AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ನೆದರ್​ಲ್ಯಾಂಡ್ಸ್ ದ್ವಿಪಕ್ಷೀಯ ಮಾತುಕತೆ: ಎರಡು ದಿನಗಳ ಭೇಟಿಗೆ ಭಾರತಕ್ಕೆ ಆಗಮಿಸಿದ ಟಾಮ್ ಬೆರೆಂಡ್ಸೆನ್

ನೆದರ್​ಲ್ಯಾಂಡ್ಸ್ ವಿದೇಶಾಂಗ ಸಚಿವ ಟಾಮ್ ಬೆರೆಂಡ್ಸೆನ್ ಅವರು ನವೆಂಬರ್ 22, 23ರಂದು ಎರಡು ದಿನಗಳ ಭಾರತ ಭೇಟಿಗಾಗಿ ಭಾನುವಾರ ದೆಹಲಿಗೆ ಆಗಮಿಸಿದ್ದಾರೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ನೆದರ್​ಲ್ಯಾಂಡ್ ವಿದೇಶಾಂಗ ಸಚಿವರು ಪ್ರತ್ಯೇಕವಾಗಿ ಭೇಟಿ ಮಾಡಲಿದ್ದಾರೆ.

ಭಾರತ-ನೆದರ್​ಲ್ಯಾಂಡ್ಸ್ ದ್ವಿಪಕ್ಷೀಯ ಮಾತುಕತೆ: ಎರಡು ದಿನಗಳ ಭೇಟಿಗೆ ಭಾರತಕ್ಕೆ ಆಗಮಿಸಿದ ಟಾಮ್ ಬೆರೆಂಡ್ಸೆನ್
ಟಾಮ್ ಬೆರೆಂಡ್ಸೆನ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 22, 2026 | 8:15 PM

Share

ನವದೆಹಲಿ, ನವೆಂಬರ್ 22: ಐರೋಪ್ಯ ರಾಷ್ಟ್ರವಾದ ದಿ ನೆದರ್‌ಲ್ಯಾಂಡ್ಸ್​​ನ ವಿದೇಶಾಂಗ ಸಚಿವ ಟಾಮ್ ಬೆರೆಂಡ್ಸೆನ್ (Tom Berendsen) ಭಾರತಕ್ಕೆ ಇಂದು ಭಾನುವಾರ ಆಗಮಿಸಿದ್ದಾರೆ. ನವೆಂಬರ್ 22 ಮತ್ತು 23ರಂದು ಎರಡು ದಿನಗಳ ಅಧಿಕೃತ ಪ್ರವಾಸಕ್ಕೆಂದು ಬಂದಿರುವ ಬೆರೆಂಡ್ಸೆನ್ ಅವರನ್ನು ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ವಾಗತಿಸಿದ್ದಾರೆ. ಎರಡೂ ದೇಶಗಳ ನಡುವೆ ಸಹಕಾರ ಹೆಚ್ಚಿಸಲು ಟಾಮ್ ಬೆರೆಂಡ್ಸೆನ್ ಮತ್ತು ಎಸ್ ಜೈಶಂಕರ್ ಅವರು ಚರ್ಚೆ ನಡೆಸಲಿದ್ದಾರೆ ಎಂದು ಜೈಸ್ವಲ್ ಮಾಹಿತಿ ನೀಡಿದ್ದಾರೆ.

ನವದೆಹಲಿಗೆ ಬಂದಿಳಿದ ನಂತರ ನೆದರ್​ಲ್ಯಾಂಡ್ಸ್ ವಿದೇಶಾಂಗ ಸಚಿವರು ಈ ಎರಡು ದೇಶಗಳು ಎದುರಿಸುತ್ತಿರುವ ಸವಾಲು ಮತ್ತಿತರ ವಿಚಾರಗಳ ಕುರಿತು ಎಕ್ಸ್​ನಲ್ಲಿ ವಿವರ ಹಂಚಿಕೊಂಡಿದ್ದಾರೆ.

‘ಭಾರತ ಮತ್ತು ನೆದರ್​ಲ್ಯಾಂಡ್ಸ್ ದೇಶಗಳು ಹಲವು ಸಾಮಾನ್ಯ ಹಿತಾಸಕ್ತಿಗಳನ್ನು ಹೊಂದಿವೆ. ಮುಂಬರುವ ದಿನಗಳಲ್ಲಿ, ನಮ್ಮ ದ್ವಿಪಕ್ಷೀಯ ಸಂಬಂಧ ಹಾಗೂ ನಾವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆ ಮಾಡುತ್ತೇನೆ. ನಮ್ಮ ತಂತ್ರಾತ್ಮಕ ಪಾಲುದಾರಿಕೆಯನ್ನು ರೂಪಿಸುವ ವಿಚಾರ ಕುರಿತು ಚರ್ಚೆ ಮಾಡುತ್ತೇನೆ. ಭದ್ರತೆ, ತಂತ್ರಜ್ಞಾನ ಹಾಗೂ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕುರಿತು ನಮ್ಮ ಚರ್ಚೆಗಳು ಕೇಂದ್ರಿತವಾಗಿರುತ್ತವೆ’ ಎಂದು ಟಾಮ್ ಬೆರೆಂಡ್ಸೆನ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಐಐಟಿ ಪದವೀಧರರಷ್ಟೇ ಗೌರವ ಐಟಿಐ ವಿದ್ಯಾರ್ಥಿಗಳಿಗೂ ಸಿಗಬೇಕು’: ಕೌಶಲ್ಯಯುತ ಕಾರ್ಮಿಕರ ಮೌಲ್ಯದ ಕುರಿತು ಪ್ರಧಾನಿ ಮೋದಿ ಮಾತು

