AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಗನ್ ಪಾಲಿಗೆ ಮೈನಸ್ ಆದ ಬಿಗ್ ಬಾಸ್ ಟಾಸ್ಕ್: ಹೆಚ್ಚಿತು ಯಶಸ್ ಮೈಲೇಜ್

ಈ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಗಗನ್ ಚಿನ್ನಪ್ಪ ಮತ್ತು ಯಶಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ಸೌಂದರ್ಯಾ ಶೆಟ್ಟಿಯ ಮನಸ್ಸನ್ನು ಒಲಿಸಿಕೊಳ್ಳಲು ಇಬ್ಬರೂ ಪ್ರಯತ್ನಿಸುತ್ತಿದ್ದಾರೆ. ಈ ವಿಚಾರದಲ್ಲಿ ಗಗನ್ ಚಿನ್ನಪ್ಪ ಅವರು ಹಿಂದುಳಿದಿದ್ದಾರೆ. ಯಶಸ್ ಅವರು ತುಂಬ ಸುಲಭವಾಗಿ ಟಾಸ್ಕ್ ನಿಭಾಯಿಸುತ್ತಿದ್ದಾರೆ.

ಗಗನ್ ಪಾಲಿಗೆ ಮೈನಸ್ ಆದ ಬಿಗ್ ಬಾಸ್ ಟಾಸ್ಕ್: ಹೆಚ್ಚಿತು ಯಶಸ್ ಮೈಲೇಜ್
Gagan Chinnappa, YashasImage Credit source: Colors Kannada
ಮದನ್​ ಕುಮಾರ್​
|

Updated on: Oct 28, 2026 | 10:41 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈ ವಾರ ಡಿಫರೆಂಟ್ ಆದ ಟಾಸ್ಕ್ ನೀಡಲಾಗಿದೆ. ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ಮಾಡಲಾಗಿದೆ. ಕ್ಯಾಪ್ಟನ್ ಆಗಿರುವ ಸೌಂದರ್ಯಾ ಶೆಟ್ಟಿಗೆ ಸ್ವಯಂವರ ಮಾಡುವ ರೀತಿಯಲ್ಲಿ ಟಾಸ್ಕ್ ರೂಪುಗೊಂಡಿದೆ. ಒಂದು ತಂಡದಲ್ಲಿ ಯಶಸ್ ಅವರು ವರನಾಗಿದ್ದರೆ, ಇನ್ನೊಂದು ತಂಡದಲ್ಲಿ ಗಗನ್ ಚಿನ್ನಪ್ಪ ಅವರು ವರನಾಗಿದ್ದಾರೆ. ಇಬ್ಬರ ಪೈಕಿ ಯಾರು ಸೌಂದರ್ಯಾ ಶೆಟ್ಟಿಯ ಮನಸ್ಸು ಗೆಲ್ಲುತ್ತಾರೆ ಎಂಬುದರ ಮೇಲೆ ಭವಿಷ್ಯ ನಿರ್ಧಾರ ಆಗಲಿದೆ.

ಒಂದೊಂದು ಟಾಸ್ಕ್ ಒಬ್ಬೊಬ್ಬರ ಪರವಾಗಿ ಇರುತ್ತದೆ. ಭುಜಬಲ ಪ್ರದರ್ಶಿಸಬೇಕೋ ಅಥವಾ ಬುದ್ಧಿಬಲ ಬಳಸಬೇಕೋ ಎಂಬ ಆಧಾರದ ಮೇಲೆ ಟಾಸ್ಕ್ ಸುಲಭವೋ ಅಥವಾ ಕಷ್ಟವೋ ಎಂಬುದು ಗೊತ್ತಾಗುತ್ತದೆ. ಆದರೆ ಈ ಬಾರಿ ಬಿಗ್ ಬಾಸ್ ನೀಡಿರುವ ಟಾಸ್ಕ್ ಬೇರೆ ರೀತಿ ಇದೆ. ಸೌಂದರ್ಯಾ ಶೆಟ್ಟಿ ಅವರನ್ನು ಮನವೊಲಿಸಲು ಬೇರೆಯದೇ ಪ್ರತಿಭೆ ಬೇಕಾಗಿದೆ.

