AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ 3 ರಾಶಿಗೆ ಅದೃಷ್ಟ! ನಿಮ್ಮ ರಾಶಿಗೆ ಏನು ಫಲ ತಿಳಿಯಿರಿ

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ತೃತೀಯಾ ತಿಥಿಯ ಗುರುವಾರದಂದು ಭವಿಷ್ಯಕ್ಕೆ ಧನ, ಮನಸ್ಸಿಗೆ ಘಾಸಿ, ಆತ್ಮವಂಚನೆ, ಮಿತ್ರರ ಸಮಾಗಮ, ವಾಹನ ಖರೀದಿ, ಆಸ್ತಿಯ ವಿಚಾರಣೆ, ಅನೇಕ ಕಡೆಗಳಿಂದ ಆದಾಯ ಇವೆಲ್ಲ ಇಂದಿನ ಭವಿಷ್ಯ.

ದಿನ ಭವಿಷ್ಯ: ಇಂದು ಈ 3 ರಾಶಿಗೆ ಅದೃಷ್ಟ! ನಿಮ್ಮ ರಾಶಿಗೆ ಏನು ಫಲ ತಿಳಿಯಿರಿ
ದಿನ ಭವಿಷ್ಯImage Credit source: Google
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Oct 29, 2026 | 1:02 AM

Share

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ವರಿಯಾನ್, ಕರಣ : ಬವ, ಸೂರ್ಯೋದಯ – 06 – 13 am, ಸೂರ್ಯಾಸ್ತ – 05 – 52 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:31 – 14:58 ಯಮಗಂಡ ಕಾಲ 06:13- 07:41, ಗುಳಿಕ ಕಾಲ 09:08 – 10:36.

ಮೇಷ ರಾಶಿ: ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಾಗದು. ನಿಮ್ಮ ದಾರಿಯ ಬಗ್ಗೆ ನಿಮಗೆ ವಿಶ್ವಾಸವು ಇರಲಿ. ನಿಮ್ಮಿಂದ ಕೆಲಸವನ್ನು ಮಾಡಿಕೊಳ್ಳಲು ಹೊಗಳಬಹುದು. ಉದ್ಯೋಗದಲ್ಲಿ ಬಡ್ತಿಯನ್ನು ನಿರೀಕ್ಷಿಸಬಹುದು. ಬಂಧುಗಳಿಗೆ ನಿಮ್ಮ ಆಗಮನವು ಇಂದು ಇಷ್ಟವಾಗದು. ಸ್ತ್ರೀಯರು ತಮ್ಮನ್ನು ಅತಿಯಾಗಿ ಅಂದುಕೊಳ್ಳುವ ಸನ್ಮಿವೇಶ ಬರಬಹುದು. ಸಣ್ಣ ವ್ಯಾಪರಿಗಳಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರವಿರಿಸುವಿರಿ.

ವೃಷಭ ರಾಶಿ: ನಿಮ್ಮ ಹಣವು ಯಾವುದೋ ಒಂದು ರೀತಿಯಲ್ಲಿ ಖರ್ಚಾಗುವ ಸಾಧ್ಯತೆ ಇದ್ದು, ಅದನ್ನು ನಿಭಾಯಿಸಿ. ಈ ಇರುವವರು ಇನ್ನು ನಿಮಗೆ ಸಿಗದೇ ಹೋಗಬಹುದು. ವಿದ್ಯಾಭ್ಯಾಸದಲ್ಲಿ ಪ್ರಗತಿಯು ಇರಲಿದ್ದು ಅಡೆತಡೆಗಳೂ ಇರಲಿವೆ. ನಿಯಮದ ಉಲ್ಲಂಘನೆ‌ಯ ಕಾರಣ ದಂಡ ತೆರಬೇಕಾದ ಸ್ಥಿತಿ ಇರಲಿದೆ. ಹಳೆಯ ಸ್ನೇಹಿತರು ಉಪಕಾರ ಸ್ಮರಣೆಯ ಜೊತೆ ಸಹಾಯ ಮಾಡುವರು. ನಿಮಗೆ ನೀವು ಒಂಟಿ ಎನಿಸಬಹುದು. ಇನ್ನೊಬ್ಬರ ಮೇಲೆ ನಿಮಗೆ ತಪ್ಪನ್ನು ಹೇರಲಾಗದು.

