AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜನಿಗೆ ಮತ್ತೊಂದು ಅವಕಾಶ ಕೊಟ್ಟಿದ್ದಕ್ಕೆ ಕಾರಣ ವಿವರಿಸಿದ ಸುದೀಪ್

ನಿನ್ನೆ ನಡೆದ ವೀಕೆಂಡ್ ಎಪಿಸೋಡಿನಲ್ಲಿ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕಳಿಸಿದ್ದಾರೆ. ಆದರೆ ನಿನ್ನೆ ಬಿಗ್​​ಬಾಸ್ ಮನೆಯಿಂದ ಸಾಮಾನ್ಯ ಎವಿಕ್ಷನ್ ಆಗಲಿಲ್ಲ ಬದಲಿಗೆ, ಮನೆಗೆ ಅತಿಥಿಯಾಗಿ ಒಳಗೆ ಹೋಗಿದ್ದ ಮಂಜನನ್ನು ಸುದೀಪ್ ಅವರು ಹೊರಗೆ ಕರೆದರು. ಜೊತೆಗೆ ರೆಡ್ ಕಾರ್ಡ್ ಪಡೆದು ಹೊರಗೆ ಹೋಗಿದ್ದ ಮಂಜನಿಗೆ ಮತ್ತೊಂದು ಅವಕಾಶ ಕೊಟ್ಟಿದ್ದು ಏಕೆ ಎಂದು ಸಹ ಸುದೀಪ್ ವಿವರಿಸಿದರು.

ಮಂಜನಿಗೆ ಮತ್ತೊಂದು ಅವಕಾಶ ಕೊಟ್ಟಿದ್ದಕ್ಕೆ ಕಾರಣ ವಿವರಿಸಿದ ಸುದೀಪ್
Sudeep Manja
ಮಂಜುನಾಥ ಸಿ.
|

Updated on: Nov 23, 2026 | 7:24 AM

Share

ಬಿಗ್​​​ಬಾಸ್ ಕನ್ನಡ ಸೀಸನ್ 13ರ ಮತ್ತೊಂದು ವೀಕೆಂಡ್ ಪಂಚಾಯಿತಿ ನಿನ್ನೆ (ನವೆಂಬರ್ 22) ಮುಗಿದಿದೆ. ಭಾನುವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಸ್ಪರ್ಧಿಗಳೊಟ್ಟಿಗೆ ತಮಾಷೆ ಮಾಡುತ್ತಾ, ಕೆಲವು ಗೇಮುಗಳನ್ನು ಆಡಿಸಿದ್ದಾರೆ. ಜೊತೆಗೆ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕಳಿಸಿದ್ದಾರೆ. ಆದರೆ ನಿನ್ನೆ ಬಿಗ್​​ಬಾಸ್ ಮನೆಯಿಂದ ಸಾಮಾನ್ಯ ಎವಿಕ್ಷನ್ ಆಗಲಿಲ್ಲ ಬದಲಿಗೆ, ಮನೆಗೆ ಅತಿಥಿಯಾಗಿ ಒಳಗೆ ಹೋಗಿದ್ದ ಮಂಜನನ್ನು ಸುದೀಪ್ ಅವರು ಹೊರಗೆ ಕರೆದರು. ಜೊತೆಗೆ ರೆಡ್ ಕಾರ್ಡ್ ಪಡೆದು ಹೊರಗೆ ಹೋಗಿದ್ದ ಮಂಜನಿಗೆ ಮತ್ತೊಂದು ಅವಕಾಶ ಕೊಟ್ಟಿದ್ದು ಏಕೆ ಎಂದು ಸಹ ಸುದೀಪ್ ವಿವರಿಸಿದರು.

ಮಂಜ ಸ್ಪರ್ಧಿಯಾಗಿ ಅಲ್ಲ ಬದಲಿಗೆ ಅತಿಥಿಯಾಗಿ ಅಷ್ಟೆ ಮನೆಗೆ ಬಂದಿದ್ದರು ಎಂದ ಸುದೀಪ್, ಭಾನುವಾರದ ಪಂಚಾಯಿತಿಯ ಕೊನೆಯಲ್ಲಿ ಮಂಜನನ್ನು ಮನೆಯಿಂದ ಹೊರಗೆ ಕರೆದರು. ಅಲ್ಲಿಗೆ ಮಂಜನ ಎರಡನೇ ಇನ್ನಿಂಗ್ಸ್ ಸಹ ನಿನ್ನೆಗೆ ಕೊನೆಯಾಯ್ತು. ಮಂಜನನ್ನು ಹೊರಗೆ ಕರೆಯುವ ಮುನ್ನ ಆತನಿಗೆ ಮತ್ತೊಂದು ಅವಕಾಶವನ್ನು ಕೊಟ್ಟಿದ್ದು ಏಕೆ ಎಂದು ವಿವರಿಸಿದರು.

