್ನ ದೇಹ ನೀನೇ ನಿರ್ಧರಿಸು’; ದೀಪಿಕಾಗೆ ನೇರವಾಗಿ ಹೇಳಿದ್ದ ರಣವೀರ್ ಸಿಂಗ್

ವಿನಾಯಕನ್ ಅವರನ್ನು ವೈದ್ಯಕೀಯ ಚೆಕಪ್​ಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ ಅವರು ಮಿತಿ ಮೀರಿ ಮದ್ಯ ಸೇವನೆ ಮಾಡಿದ್ದು ಸ್ಪಷ್ಟವಾಗಿದೆ. ಸೆಕ್ಷನ್ 118 (ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳ ಪೊಲೀಸರು ಅವರನ್ನು ಬಂಧಿಸಿದ ಬಳಿಕ ಅವರ ವಿರುದ್ಧವೂ ಕೂಗಾಡಿ, ಅವಾಜ್ ಹಾಕಿದ್ದು ಕಂಡು ಬಂದಿದೆ. ಸ್ಟೇಷನ್ ಜಾಮೀನು ನೀಡಿ ಅವರನ್ನು ಕಳುಹಿಸಲಾಗಿದೆ. ಅವರ ಸಹಾಯಕರು ಶ್ಯೂರಿಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: ನೆರೆ ಮನೆಯವರ ಎದುರು ಅಶ್ಲೀಲವಾಗಿ ವರ್ತಿಸಿದ ‘ಜೈಲರ್’ ನಟ ವಿನಾಯಕನ್; ವಿಡಿಯೋ ವೈರಲ್

ವಿನಾಯಕನ್ ಅವರು ಒಳ್ಳೆಯ ಕಲಾವಿದನಾದರೂ ಕುಡಿತವೇ ಅವರಿಗೆ ವೀಕ್​ನೆಸ್ ಆಗಿದೆ. ಈ ಮೊದಲು ಕೂಡ ಅವರು ಕುಡಿದು ಗಲಾಟೆ ಮಾಡಿಕೊಂಡಿದ್ದರು. ಕೊಚ್ಚಿ-ಹೈದರಾಬಾದ್-ಗೋವಾ ವಿಮಾನದಲ್ಲಿ ಅವರು ಮದ್ಯದ ಅಮಲಿನಲ್ಲಿ ಇದ್ದರು ಮತ್ತು ಜಗಳ ಆಡಿದ್ದರು. 2024ರಲ್ಲಿ ಈ ಘಟನೆ ನಡೆದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:46 am, Fri, 9 May 25

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?