ಬಿಗ್ ಬಾಸ್ ಮನೆಯಲ್ಲಿ ಶೆಟ್ಟಿ ಡಾನ್ ಮದುವೆ; ವರನ ಹುಡುಕಾಟ ಶುರು
ಬಿಗ್ ಬಾಸ್ ಮನೆಯಲ್ಲಿ ‘ಶೆಟ್ಟಿ ಡಾನ್ ಮದುವೆ’ ಎಂಬ ಮನರಂಜನಾ ಟಾಸ್ಕ್ ಆರಂಭವಾಗಿದ್ದು, ಸೌಂದರ್ಯಾ ಶೆಟ್ಟಿ ಡಾನ್ ಪಾತ್ರದಲ್ಲಿ ಕಂಗೊಳಿಸಿದ್ದಾರೆ. ವರನ ಹುಡುಕಾಟದ ಈ ಮೋಜಿನ ಪ್ರಸಂಗದಲ್ಲಿ ಸ್ಪರ್ಧಿಗಳು ವಿಭಿನ್ನ ವೇಷಭೂಷಣಗಳಲ್ಲಿ ಕಾಣಿಸಿಕೊಂಡಿದ್ದು, ಪ್ರಸ್ತುತ ಬಿಗ್ ಬಾಸ್ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಮನರಂಜನೆ ಮತ್ತು ಹೈಡ್ರಾಮಾ ಜೋರಾಗಿಯೇ ಮುಂದುವರಿದಿದೆ. ಇದೀಗ ಮನೆಯಲ್ಲಿ ‘ಶೆಟ್ಟಿ ಡಾನ್ ಮದುವೆ’ ಎಂಬ ಮೋಜಿನ ಟಾಸ್ಕ್ ಪ್ರೇಕ್ಷಕರಲ್ಲಿ ನಗು ತರಿಸಿದೆ. ಈ ಟಾಸ್ಕ್‌ನಲ್ಲಿ ‘ಶೆಟ್ಟಿ ಡಾನ್’ ಆಗಿ ಸ್ಪರ್ಧಿ ಸೌಂದರ್ಯಾ ಶೆಟ್ಟಿ ಅವರು ಕಣ್ಣಿಗೆ ಗಾಗಲ್ಸ್ ಧರಿಸಿ, ಕೈಯಲ್ಲಿ ಕತ್ತಿ ಹಿಡಿದು ಗಂಭೀರ ಹಾಗೂ ವಿಭಿನ್ನ ಲುಕ್‌ನಲ್ಲಿ ಅಬ್ಬರಿಸಿದ್ದಾರೆ.
ಮನೆಯೊಳಗೆ ನಡೆಯುತ್ತಿರುವ ಈ ಡಾನ್ ಮದುವೆಯ ಸಂಭ್ರಮದಲ್ಲಿ ಸೌಂದರ್ಯಾ ಶೆಟ್ಟಿಗೆ ತಕ್ಕ ವರನನ್ನು ಹುಡುಕುವ ಪ್ರಸಂಗವೇ ವೀಕ್ಷಕರನ್ನು ರಂಜಿಸುತ್ತಿದೆ. ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ತಮಾಷೆಯ ವೇಷಭೂಷಣಗಳನ್ನು ಧರಿಸಿ, ತಾಯಿ-ತಂದೆ ಹಾಗೂ ವಿವಿಧ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ನಗುವಿನ ಅಲೆ ಎಬ್ಬಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