ಮಿಥುನ ರಾಶಿ: ಕುಟುಂಬದ ನೆಮ್ಮದಿಯು ನಿಮ್ಮ ಮಾತಿನಿಂದ ಕದಡುವುದು. ಅನ್ನಿಸಿದ್ದನ್ನು ಕೂಡಲೇ ಹೇಳುವುದು ಬೇಡ. ಸಮಯಕ್ಕಾಗಿ ಕಾಯಿರಿ. ನೀವು ದೂರಪ್ರಯಾಣ ಮಾಡಿ ಅತಂತ್ರರಂತೆ ಆಗುವಿರಿ. ನೀವಿಂದು ಯಾವುದಕ್ಕೂ ಸ್ಪಂದಿಸಲಾರಿರಿ. ದಾಂಪತ್ಯದಲ್ಲಿ ಮನಸ್ತಾಪವು ಏಳಬಹುದು.‌ ಆದರೆ ಅದನ್ನು ಮುಂದುವರಿಸಲು ಬಿಡದೇ ಜಾಣ್ಮೆಯಿಂದ ಅಲ್ಲೇ ಮೊಟಕುಗೊಳಿಸುವಿರಿ.

ಕರ್ಕಾಟಕ ರಾಶಿ: ನಿಮ್ಮ ಮನೆಯ ಹಿರಿಯರ ಸೇವೆಯಿಂದ ನೆಮ್ಮದಿ ಸಿಗುವುದು. ಮನಸ್ಸು ಸ್ಥಿರವಿಲ್ಲದೇ ಇರುವ ಕಾರಣ ನಿಮ್ಮ ಗುರಿಯೂ ಬದಲಾಗುವುದು. ಬಂಧುಗಳು ನಿಮ್ಮನ್ನು ನೋಡಲು ಬರಬಹುದು. ಸಮಯ ಸ್ಫೂರ್ತಿಯಿಂದ ಕಾರ್ಯವನ್ನು ಸಾಧಿಸಿ. ಸಂತೋಷದ ವಿಚಾರವನ್ನು ಹಂಚಿಕೊಳ್ಳಲು ನೀವು ಮುಜುಗರ ಪಡಬಹುದು. ಇಷ್ಟವಿಲ್ಲದಿದ್ದರೂ ಇನ್ನೊಬ್ಬರ ಮಾತಿಗೆ ನೀವು ಬೆಂಬಲ ಕೊಡಬೇಕಾದೀತು. ನಿಮ್ಮ ಕಾರ್ಯಕ್ಕೆ ಸಾಕ್ಷಿಗಳ ಅವಶ್ಯಕತೆ ಇರುವುದು.

ಸಿಂಹ ರಾಶಿ; ಪರರ ಕಷ್ಟಕ್ಕೆ ಸುಮ್ಮನೆ ಕಿವಿಯಾಗಿ‌ಸಾಕು. ಬದಲಾದ ನಿಮ್ಮ ವ್ಯಕ್ತಿತ್ವವೇ ನಿಮಗೆ ಅಚ್ಚರಿ ಮೂಡಿಸಬಹುದು. ಮನೆಯಲ್ಲಿಯೇ ಇದ್ದು ಬೇಸರ ಬಂದ ಕಾರಣ ಎಲ್ಲಿಗಾದರೂ ವಿಹಾರಕ್ಕೆ ಹೋಗುವಿರಿ. ಅಧಿಕಾರಿಗಳಿಂದ ನಿಮ್ಮ ಉದ್ಯಮದ ಪರಿಶೀಲನೆ ನಡೆಯುವುದು. ನಿಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಸಾಧ್ಯವಾಗದು. ಕೊಟ್ಟ ಹಣವನ್ನು ವಾಪಾಸು ಪಡೆಯಲು ನೀವು ಬಹಳ ಪ್ರಯತ್ನಿಸುವಿರಿ. ಆದಾಯಕ್ಕೆ ಸಮನಾದ ಖರ್ಚು ಇರಲಿದೆ.

