AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಯಸಿ ಮೇಲೆ ಅನುಮಾನ; ತಮಿಳುನಾಡಿನಲ್ಲಿ 16 ವರ್ಷದ ಯುವತಿಯನ್ನು ಇರಿದು, ಕತ್ತು ಹಿಸುಕಿ ಕೊಂದ ಲವರ್

ತೂತುಕುಡಿ ಜಿಲ್ಲೆಯಲ್ಲಿ ತನ್ನ ಹುಡುಗಿ ಬೇರೆಯವನನ್ನು ಪ್ರೀತಿಸುತ್ತಿದ್ದಾಳೆ ಎಂಬ ಶಂಕೆಯಿಂದ 16 ವರ್ಷದ ಪಿಯುಸಿ ವಿದ್ಯಾರ್ಥಿನಿಯನ್ನು ಯುವಕನೊಬ್ಬ ಇರಿದು ಕೊಂದ ಘಟನೆ ಸಾಕಷ್ಟು ಸಂಚಲನ ಮೂಡಿಸಿದೆ. ಕಾಸಿಪಾಂಡಿಯನ್ ತೂತುಕುಡಿ ಜಿಲ್ಲೆಯ ಮುತ್ತುರಾಜ ತನ್ನದೇ ಊರಿನಲ್ಲಿ ವಾಸಿಸುವ 16 ವರ್ಷದ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ. ಈ ವಿಷಯ ಕುಟುಂಬಕ್ಕೆ ತಿಳಿದಾಗ, ವಿದ್ಯಾರ್ಥಿನಿ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಮದುವೆಯ ಬಗ್ಗೆ ಮಾತನಾಡಬಹುದು ಎಂದು ನಿರ್ಧರಿಸಲಾಗಿತ್ತು. ಆದರೆ, ಮುತ್ತುರಾಜುವಿಗೆ ತನ್ನ ಪ್ರೇಯಸಿ ಮೇಲೆ ಅನುಮಾನ ಶುರುವಾಗಿತ್ತು. ಆ ಅನುಮಾನವೇ ಆ ಅಪ್ರಾಪ್ತ ಬಾಲಕಿಯ ಜೀವವನ್ನೇ ಬಲಿ ಪಡೆದಿದೆ.

ಪ್ರೇಯಸಿ ಮೇಲೆ ಅನುಮಾನ; ತಮಿಳುನಾಡಿನಲ್ಲಿ 16 ವರ್ಷದ ಯುವತಿಯನ್ನು ಇರಿದು, ಕತ್ತು ಹಿಸುಕಿ ಕೊಂದ ಲವರ್
Tamil Nadu Couple
ಸುಷ್ಮಾ ಚಕ್ರೆ
|

Updated on: Nov 22, 2026 | 3:14 PM

Share

ತೂತುಕುಡಿ, ನವೆಂಬರ್ 22: ತನ್ನ ಪ್ರೇಯಸಿ ಮೊಬೈಲಿನಲ್ಲಿ ಬೇರೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಳೆ ಎಂದು ಶಂಕಿಸಿದ 23 ವರ್ಷದ ಯುವಕನೊಬ್ಬ 16 ವರ್ಷದ ಪ್ರಥಮ ಪಿಯುಸಿ  ವಿದ್ಯಾರ್ಥಿನಿಯನ್ನು ಚಾಕುವಿನಿಂದ ಇರಿದು, ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಕೊಲೆ ನಡೆಸಿಗಿದ ಬಳಿಕ ಆರೋಪಿಯೂ ಆತ್ಮಹತ್ಯೆಗೆ ಯತ್ನಿಸಿದ್ದು, ಬಾಲಕಿಯ ಮನೆಯಲ್ಲೇ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆರೋಪಿಯನ್ನು ಸ್ಥಳೀಯ ವೆಲ್ಡಿಂಗ್ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮುತ್ತುರಾಜ ಎಂದು ಗುರುತಿಸಲಾಗಿದೆ.

