ಡಬ್ಲ್ಯುಪಿಎಲ್ 2027 ಹರಾಜು ಮುಕ್ತಾಯ: ಐದು ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಮಹಿಳಾ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜು ಮುಗಿದಿದೆ. ಯುಪಿ ವಾರಿಯರ್ಸ್ 1.1 ಕೋಟಿಗೆ ಸೋಫಿ ಮೊಲಿನ್ಯೂಕ್ಸ್‌ರನ್ನು ಖರೀದಿಸಿ ಗಮನ ಸೆಳೆದಿದೆ. ಗ್ರೇಸ್ ಹ್ಯಾರಿಸ್ ಕೂಡ ಯುಪಿ ಸೇರಿದ್ದಾರೆ. ಐದು ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಬಲಪಡಿಸಿಕೊಳ್ಳಲು ಪ್ರತಿಭಾವಂತ ಆಟಗಾರ್ತಿಯರನ್ನು ಸೇರ್ಪಡೆ ಮಾಡಿಕೊಂಡಿವೆ. ಆರ್.ಸಿ.ಬಿ, ಮುಂಬೈ, ಡೆಲ್ಲಿ ಹಾಗೂ ಗುಜರಾತ್ ತಂಡಗಳು ಸಹ ಪ್ರಮುಖ ಆಟಗಾರ್ತಿಯರನ್ನು ಖರೀದಿಸಿವೆ.

ಮಹಿಳಾ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜು ಮುಕ್ತಾಯಗೊಂಡಿದೆ. ಮುಂಬರುವ ಆವೃತ್ತಿಗೆ ಸಜ್ಜಾಗುತ್ತಿರುವ ಐದು ಫ್ರಾಂಚೈಸಿಗಳು ತಮ್ಮ ತಂಡಗಳಿಗೆ ಹಲವು ಪ್ರತಿಭಾವಂತ ಆಟಗಾರ್ತಿಯರನ್ನು ಸೇರ್ಪಡೆ ಮಾಡಿಕೊಂಡಿವೆ. ಈ ಬಾರಿಯ ಹರಾಜಿನಲ್ಲಿ ಯುಪಿ ವಾರಿಯರ್ಸ್ ಅತ್ಯಂತ ಸಕ್ರಿಯವಾಗಿದ್ದು, ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಹಲವು ಪ್ರಮುಖ ಆಟಗಾರ್ತಿಯರನ್ನು ಖರೀದಿಸಿದೆ.
ಅತಿ ಹೆಚ್ಚು ಮೊತ್ತ ಪಡೆದ ಆಟಗಾರ್ತಿ
ಆಸ್ಟ್ರೇಲಿಯಾದ ಸೋಫಿ ಮೊಲಿನ್ಯೂಕ್ಸ್ ಈ ಬಾರಿಯ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಆಟಗಾರ್ತಿಯಾಗಿದ್ದಾರೆ. ಯುಪಿ ವಾರಿಯರ್ಸ್ ಅವರನ್ನು ಬರೋಬ್ಬರಿ 1.1 ಕೋಟಿ ರೂ. ನೀಡಿ ತನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಇದರ ಜೊತೆಗೆ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ರೇಸ್ ಹ್ಯಾರಿಸ್ ಕೂಡ ಯುಪಿ ತಂಡವನ್ನು ಸೇರಿಕೊಂಡಿದ್ದಾರೆ. ಬಲಿಷ್ಠ ತಂಡವನ್ನು ಕಟ್ಟುವ ಮೂಲಕ ಡಬ್ಲ್ಯುಪಿಎಲ್ 2027ರಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿ ಯುಪಿ ವಾರಿಯರ್ಸ್ ಇದೆ.
ಈ ಹರಾಜಿಗಾಗಿ ಒಟ್ಟು 146 ಆಟಗಾರ್ತಿಯರನ್ನು ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಗಿತ್ತು. ಐದು ತಂಡಗಳಲ್ಲಿ ಖಾಲಿ ಇದ್ದ 27 ಸ್ಥಾನಗಳನ್ನು ಭರ್ತಿ ಮಾಡಲು ಹರಾಜು ನಡೆಸಲಾಯಿತು. ಈ ಪೈಕಿ ಏಳು ಸ್ಥಾನಗಳನ್ನು ವಿದೇಶಿ ಆಟಗಾರ್ತಿಯರಿಗಾಗಿ ಮೀಸಲಿಡಲಾಗಿತ್ತು.
ಭಾರತದ ಜಿ. ಕಮಲಿನಿ ಗುಜರಾತ್ ಜೈಂಟ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರೆ, ಸ್ನೇಹ್ ರಾಣಾ ಯುಪಿ ವಾರಿಯರ್ಸ್ ತಂಡದ ಪಾಲಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಜೆಸ್ ಜೊನಾಸೆನ್ ಮತ್ತು ಕ್ಲೋಯ್ ಟ್ರಯಾನ್ ಅವರನ್ನು ಖರೀದಿಸಿದೆ. ಇತ್ತ ಮುಂಬೈ ಇಂಡಿಯನ್ಸ್ ತಂಡ ಶ್ವೇತಾ ಸೆಹ್ರಾವತ್ ಮತ್ತು ಅಕ್ಷಿತಾ ಭಗತ್ ಅವರನ್ನು ತನ್ನ ಬಳಗಕ್ಕೆ ಸೇರಿಸಿಕೊಂಡಿದೆ.