ಕನ್ಯಾ ರಾಶಿ: ವಿದೇಶದಲ್ಲಿ ಪಾಲುದಾರರಾಗಿ ಹೂಡಿಕೆ ಮಾಡುವಿರಿ. ಇಂದು ಮಾಡುವ ಕಾರ್ಯವು ನಿಮ್ಮ ಕುಟುಂಬಕ್ಕೆ ಯೋಗ್ಯವಾದ ಹೆಸರನ್ನು ತಂದುಕೊಡುವುದು. ಇಂದು ನೀವು ಅಂದುಕೊಂಡ ವಿಚಾರದಲ್ಲಿ ಜಯವು ಸಿಗಲಿದೆ. ನಿಮ್ಮ‌ ಮನಸ್ಸಿಗೆ ಬಾರದೇ ಯಾರಿಗೂ ಏನನ್ನೂ ಕೊಡುವುದಿಲ್ಲ. ಉತ್ಪನ್ನದಾರರಿಗೆ ಹೆಚ್ಚು ಆದಾಯ ಬರಲಿದೆ. ನಿಮ್ಮ ಬೆಳವಣಿಗೆಯಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಸ್ತ್ರೀಯ ಆಗಮನದಿಂದ ಮನೆಗೆ ಕಳೆ. ವೈದ್ಯವೃತ್ತಿಯಲ್ಲಿ ಒತ್ತಡವಿರುವುದು.

ತುಲಾ ರಾಶಿ; ದೇಹ ಪೀಡೆಯು ಅಧಿಕವಾಗಿ ಇರಲಿದೆ. ಇದರಿಂದ ನಿಮ್ಮ ಇಂದಿನ ಕೆಲಸವೂ ವಿಳಂಬವಾಗುವುದು. ಅನಿವಾರ್ಯ ನೀವು ಪ್ರಯಾಣವನ್ನು ಮಾಡಬೇಕಾಗಿಬರಬಹುದು. ಇಂದಿನ ಸಮಯವೇ ಗೊತ್ತಾಗದಂತೆ ಕಳೆದುಹೋಗುವುದು. ಭೂವ್ಯವಹಾರದಿಂದ ನಿಮಗೆ ಕೆಲವು ತೊಂದರೆಗಳೂ ಬರಲಿವೆ. ನಿಮ್ಮನ್ನು ಯಾರೂ ಸೇರಿಸಿಕೊಳ್ಳದೆ ಇರುವುದರಿಂದ ಬಹಳ ದುಃಖಿಸುವಿರಿ. ಯಾರನ್ನೂ ಸಮೀಪ ಸೇರಿಸಿಕೊಳ್ಳಲು ಬಿಡಲಾರಿರಿ.

ವೃಶ್ಚಿಕ ರಾಶಿ; ಪ್ರೇಮವು ನಿಮಗೆ ಬಂಧನದಂತೆ ತೋರಬಹುದು. ಮಕ್ಕಳ ಪ್ರಗತಿಯಿಂದ ಸಂತೋಷವು ಇರಲಿದೆ. ಸಹೋದರರ ನಡುವೆ ವಿನಾಕಾರಣ ಆರಂಭವಾದ ವಾಗ್ವಾದವು ದ್ವೇಷವಾಗಿ ಪರಿಣಮಿಸಬಹುದು. ವ್ಯವಹಾರದಲ್ಲಿ ನೀವು ಕಳೆದುಹೋಗುವಿರಿ. ಎಲ್ಲರನ್ನೂ ಸಮಾನವಾಗಿ ಕಾಣುವುದು ನಿಮಗೆ ಬರದು. ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವ ಮನೋಭಾವವು ಬರಬಹುದು.

ಧನು ರಾಶಿ; ನಿಮ್ಮ ನಡತೆಯು ಸಾಮಾನ್ಯರಂತೆ ಕಂಡರೂ ಪ್ರಭಾವವು ಅಧಿಕವಾಗಿರುತ್ತದೆ‌. ಹೊಂದಾಣಿಕೆಯ ಮನೋಭಾವವು ನಿಮಗೆ ಆಗದು. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತೆಯಿಂದ ಇರದು. ಆಸ್ತಿಯ ವಿಚಾರದಲ್ಲಿ ಆಂತರಿಕ ಕಲಹವು ದೊಡ್ಡದಾಗಬಹುದು. ಸತ್ಯವನ್ನು ನೀವು ಮರೆಮಾಡಲು ಪ್ರಯತ್ನಿಸುವಿರಿ. ಒತ್ತಡಗಳು ಎಂದಿಗಿಂತ ಕಡಿಮೆ ಇರಲಿವೆ. ಇಲ್ಲವಾದರೆ ಅಜೀರ್ಣವಾದೀತು. ಆಕಸ್ಮಿಕವಾಗಿ ಧನಲಾಭವು ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು.