ಟಾಮ್ ಬೆರೆಂಡ್ಸೆನ್ ಭಾರತ ಭೇಟಿಯ ಕಾರ್ಯಕ್ರಮಗಳು

ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಚೊಚ್ಚಲ ವಿದೇಶಾಂಗ ಸಚಿವರ ಸಭೆಯಲ್ಲಿ (Foreign Ministers’ Meeting) ಅವರು ಸಹ-ಅಧ್ಯಕ್ಷತೆ ವಹಿಸಲಿದ್ದು, ಭಾರತ-ನೆದರ್‌ಲ್ಯಾಂಡ್ಸ್ ಕಾರ್ಯತಂತ್ರದ ಪಾಲುದಾರಿಕೆಯಡಿ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಆಳಗೊಳಿಸುವ ಗುರಿಯನ್ನು ಈ ಭೇಟಿ ಹೊಂದಿದೆ.

ಸೋಮವಾರ ತಮ್ಮ ಭೇಟಿ ಮುಕ್ತಾಯಗೊಳಿಸುವ ಮುನ್ನ ಬೆರೆಂಡ್ಸೆನ್ ಅವರು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆಗಳ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಲಿದ್ದಾರೆ.

ವ್ಯಾಪಾರ, ತಂತ್ರಜ್ಞಾನ ಮತ್ತು ರಕ್ಷಣಾ ಸಹಕಾರದ ಹಿನ್ನೆಲೆ

ವ್ಯಾಪಾರ, ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಉಭಯ ದೇಶಗಳ ನಡುವೆ ಇತ್ತೀಚೆಗೆ ನಡೆದ ಸರಣಿ ಉನ್ನತ ಮಟ್ಟದ ಮಾತುಕತೆಗಳ ಮುಂದುವರಿದ ಭಾಗವಾಗಿ ಈ ಭೇಟಿ ನಡೆಯುತ್ತಿದೆ.

ಅಕ್ಟೋಬರ್ 27ರಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ನೆದರ್‌ಲ್ಯಾಂಡ್ಸ್‌ನ ಉದ್ಯಮ ನಾಯಕರೊಂದಿಗೆ ದುಂಡುಮೇಜಿನ ಸಭೆ ನಡೆಸಿದ್ದಲ್ಲದೆ, ಸೆಮಿಕಂಡಕ್ಟರ್ ವಲಯದಲ್ಲಿ ದ್ವಿಪಕ್ಷೀಯ ಸಹಕಾರ ಬಲಪಡಿಸುವ ಕುರಿತು ನೆಕ್ಸ್‌ಪೀರಿಯಾ (Nexperia) ಮಧ್ಯಂತರ ಸಿಇಒ ಸ್ಟೀಫನ್ ಟಿಲ್ಗರ್ ಅವರೊಂದಿಗೆ ಚರ್ಚಿಸಿದ್ದರು.

ಇದನ್ನೂ ಓದಿ: ಅರ್ಧನಾರೀಶ್ವರನ ಚಿತ್ರ ಬಳಸಿ ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ; ಕಿರಣ್ ರಿಜಿಜು ತಿರುಗೇಟು

ಅಕ್ಟೋಬರ್ 20ರಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಜನರಲ್ ಎನ್.ಎಸ್. ರಾಜ ಸುಬ್ರಮಣಿ ಅವರು ಭಾರತದಲ್ಲಿನ ನೆದರ್‌ಲ್ಯಾಂಡ್ಸ್ ರಾಯಭಾರಿ ಮಾರಿಸಾ ಗೆರಾರ್ಡ್ಸ್ ಅವರನ್ನು ಭೇಟಿ ಮಾಡಿ ರಕ್ಷಣಾ ಸಹಕಾರದ ಕುರಿತು ಸಮಾಲೋಚಿಸಿದ್ದರು.