‘ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ. ಮಂಜನೂ ತಪ್ಪು ಮಾಡಿದ್ದ. ಆದರೆ ತಪ್ಪು ಮಾಡಿ ಹೊರಗೆ ಬಂದ ಬಳಿಕ ಅವನ ಕಣ್ಣಲ್ಲಿ ನಿಜವಾದ ಪಶ್ಚಾತ್ತಾಪವನ್ನು ನಾನು ನೋಡಿದೆ. ಅವನಿಗೆ ಮತ್ತೊಂದು ಅವಕಾಶ ಕೊಡಬೇಕು ಎನಿಸಿತು ಹಾಗಾಗಿ ಅವನನ್ನು ಮತ್ತೆ ಮನೆಯ ಒಳಗೆ ಕಳಿಸಿದೆವು, ಅದು ನನ್ನ ವೈಯಕ್ತಿಕ ಆಯ್ಕೆ ಆಗಿತ್ತು’ ಎಂದರು. ಆ ಮೂಲಕ ರೆಡ್ ಕಾರ್ಡ್ ಪಡೆದು ಹೊರಗೆ ಬಂದಿದ್ದ ಮಂಜನನ್ನು ಮತ್ತೆ ಮನೆಯ ಒಳಗೆ ಕಳಿಸಿದ್ದು ತಾವೇ ಎಂದರು ಸುದೀಪ್.

ಇದನ್ನೂ ಓದಿ:ಬಿಗ್​​​ಬಾಸ್ ಶೋ ಬಂದ್ ಆದರೆ ಆಗುವ ನಷ್ಟ ಎಷ್ಟು: ಮಾಜಿ ಸ್ಪರ್ಧಿ ಹೇಳಿದ್ದೇನು?

ಮನೆಯಿಂದ ಹೊರಗೆ ಹೋಗುವ ಎಲ್ಲರದ್ದೂ ಒಂದು ಒಳ್ಳೆಯ ವಿಡಿಯೋ ಇರಬೇಕು, ಬಿಗ್​​ಬಾಸ್​ ಅವರಿಗೊಂದು ಸುಂದರ ಪಯಣದಂತೆ ಅನ್ನಿಸಬೇಕು ಎಂಬುದು ನನ್ನ ಅಭಿಪ್ರಾಯ. ಮಂಜನಿಗೆ ಅವನ ಸುಂದರ ವೀಟಿ ಕೊಡಿಸುವುದಾಗಿ ನಾನು ಭರವಸೆ ನೀಡಿದ್ದೆ. ಈಗ ಮತ್ತೆ ಮನೆಗೆ ಕಳಿಸುವ ಮೂಲಕ ಆ ಭರವಸೆ ಈಡೇರಿಸಿದ್ದೇನೆ ಎಂದರು ಸುದೀಪ್.

ಮಂಜ, ಅಗ್ನಿಪರೀಕ್ಷೆಯಲ್ಲಿ ಪಾಲ್ಗೊಂಡು ಆಟವಾಡಿ ಬಿಗ್​​ಬಾಸ್ ಮನೆಗೆ ಟಿಕೆಟ್ ಪಡೆದುಕೊಂಡಿದ್ದರು. ಆದರೆ ಮನೆಯಲ್ಲಿ ರೌಡಿ ವರ್ತನೆ ತೋರಿ, ಸಹ ಸ್ಪರ್ಧಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕಾರಣ ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿತ್ತು. ಬಳಿಕ ಸುದೀಪ್ ಅವರು ಮತ್ತೊಂದು ಅವಕಾಶ ಕೊಡಿಸಿದ ಕಾರಣ ಮಂಜ ಮತ್ತೆ ಬಿಗ್​​ಬಾಸ್ ಮನೆ ಸೇರಿದ್ದ. ಆದರೆ ಆತ ಮನೆಗೆ ಹೋಗುವಾಗಲೇ ಮಂಜ ಕೇವಲ ಅತಿಥಿ ಅಷ್ಟೆ ಎಂದು ವೀಕ್ಷಕರಿಗೆ ತಿಳಿಸಲಾಗಿತ್ತು. ಈಗ ಮಂಜನನ್ನು ಮತ್ತೆ ಹೊರಗೆ ಕರೆಸಿಕೊಳ್ಳಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ತಾರಕ್ಕೇರಿದ ಮಾಜಿ ಸಿಎಂ ಜಗನ್-ಸಹೋದರಿ ನಡುವಿನ ಆಸ್ತಿ ವಿವಾದ
ತಾರಕ್ಕೇರಿದ ಮಾಜಿ ಸಿಎಂ ಜಗನ್-ಸಹೋದರಿ ನಡುವಿನ ಆಸ್ತಿ ವಿವಾದ
‘ಬಸವ ಮಂಟಪ’ವಿವಾದ: ಲೇಖಕ ರವಿ ಹಂಜ್​​ಗೆ ಶಾಕ್ ಕೊಟ್ಟ ಬೆಳಗಾವಿ ಪೊಲೀಸ್ರು
‘ಬಸವ ಮಂಟಪ’ವಿವಾದ: ಲೇಖಕ ರವಿ ಹಂಜ್​​ಗೆ ಶಾಕ್ ಕೊಟ್ಟ ಬೆಳಗಾವಿ ಪೊಲೀಸ್ರು
ಸರ್ಕಾರಿ ಶಾಲೆಗೆ ಬಿಸಿಯೂಟ ಅಕ್ಕಿ ಪೂರೈಸದ ಪ್ರಕರಣದಲ್ಲಿ ಇಬ್ಬರು ಸಸ್ಪೆಂಡ್
ಸರ್ಕಾರಿ ಶಾಲೆಗೆ ಬಿಸಿಯೂಟ ಅಕ್ಕಿ ಪೂರೈಸದ ಪ್ರಕರಣದಲ್ಲಿ ಇಬ್ಬರು ಸಸ್ಪೆಂಡ್
ಮನವಿ ನೀಡಿದವರ ಬಳಿ ಸಚಿವ ಮಧು ಬಂಗಾರಪ್ಪ ದರ್ಪ: ವಿಡಿಯೋ ವೈರಲ್
ಮನವಿ ನೀಡಿದವರ ಬಳಿ ಸಚಿವ ಮಧು ಬಂಗಾರಪ್ಪ ದರ್ಪ: ವಿಡಿಯೋ ವೈರಲ್
ಬೆಂಗಳೂರು ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್
ಬೆಂಗಳೂರು ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್
ಚಿನ್ನ ಖರೀದಿಸಬೇಡಿ ಎಂಬ ಕರೆಯನ್ನು ಪಾಲಿಸಿದ ಭಾರತೀಯರಿಗೆ ಮೋದಿ ಮೆಚ್ಚುಗೆ
ಚಿನ್ನ ಖರೀದಿಸಬೇಡಿ ಎಂಬ ಕರೆಯನ್ನು ಪಾಲಿಸಿದ ಭಾರತೀಯರಿಗೆ ಮೋದಿ ಮೆಚ್ಚುಗೆ
ಕೊಚ್ಚಿನ್ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ವಿಚಾರಣೆ
ಕೊಚ್ಚಿನ್ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ವಿಚಾರಣೆ
ಬರದಿಂದ ರೈತರು ಸಂಕಷ್ಟದಲ್ಲಿರುವಾಗ ಗದಗ ಡಿಸಿ ನಿವಾಸದಲ್ಲಿ ಮೋಜು-ಮಸ್ತಿ
ಬರದಿಂದ ರೈತರು ಸಂಕಷ್ಟದಲ್ಲಿರುವಾಗ ಗದಗ ಡಿಸಿ ನಿವಾಸದಲ್ಲಿ ಮೋಜು-ಮಸ್ತಿ
ನವೆಂಬರ್ 23ರಿಂದ 29ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನವೆಂಬರ್ 23ರಿಂದ 29ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಬಿಗ್ ಬಾಸ್: ಸೂಪರ್ ಸಂಡೇ ಸಂಚಿಕೆಯಲ್ಲೂ ಮಂಜ, ಗಾನವಿ ಲವ್ ಸ್ಟೋರಿ ಚರ್ಚೆ
ಬಿಗ್ ಬಾಸ್: ಸೂಪರ್ ಸಂಡೇ ಸಂಚಿಕೆಯಲ್ಲೂ ಮಂಜ, ಗಾನವಿ ಲವ್ ಸ್ಟೋರಿ ಚರ್ಚೆ