ಶಂಕೆ ಮತ್ತು ನಿರಂತರ ಜಗಳ:

ಆರೋಪಿ ಮುತ್ತುರಾಜ ಮತ್ತು ಬಾಲಕಿ ಒಂದೇ ಪ್ರದೇಶದ ನಿವಾಸಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ವಿಷಯ ಅವರ ಮನೆಯಲ್ಲಿ ತಿಳಿದಾಗ ಆ ಬಾಲಕಿಯ ಓದು ಮುಗಿದ ನಂತರ ಮದುವೆ ಮಾಡುವುದಾಗಿ ಹೇಳಿದ್ದರು. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಪದೇಪದೇ ಜಗಳಗಳಾಗುತ್ತಿದ್ದು, ಸಂಬಂಧ ಹಳಸಿತ್ತು. ಬಾಲಕಿ ಫೋನ್‌ನಲ್ಲಿ ಬೇರೊಬ್ಬರೊಂದಿಗೆ ಮಾತನಾಡುತ್ತಿದ್ದಾಳೆ ಎಂದು ಮುತ್ತುರಾಜ ಅನುಮಾನಿಸುತ್ತಿದ್ದ ಮತ್ತು ಈ ವಿಚಾರವಾಗಿ ಆಗಾಗ ಆಕೆಯೊಂದಿಗೆ ಜಗಳವಾಡುತ್ತಿದ್ದ.

ಇದನ್ನೂ ಓದಿ: ಕೊಲೆಯಾಗಿದ್ದಾಳೆ ಎನ್ನಲಾದ ಮಹಿಳೆ ದಿಢೀರ್ ಪ್ರತ್ಯಕ್ಷ; ಮಾಡದ ತಪ್ಪಿಗೆ 2.5 ವರ್ಷ ಜೈಲಿನಲ್ಲಿದ್ದ ವ್ಯಕ್ತಿ!

ಮನೆಯಲ್ಲಿ ಒಬ್ಬಳೇ ಇದ್ದಾಗ ಕೃತ್ಯ:

ಶನಿವಾರ ಶಾಲೆಗೆ ರಜೆ ಇದ್ದ ಕಾರಣ ಬಾಲಕಿ ಮನೆಯಲ್ಲೇ ಒಬ್ಬಳೇ ಇದ್ದಳು. ಈ ವೇಳೆ ಮನೆಗೆ ಬಂದ ಮುತ್ತುರಾಜ ಅದೇ ವಿಚಾರವಾಗಿ ಆಕೆಯನ್ನು ಪ್ರಶ್ನಿಸಿದ್ದಾನೆ. ಇಬ್ಬರ ನಡುವೆ ಮತ್ತೆ ಮಾತಿನ ಚಕಮಕಿ ನಡೆದು, ಅದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಕೋಪಗೊಂಡ ಮುತ್ತುರಾಜ ಬಾಲಕಿಗೆ ಚಾಕುವಿನಿಂದ ಇರಿದು, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಬಾಲಕಿಯನ್ನು ಹತ್ಯೆ ಮಾಡಿದ ಬೆನ್ನಲ್ಲೇ, ಅದೇ ಆಯುಧದಿಂದ ತನಗೆ ತಾನೇ ಇರಿದುಕೊಂಡು ಗಂಭೀರವಾಗಿ ಗಾಯಗೊಂಡು ಮನೆಯೊಳಗೆ ಕುಸಿದು ಬಿದ್ದಿದ್ದಾನೆ.

ಇದನ್ನೂ ಓದಿ: 5 ತಿಂಗಳ ಹಿಂದಷ್ಟೇ ಮದುವೆ; 2 ತಿಂಗಳ ಹಿಂದೆಯೇ ಕೊಲೆ; ಬೆಂಗಳೂರಿನ ಅಸ್ಥಿಪಂಜರ ಕೇಸ್‌ಗೆ ಬಿಗ್ ಟ್ವಿಸ್ಟ್‌

ಪೊಲೀಸ್ ತನಿಖೆ ಆರಂಭ:

ಮನೆಯೊಳಗೆ ಬಾಲಕಿ ಮತ್ತು ಗಾಯಗೊಂಡ ಸ್ಥಿತಿಯಲ್ಲಿದ್ದ ಯುವಕನನ್ನು ಕಂಡ ಸ್ಥಳೀಯರು ತಕ್ಷಣವೇ ಮುತ್ತುರಾಜನನ್ನು ರಕ್ಷಿಸಿ, ಚಿಕಿತ್ಸೆಗಾಗಿ ತೂತುಕುಡಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ, ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಬತೈಯಾಪುರಂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More