ಕಾರ್ಯತಂತ್ರದ ಪಾಲುದಾರಿಕೆಗೆ ಹೊಸ ವೇಗ

ಸೆಪ್ಟೆಂಬರ್‌ನಲ್ಲಿ ನಡೆದ 81ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ಜೈಶಂಕರ್ ಮತ್ತು ಬೆರೆಂಡ್ಸೆನ್ ಭೇಟಿಯಾಗಿ ಉಕ್ರೇನ್ ಸಂಘರ್ಷ ಹಾಗೂ ಈ ವರ್ಷದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೆದರ್‌ಲ್ಯಾಂಡ್ಸ್‌ಗೆ ನೀಡಿದ್ದ ಭೇಟಿಯ ಫಲಿತಾಂಶಗಳ ಕುರಿತು ಚರ್ಚಿಸಿದ್ದರು.

ಈ ಚೊಚ್ಚಲ ವಿದೇಶಾಂಗ ಸಚಿವರ ಸಭೆಯು ಭಾರತ-ನೆದರ್‌ಲ್ಯಾಂಡ್ಸ್ ಕಾರ್ಯತಂತ್ರದ ಪಾಲುದಾರಿಕೆಗೆ ಹೆಚ್ಚಿನ ವೇಗ ನೀಡಲಿದ್ದು, ಪರಸ್ಪರ ಹಿತಾಸಕ್ತಿಯ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿರೀಕ್ಷೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಬಸವ ಮಂಟಪ’ವಿವಾದ: ಲೇಖಕ ರವಿ ಹಂಜ್​​ಗೆ ಶಾಕ್ ಕೊಟ್ಟ ಬೆಳಗಾವಿ ಪೊಲೀಸ್ರು
‘ಬಸವ ಮಂಟಪ’ವಿವಾದ: ಲೇಖಕ ರವಿ ಹಂಜ್​​ಗೆ ಶಾಕ್ ಕೊಟ್ಟ ಬೆಳಗಾವಿ ಪೊಲೀಸ್ರು
ಸರ್ಕಾರಿ ಶಾಲೆಗೆ ಬಿಸಿಯೂಟ ಅಕ್ಕಿ ಪೂರೈಸದ ಪ್ರಕರಣದಲ್ಲಿ ಇಬ್ಬರು ಸಸ್ಪೆಂಡ್
ಸರ್ಕಾರಿ ಶಾಲೆಗೆ ಬಿಸಿಯೂಟ ಅಕ್ಕಿ ಪೂರೈಸದ ಪ್ರಕರಣದಲ್ಲಿ ಇಬ್ಬರು ಸಸ್ಪೆಂಡ್
ಮನವಿ ನೀಡಿದವರ ಬಳಿ ಸಚಿವ ಮಧು ಬಂಗಾರಪ್ಪ ದರ್ಪ: ವಿಡಿಯೋ ವೈರಲ್
ಮನವಿ ನೀಡಿದವರ ಬಳಿ ಸಚಿವ ಮಧು ಬಂಗಾರಪ್ಪ ದರ್ಪ: ವಿಡಿಯೋ ವೈರಲ್
ಬೆಂಗಳೂರು ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್
ಬೆಂಗಳೂರು ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್
ಚಿನ್ನ ಖರೀದಿಸಬೇಡಿ ಎಂಬ ಕರೆಯನ್ನು ಪಾಲಿಸಿದ ಭಾರತೀಯರಿಗೆ ಮೋದಿ ಮೆಚ್ಚುಗೆ
ಚಿನ್ನ ಖರೀದಿಸಬೇಡಿ ಎಂಬ ಕರೆಯನ್ನು ಪಾಲಿಸಿದ ಭಾರತೀಯರಿಗೆ ಮೋದಿ ಮೆಚ್ಚುಗೆ
ಕೊಚ್ಚಿನ್ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ವಿಚಾರಣೆ
ಕೊಚ್ಚಿನ್ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ವಿಚಾರಣೆ
ಬರದಿಂದ ರೈತರು ಸಂಕಷ್ಟದಲ್ಲಿರುವಾಗ ಗದಗ ಡಿಸಿ ನಿವಾಸದಲ್ಲಿ ಮೋಜು-ಮಸ್ತಿ
ಬರದಿಂದ ರೈತರು ಸಂಕಷ್ಟದಲ್ಲಿರುವಾಗ ಗದಗ ಡಿಸಿ ನಿವಾಸದಲ್ಲಿ ಮೋಜು-ಮಸ್ತಿ
ನವೆಂಬರ್ 23ರಿಂದ 29ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನವೆಂಬರ್ 23ರಿಂದ 29ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಬಿಗ್ ಬಾಸ್: ಸೂಪರ್ ಸಂಡೇ ಸಂಚಿಕೆಯಲ್ಲೂ ಮಂಜ, ಗಾನವಿ ಲವ್ ಸ್ಟೋರಿ ಚರ್ಚೆ
ಬಿಗ್ ಬಾಸ್: ಸೂಪರ್ ಸಂಡೇ ಸಂಚಿಕೆಯಲ್ಲೂ ಮಂಜ, ಗಾನವಿ ಲವ್ ಸ್ಟೋರಿ ಚರ್ಚೆ
6ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಹೋರಾಟ
6ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಹೋರಾಟ