AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಕನ್ನಡ: ಗಗನ್, ಧನುಷ್ ಸೇರಿ 7 ಸ್ಪರ್ಧಿಗಳು ಈ ವಾರ ನಾಮಿನೇಟ್

ಆಸಿಯಾ, ಕುಮಾರಿ, ಕಿರಣ್ ಶಾಸ್ತ್ರಿ, ಜಗದೀಶ್, ಪ್ರಶಾಂತ್, ಗಗನ್ ಚಿನ್ನಪ್ಪ ಹಾಗೂ ಧನುಷ್ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಅವರ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ. ದೊಡ್ಮನೆಯಲ್ಲಿ ಉಳಿದುಕೊಳ್ಳಲು ಈ ಎಲ್ಲ ಸ್ಪರ್ಧಿಗಳು ತಮ್ಮ ಆಟದ ಶೈಲಿ ಬದಲಾಯಿಸಿಕೊಳ್ಳುವ ಅನಿವಾರ್ಯತೆ ಇದೆ.

ಬಿಗ್ ಬಾಸ್ ಕನ್ನಡ: ಗಗನ್, ಧನುಷ್ ಸೇರಿ 7 ಸ್ಪರ್ಧಿಗಳು ಈ ವಾರ ನಾಮಿನೇಟ್
Bigg Boss Kannada NominationImage Credit source: Colors Kannada
ಮದನ್​ ಕುಮಾರ್​
|

Updated on: Oct 27, 2026 | 10:41 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ 50 ದಿನಗಳು ಕಳೆದಿವೆ. ಶೇಕಡ 50 ಭಾಗ ಆಟ ಮುಗಿದಿದೆ. ಇನ್ನುಳಿದ ದಿನಗಳಲ್ಲಿ ಆಟದ ತೀವ್ರತೆ ಜಾಸ್ತಿ ಆಗಲಿದೆ. ಹಳೇ ಸ್ಪರ್ಧಿಗಳು ಹಲವರು ಎಲಿಮಿನೇಟ್ ಆಗಿದ್ದಾರೆ. ಅದೇ ರೀತಿ, ವೈಲ್ಡ್ ಕಾರ್ಡ್ ಸ್ಪರ್ಧಿಗಳು ಕೂಡ ಆಟವನ್ನು ಮುಂದುವರಿಸಿದ್ದಾರೆ. ಸೆಲೆಬ್ರಿಟಿ, ಕಾಮನರ್ ಎಂಬ ವ್ಯತ್ಯಾಸ ಇಲ್ಲದೇ ಈಗ ಬಿಗ್ ಬಾಸ್ ಆಟ ಮುಂದುವರಿಯುತ್ತಿದೆ. ಈ ವಾರ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಏಳು ಸ್ಪರ್ಧಿಗಳ ಹೆಸರು ನಾಮಿನೇಷನ್ ಪಟ್ಟಿಯಲ್ಲಿದೆ.

ಈ ವಾರ ಸೌಂದರ್ಯಾ ಶೆಟ್ಟಿ ಅವರು ಕ್ಯಾಪ್ಟನ್ ಆಗಿದ್ದಾರೆ. ಅವರ ಉಸ್ತುವಾರಿಯಲ್ಲಿ ನಾಮಿನೇಷನ್ ಪ್ರಕ್ರಿಯೆ ಮಾಡಲಾಗಿದೆ. ಟಾಸ್ಕ್ ಮೂಲಕ ನಾಮಿನೇಟ್ ಮಾಡುವ ಅಧಿಕಾರವನ್ನು ಕೆಲವು ಸ್ಪರ್ಧಿಗಳಿಗೆ ನೀಡಲಾಯಿತು. ಅಂತಿಮವಾಗಿ ಕೆಲವು ಪ್ರಮುಖ ಸ್ಪರ್ಧಿಗಳು ಕೂಡ ಈ ವಾರ ನಾಮಿನೇಟ್ ಆಗಿರುವುದರಿಂದ ವೀಕ್ಷಕರಲ್ಲಿ ಕೌತುಕ ಹೆಚ್ಚಾಗಿದೆ.

ಆಸಿಯಾ, ಕಿರಣ್ ಶಾಸ್ತ್ರಿ, ಕುಮಾರಿ, ಜಗದೀಶ್, ಗಗನ್ ಚಿನ್ನಪ್ಪ, ಪ್ರಶಾಂತ್ ಹಾಗೂ ಧನುಷ್ ಅವರು ನಾಮಿನೇಟ್ ಆಗಿದ್ದಾರೆ. ಈ ಎಲ್ಲ ಸ್ಪರ್ಧಿಗಳಿಗೆ ಅವರದ್ದೇ ಆದ ಪ್ಲಸ್ ಮತ್ತು ಮೈನಸ್ ಅಂಶಗಳು ಇವೆ. ಈ ವಾರ ಯಾರು ಸರಿಯಾಗಿ ತಮ್ಮ ಸಾಮರ್ಥ್ಯ ಸಾಬೀತು ಮಾಡುತ್ತಾರೆ ಎಂಬುದರ ಆಧಾರದ ಮೇಲೆ ಅವರ ಭವಿಷ್ಯ ನಿರ್ಧಾರ ಆಗಲಿದೆ.