ಮಕರ ರಾಶಿ: ಪ್ರೀತಿಸುವ ಜನರನ್ನು ನೀವು ಉಳಿಸಿಕೊಳ್ಳಲಾಗದು. ನಿಮ್ಮ ಕಾರ್ಯದ ದಕ್ಷತೆಯಿಂದ ಉನ್ನತ ಸ್ಥಾನವು ಸಿಗುವುದು. ಯಾವಾಗಲೂ ಸಿಟ್ಟು ಮಾಡುತ್ತಿದ್ದರೆ ನಿಮ್ಮ‌ ಸಿಟ್ಟಿಗೆ ಯಾವ ಬೆಲೆಯೂ ಇರದು. ಪ್ರಾಪಂಚಿಕ ಸುಖದಲ್ಲಿ ಆಸಕ್ತಿಯು ಕಡಿಮೆ ಇರುವುದು. ಒಂದಾದ‌ಮೇಲೆ ಒಂದರಂತೆ ಸವಾಲುಗಳು ನಿಮಗೆ ಸಿಗುವುದು. ಇಂದು ನೀವು ಸ್ವಾರ್ಥವನ್ನು ಬಿಟ್ಟು ಕೆಲಸ ಮಾಡಲು ಬಯಸುವಿರಿ. ಹಣಕಾಸಿನ ವಿಚಾರದಲ್ಲಿ ನಿಮಗೆ ಬಹಳ ಗೊಂದಲವಾಗಲಿದೆ.

ಕುಂಭ ರಾಶಿ: ನಿಮ್ಮವರ ಅವಶ್ಯಕತೆ ತಿಳಿಯುವುದು. ಮನೆಯ ಕೆಲಸದಿಂದ ನಿಮಗೆ ಆಯಾಸವಾಗುವುದು. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಅನಿರೀಕ್ಷಿತ ವಾರ್ತೆಯಿಂದ ಬೇಸರವಾಗಲಿದೆ. ಇಬ್ಬಗೆಯ ಮನಃಸ್ಥಿತಿಯನ್ನು ಇಟ್ಟಕೊಂಡರೆ ಕಷ್ಟವಾಗುವುದು. ಕುಟುಂಬದ ಹತ್ತಿರದವರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ವೈದ್ಯ ವೃತ್ತಿಯಲ್ಲಿ ಅಪವಾದವು ಬರಬಹುದು. ಮಾನಸಿಕ ಕಿರಿಕಿರಿಯಿಂದ ನೆಮ್ಮದಿ ಸಿಗಲಿದೆ.

ಮೀನ ರಾಶಿ: ನೀವು ಭೂಮಿಯ ವಿಚಾರವಾಗಿ ಕಲಹವನ್ನು ಮಾಡುವಿರಿ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ದೂರ ಕಳಿಸುವಿರಿ. ಸ್ಥಾನಮಾನವನ್ನು ಪಡೆಯಲು ಯಾವುದಾದರೂ ಮಾರ್ಗವನ್ನು ಪಡೆಯುವಿರಿ. ಬೇರೆ ಬೇರೆ ಆಲೋಚನೆಯನ್ನು ಮಾಡುವಿರಿ. ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವಿರಿ. ಹಿರಿಯರಿಂದ ಯೋಗ್ಯ ಸಲಹೆಯನ್ನು ಪಡೆದು ಮುಂದುವರಿಯಿರಿ. ನಿಮ್ಮಿಂದ ಸಹಾಯ ಪಡೆಯಲು ಏನಾದರೂ ನಟನೆ ಮಾಡುವರು.

ಲೋಹಿತ್ ಹೆಬ್ಬಾರ್ – 8762924271 (what’s app only)

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More