AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕ್ಷೇಪಾರ್ಹ ಹೇಳಿಕೆ: ಮೂವರಿಗೆ ರಿಲೀಫ್ ನೀಡಿ ಪ್ರತಾಪ್ ಸಿಂಹಗೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್

ಹಿಂದೂ ಧಾರ್ಮಿಕ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ನಡೆಯುವುದನ್ನು ಪ್ರಶ್ನಿಸಿ ಹಾಗೂ ದೇಶದ ಶೇ.80ರಷ್ಟು ಜನಸಂಖ್ಯೆ ಹೊಂದಿರುವ ಹಿಂದೂಗಳೂ ಕಲ್ಲು ತೂರಲು ಶುರುಮಾಡಿದರೆ ಏನಾಗಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ಸಂಸದ ಪ್ರತಾಪ್‌ ಸಿಂಹಗೆ ಹೈಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಇನ್ನು ಇದೇ ಪ್ರಕರಣದಲ್ಲಿ ಮೂವರಿಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಪ್ರಕರಣದ ವಿವರ ಇಲ್ಲಿದೆ.

ಆಕ್ಷೇಪಾರ್ಹ ಹೇಳಿಕೆ: ಮೂವರಿಗೆ ರಿಲೀಫ್ ನೀಡಿ ಪ್ರತಾಪ್ ಸಿಂಹಗೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್
Pratap Simh
ರಮೇಶ್​ ಎಮ್​.
| Edited By: |

Updated on: Nov 20, 2026 | 9:26 PM

Share

ಬೆಂಗಳೂರು, (ನವೆಂಬರ್ 20) : ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಪ್ರತಾಪ್ ಸಿಂಹ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗ್ಡೆ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಇನ್ನು ಇದೇ ಪ್ರಕರಣ ಸಂಬಂಧ ಇನ್ನುಳಿದ ಮೂವರು ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದೆ. ವಿವಾದಾತ್ಮಕ ಹೇಳಿಕೆ ನೀಡುವಂತೆ ಪ್ರತಾಪ್‌ ಸಿಂಹ ಅವರಿಗೆ ಆಯೋಜಕರು ಪ್ರಚೋದನೆ ನೀಡಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಭಾಷಣದ ಅಂಶ ಗಮನಿಸಿದ್ರೆ ಪ್ರಚೋದಿಸುವ ಉದ್ದೇಶದಂತಿದೆ

ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಪ್ರತಾಪ್ ಸಿಂಹ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರಿದ್ದ ಏಕಸದಸ್ಯ ಪೀಠ, ‘ದೂರಿನಲ್ಲಿರುವ ಅಂಶಗಳು ಮತ್ತು ಪ್ರತಾಪ ಸಿಂಹ ಅವರ ಭಾಷಣದ ನಿರ್ದಿಷ್ಟ ಅಂಶಗಳನ್ನು ಗಮನಿಸಿದರೆ, ಗಲಭೆಯನ್ನು ಪ್ರಚೋದಿಸುವ ಮತ್ತು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರತಕ್ಕಂತಹದ್ದು. ಆರೋಪಗಳ ಕುರಿತು ಅವರ ವಿರುದ್ಧ ತನಿಖೆ ನಡೆಸುವ ಅಗತ್ಯವನ್ನು ಪ್ರಕರಣ ಸೂಚಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ಕೇಸ್: ಕೃಪಾ ಆಳ್ವಾ ಸೇರಿ ಹಲವರಿಗೆ ಶಾಕ್ ಕೊಟ್ಟ ಬೆಂಗಳೂರಿನ 66ನೇ ಸಿಸಿಹೆಚ್ ಕೋರ್ಟ್

ಇತರರ ವಿರುದ್ಧ ವಿಚಾರಣೆ ರದ್ದು

ಇನ್ನು ಪ್ರತಾಪ್‌ ಸಿಂಹ ಅವರ ಹೇಳಿಕೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಪ್ರಕರಣದ ಇತರ ಆರೋಪಿಗಳಾದ ಕರಣ್ ಸಿ ಸುಬೇದಾರ್, ಶಿವಕುಮಾರ್ ಮತ್ತು ಗುರುರಾಜ ವಿರುದ್ಧದ ವಿಚಾರಣೆಯನ್ನು ನ್ಯಾಯಪೀಠ ಇದೇ ವೇಳೆ ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ

ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ 2024ರ ಸೆಪ್ಟೆಂಬರ್ 21ರಂದು ಗಣೇಶ ವಿಸರ್ಜನೆಯ ದಿನ ನಡೆದ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ಮುಖ್ಯ ಅತಿಥಿಯಾಗಿ ಮಾತನಾಡಿ, ಹಿಂದೂ ಧಾರ್ಮಿಕ ಮೆರವಣಿಗೆಗಳ ಮೇಲೆ ಏಕೆ ಕಲ್ಲುಗಳನ್ನು ತೂರಲಾಗುತ್ತದೆ. ಈದ್ ಮಿಲಾದ್ ಮೆರವಣಿಗೆಗಳ ಸಂದರ್ಭದಲ್ಲಿ ಹಿಂದೂಗಳು ಕಲ್ಲು ತೂರಿರುವ ಒಂದಾದರೂ ನಿದರ್ಶನವನ್ನು ತೋರಿಸಿ. ದೇಶದ ಜನಸಂಖ್ಯೆಯಲ್ಲಿ ಶೇಕಡಾ 80ರಷ್ಟು ಹಿಂದೂಗಳೇ ಇದ್ದಾರೆ. ಒಂದು ವೇಳೆ ಅವರೂ ಕೈಗೆ ಕಲ್ಲುಗಳನ್ನು ಎತ್ತಿಕೊಂಡರೆ ಏನಾಗಬಹುದು ಎಂದು ಹೇಳಿದ್ದರು. ಹೀಗಾಗಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಹೇಳಿಕೆ ನೀಡಿದ ಆರೋಪ ಮೇಲೆ ಭಾರತೀಯ ನ್ಯಾಯ ಸಂಹಿತಾ-2023ರ ಕಲಂ 299 ಮತ್ತು 192ರ ಅಡಿಯಲ್ಲಿ ಪ್ರತಾಪ್ ಸಿಂಹ್ ವಿರುದ್ಧ ಎಫ್‌ಐಆ‌ರ್ ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್​ ಎಮ್​.
ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ
ಬಡವರಿಗೆ ವಿತರಿಸಬೇಕಿದ್ದ ಸರ್ಕಾರಿ ಆಸ್ಪತ್ರೆ ಔಷಧಿಗಳು ನದಿಯಲ್ಲಿ ಪತ್ತೆ!
ಬಡವರಿಗೆ ವಿತರಿಸಬೇಕಿದ್ದ ಸರ್ಕಾರಿ ಆಸ್ಪತ್ರೆ ಔಷಧಿಗಳು ನದಿಯಲ್ಲಿ ಪತ್ತೆ!
ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!
ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!