ಐದು ತಂಡಗಳ ಸಂಪೂರ್ಣ ಪಟ್ಟಿ
ಮುಂಬೈ ಇಂಡಿಯನ್ಸ್
ಅಮನ್‌ಜೋತ್ ಕೌರ್, ಅಮೆಲಿಯಾ ಕೆರ್, ಹರ್ಮನ್‌ಪ್ರೀತ್ ಕೌರ್, ಹ್ಯಾಲಿ ಮ್ಯಾಥ್ಯೂಸ್, ನ್ಯಾಟಲಿ ಸ್ಕಿವರ್-ಬ್ರಂಟ್, ನಿಕೋಲಾ ಕ್ಯಾರಿ, ರಹೀಲಾ ಫಿರ್ದೌಸ್, ಸಜೀವನ್ ಸಜನಾ, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್, ವೈಷ್ಣವಿ ಶರ್ಮಾ, ಸನಿಕಾ ಚಾಲ್ಕೆ, ಶ್ವೇತಾ ಸೆಹ್ರಾವತ್, ಅಕ್ಷಿತಾ ಭಗತ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಅರುಂಧತಿ ರೆಡ್ಡಿ, ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೋಲ್, ಲಾರೆನ್ ಬೆಲ್, ನಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್, ಪ್ರತ್ಯೂಷಾ ಕುಮಾರ್, ಪ್ರೇಮಾ ರಾವತ್, ರಾಧಾ ಯಾದವ್, ರಿಚಾ ಘೋಷ್, ಸಯಾಲಿ ಸತ್ಘರೆ, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಜೆಸ್ ಜೊನಾಸೆನ್, ತೇಜಲ್ ಹಸಬ್ನಿಸ್, ವೃಂದಾ ದಿನೇಶ್, ಕ್ಲೋಯ್ ಟ್ರಯಾನ್.
ಯುಪಿ ವಾರಿಯರ್ಸ್
ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್, ಕ್ರಾಂತಿ ಗೌಡ್, ಮೆಗ್ ಲ್ಯಾನಿಂಗ್, ಫೋಬಿ ಲಿಚ್‌ಫೀಲ್ಡ್, ಪ್ರತಿಕಾ ರಾವಲ್, ಶಿಖಾ ಪಾಂಡೆ, ಶಿಪ್ರಾ ಗಿರಿ, ಸಿಮ್ರನ್ ಶೇಖ್, ಸೋಫಿ ಎಕ್ಲೆಸ್ಟೋನ್, ತಾರಾ ನಾರಿಸ್, ಸೋಫಿ ಮೊಲಿನ್ಯೂಕ್ಸ್, ಸ್ನೇಹ್ ರಾಣಾ, ಗ್ರೇಸ್ ಹ್ಯಾರಿಸ್, ಸುಷ್ಮಾ ವರ್ಮಾ, ಕ್ಯಾಥರಿನ್ ಬ್ರೈಸ್, ಮನಾಲಿ ದಕ್ಷಿಣಿ, ಸಹನಾ ಪವಾರ್, ಆಶಾ ಶೋಭನಾ.
ಡೆಲ್ಲಿ ಕ್ಯಾಪಿಟಲ್ಸ್
ಅನ್ನಾಬೆಲ್ ಸದರ್‌ಲ್ಯಾಂಡ್, ಚಿನೆಲ್ಲೆ ಹೆನ್ರಿ, ದಿಯಾ ಯಾದವ್, ಜೆಮಿಮಾ ರೋಡ್ರಿಗಸ್, ಲಾರಾ ವೋಲ್ವಾರ್ಟ್, ಲೂಸಿ ಹ್ಯಾಮಿಲ್ಟನ್, ಮಮತಾ ಮಡಿವಾಳ, ಮ್ಯಾರಿಜಾನ್ ಕಾಪ್, ಮಿನ್ನು ಮಣಿ, ಎನ್. ಶ್ರೀ ಚರಣಿ, ನಂದಿನಿ ಶರ್ಮಾ, ನಿಕಿ ಪ್ರಸಾದ್, ಶಫಾಲಿ ವರ್ಮಾ, ಕಿರಣ್ ನವಗಿರೆ, ಕಿರ್ಸ್ಟಿ ಗಾರ್ಡನ್, ಉಮಾ ಕಾಶ್ವಿ, ಕಿರ್ಸ್ಟಿ ಗಾರ್ಡನ್, ನಜ್ಮಾ ಖಾನ್.
ಗುಜರಾತ್ ಜೈಂಟ್ಸ್
ಅನುಷ್ಕಾ ಶರ್ಮಾ, ಆಶ್ಲೆ ಗಾರ್ಡ್ನರ್, ಬೆತ್ ಮೂನಿ, ಭಾರತಿ ಫುಲ್ಮಾಲಿ, ಜಾರ್ಜಿಯಾ ವೇರ್‌ಹ್ಯಾಮ್, ಹ್ಯಾಪಿ ಕುಮಾರಿ, ಜಿಂತಿಮಣಿ ಕಲಿತಾ, ಕನಿಕಾ ಅಹುಜಾ, ಕಾಶ್ವೀ ಗೌತಮ್, ಕಿಮ್ ಗಾರ್ತ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್, ಸೋಫಿ ಡಿವೈನ್, ತನುಜಾ ಕನ್ವರ್, ಯಾಸ್ತಿಕಾ ಭಾಟಿಯಾ, ಜಿ. ಕಮಲಿನಿ, ಓರ್ಲಾ ಪ್ರೆಂಡರ್‌ಗಾಸ್ಟ್, ಸಮೈರಾ ರಾಘವ್.