ಗಗನ್ ಚಿನ್ನಪ್ಪ ಅವರು ಫೈನಲ್ ತಲುಪುವ ಸ್ಪರ್ಧಿ ಎಂಬ ಭಾವನೆ ಹಲವರಿಗೆ ಇದೆ. ಅದೇ ರೀತಿ ಧನುಷ್ ಅವರು ಕೂಡ ಟಾಸ್ಕ್ ವಿಚಾರದಲ್ಲಿ ಹಿಂದೆ ಬೀಳುವುದಿಲ್ಲ. ಆದರೆ ಅವರು ಈ ವಾರ ನಾಮಿನೇಟ್ ಆಗಿರುವುದರಿಂದ ಹೆಚ್ಚು ಎಚ್ಚರಿಕೆಯಿಂದ ಆಟ ಆಡಬೇಕಿದೆ. ಅದೇ ರೀತಿ ಆಸಿಯಾ, ಕಿರಣ್ ಶಾಸ್ತ್ರಿ, ಕುಮಾರಿ, ಜಗದೀಶ್, ಪ್ರಶಾಂತ್ ಕೂಡ ಆಟದ ಶೈಲಿ ಬದಲಾಯಿಸುವ ಅವಶ್ಯಕತೆ ಇದೆ.

ಇದನ್ನೂ ಓದಿ: ಬಿಗ್ ಬಾಸ್ ಅಲ್ಲಿರೋ ಕುಮಾರಿ ವೇಸ್ಟ್; ನೇರವಾಗಿ ತೀರ್ಪು ನೀಡಿದ ಲಕ್ಷ್ಮಿ

ಈ ವಾರ ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ಹಲವು ಮನಸ್ಸುಗಳು ಒಡೆದಿವೆ. ಹಲವರ ನಾಮಿನೇಷನ್​ಗೆ ಕಾರಣವಾದ ಗಾನವಿ ಅವರ ಮೇಲೆ ಅಸಮಾಧಾನ ಉಂಟಾಗಿದೆ. ಆಸಿಯಾ ಅವರು ಗಾನವಿ ಬಗ್ಗೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಾನವಿ ಅವರು ಹಲವರ ನಂಬಿಕೆ ಕಳೆದುಕೊಂಡಿದ್ದಾರೆ. ಆದರೂ ಕೂಡ, ತಮ್ಮ ಆಟದ ಶೈಲಿಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮಟ್ಕಾ-ಜೂಜಾಟ ತಡೆಯದಿದ್ದರೆ ಧರಣಿ ಎಂದ ಕಾಂಗ್ರೆಸ್​ ಶಾಸಕ
ಮಟ್ಕಾ-ಜೂಜಾಟ ತಡೆಯದಿದ್ದರೆ ಧರಣಿ ಎಂದ ಕಾಂಗ್ರೆಸ್​ ಶಾಸಕ
ಮನೆ ಮನೆಗೆ ನಲ್ಲಿ ಇದ್ದೂ ಹನಿಯೂ ನೀರಿಲ್ಲ
ಮನೆ ಮನೆಗೆ ನಲ್ಲಿ ಇದ್ದೂ ಹನಿಯೂ ನೀರಿಲ್ಲ
ರಿಯಾದ್‌ನಲ್ಲಿರುವ ಸೌದಿ ರಕ್ಷಣಾ ಸಚಿವಾಲಯದ ಮೇಲೆ ಹೌತಿಯಿಂದ ಕ್ಷಿಪಣಿ ದಾಳಿ
ರಿಯಾದ್‌ನಲ್ಲಿರುವ ಸೌದಿ ರಕ್ಷಣಾ ಸಚಿವಾಲಯದ ಮೇಲೆ ಹೌತಿಯಿಂದ ಕ್ಷಿಪಣಿ ದಾಳಿ
99 ಲಕ್ಷ ವೋಟ್ ಡಿಲೀಟ್ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
99 ಲಕ್ಷ ವೋಟ್ ಡಿಲೀಟ್ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಸ್ಟಿಂಗ್ ಚರ್ಚೆ ನಡುವೆ ಕುಮಾರಸ್ವಾಮಿ ಭೇಟಿಯಾದ ರಾಜೇಂದ್ರ ರಾಜಣ್ಣ
ಸ್ಟಿಂಗ್ ಚರ್ಚೆ ನಡುವೆ ಕುಮಾರಸ್ವಾಮಿ ಭೇಟಿಯಾದ ರಾಜೇಂದ್ರ ರಾಜಣ್ಣ
ಹೈಕಮಾಂಡ್ ಅಂಗಳಕ್ಕೆ ಸ್ಟಿಂಗ್ ಆಪರೇಷನ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿದ್ದು
ಹೈಕಮಾಂಡ್ ಅಂಗಳಕ್ಕೆ ಸ್ಟಿಂಗ್ ಆಪರೇಷನ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿದ್ದು
‘ಸೌಂದರ್ಯಾ ಸ್ವಯಂವರ’ದಲ್ಲಿ ನಗುವೋ ನಗು: ವಿಡಿಯೋ ನೋಡಿ
‘ಸೌಂದರ್ಯಾ ಸ್ವಯಂವರ’ದಲ್ಲಿ ನಗುವೋ ನಗು: ವಿಡಿಯೋ ನೋಡಿ
ಧನ್ವೀರ್ ಮೇಲೆ ಇಡಿ, ಐಟಿ ಇಲಾಖೆಗೆ ಕೇಸ್ ಹಾಕಿದ್ದು ಯಾಕೆ? ವಿವರಿಸಿದ ಲಾಯರ್
ಧನ್ವೀರ್ ಮೇಲೆ ಇಡಿ, ಐಟಿ ಇಲಾಖೆಗೆ ಕೇಸ್ ಹಾಕಿದ್ದು ಯಾಕೆ? ವಿವರಿಸಿದ ಲಾಯರ್
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