ಈ ಟಾಸ್ಕ್ ಯಶಸ್ ಅವರ ಪರವಾಗಿದೆ. ಯಾಕೆಂದರೆ, ಅವರು ಮೊದಲಿನಿಂದಲೂ ಮಹಿಳಾ ಸ್ಪರ್ಧಿಗಳ ಜೊತೆ ಹೆಚ್ಚು ಆಪ್ತವಾಗಿದ್ದಾರೆ. ಹುಡುಗಿಯರ ಜೊತೆ ಆಪ್ತವಾಗಿ ಬೆರೆಯುವುದು ಅವರಿಗೆ ಕಷ್ಟವೇ ಅಲ್ಲ. ಈಗಾಗಲೇ ಅವರು ಸೌಂದರ್ಯಾ ಶೆಟ್ಟಿ ಜೊತೆ ಬಹಳ ಸಲುಗೆಯಿಂದ ನಡೆದುಕೊಂಡು ಅವರಿಗೆ ಅಭ್ಯಾಸ ಆಗಿದೆ. ಆದ್ದರಿಂದ ಈಗ ಈ ಟಾಸ್ಕ್​ನಲ್ಲಿ ಅವರು ಸುಲಭವಾಗಿ ಮನವೊಲಿಸುತ್ತಿದ್ದಾರೆ.

ಆದರೆ ಗಗನ್ ಚಿನ್ನಪ್ಪ ಅವರಿಗೆ ಈ ಟಾಸ್ಕ್ ಕಷ್ಟ ಆಗಿದೆ. ಅವರ ವ್ಯಕ್ತಿತ್ವಕ್ಕೆ ವಿರುದ್ಧವಾದ ಟಾಸ್ಕ್ ಇದಾಗಿದೆ. ಆರಂಭದಿಂದಲೂ ಗಗನ್ ಅವರು ಮಹಿಳಾ ಸ್ಪರ್ಧಿಗಳ ಜೊತೆ ಹೆಚ್ಚು ಬೆರೆಯುತ್ತಿಲ್ಲ. ಹುಡುಗಿಯರ ಜೊತೆ ಅವರು ಆಪ್ತವಾಗಿ ನಡೆದುಕೊಂಡಿಲ್ಲ. ಈಗ ಏಕಾಏಕಿ ಸೌಂದರ್ಯಾ ಶೆಟ್ಟಿಯ ಮನಸ್ಸು ಒಲಿಸಿಕೊಳ್ಳಬೇಕು ಎಂದು ಅವರಿಗೆ ಸಹಜವಾಗಿಯೇ ಕಷ್ಟ ಆಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಗಗನ್, ಧನುಷ್ ಸೇರಿ 7 ಸ್ಪರ್ಧಿಗಳು ಈ ವಾರ ನಾಮಿನೇಟ್

ತಾವು ಏನು ಮಾಡಬೇಕು ಎಂಬುದೇ ಗಗನ್ ಚಿನ್ನಪ್ಪ ಅವರಿಗೆ ತಿಳಿಯುತ್ತಿಲ್ಲ. ಅದಕ್ಕಾಗಿ ಅವರು ಆಸಿಯಾ ಜೊತೆ ಹೋಗಿ ಸಲಹೆ ಕೇಳಿದ್ದಾರೆ. ಇದು ತಮಗೆ ಸೂಕ್ತವಾಗುವ ಟಾಸ್ಕ್ ಅಲ್ಲ ಎಂದು ಅವರು ಅಸಹಾಯಕತೆಯಿಂದ ಹೇಳಿಕೊಂಡಿದ್ದಾರೆ. ಆದರೆ ಯಶಸ್ ಅವರು ನಿರಾಯಾಸವಾಗಿ ಈ ಟಾಸ್ಕ್ ಆಡುತ್ತಿದ್ದಾರೆ. ಅವರು ಮಾಡುವ ಪ್ರಯತ್ನಗಳು ಸೌಂದರ್ಯಾ ಶೆಟ್ಟಿಗೆ ಇಷ್ಟ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More