‘ನಿನ್ನ ದೇಹ ನೀನೇ ನಿರ್ಧರಿಸು’; ದೀಪಿಕಾಗೆ ನೇರವಾಗಿ ಹೇಳಿದ್ದ ರಣವೀರ್ ಸಿಂಗ್
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಮಗುವಿನ ಹೆಸರು 'ದುವಾ' ಎಂದು ಬಹಿರಂಗಗೊಂಡಿದೆ. ಮಾತೃತ್ವದ ನಿರ್ಧಾರವನ್ನು ದೀಪಿಕಾ ಸ್ವತಃ ತೆಗೆದುಕೊಳ್ಳಬೇಕೆಂದು ರಣವೀರ್ ಬೆಂಬಲಿಸಿದ್ದಾರೆ. ದೀಪಿಕಾ ತಾಯ್ತನದ ನಂತರ 'ಕಲ್ಕಿ 2898 ಎಡಿ 2' ಮತ್ತು 'ಸ್ಪಿರಿಟ್' ಚಿತ್ರಗಳಲ್ಲಿ ನಟಿಸಲು ಸಿದ್ಧರಾಗಿದ್ದಾರೆ.

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ (Deepika Padukone) ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಇಬ್ಬರೂ ಒಬ್ಬರನ್ನೊಬ್ಬರು ಗೌರವಿಸುತ್ತಾರೆ. ಅದರಲ್ಲೂ ರಣವೀರ್ ಸಿಂಗ್ ಅವರು ದೀಪಿಕಾನ ಅತಿಯಾಗಿ ಪ್ರೀತಿಸುತ್ತಾರೆ. ಅನೇಕ ಬಾರಿ ಅಭಿಮಾನಿಗಳಿಗೆ ಇದು ಓಪನ್ ಆಗಿ ಕಾಣಿಸಿದೆ. ಇತ್ತೀಚಿಗಿನ ಸಂದರ್ಶನ ಒಂದರಲ್ಲಿ ದೀಪಿಕಾ ಪಡುಕೋಣೆ ಅವರು ಒಂದು ವಿಚಾರವನ್ನು ರಿವೀಲ್ ಮಾಡಿದ್ದಾರೆ. ಮಾತೃತ್ವವನ್ನು ಹೊಂದುವ ವಿಚಾರದಲ್ಲಿ ಸಂಪೂರ್ಣ ನಿರ್ಧಾರವನ್ನು ದೀಪಿಕಾ ಅವರೇ ತೆಗೆದುಕೊಳ್ಳಬೇಕು ಎಂದು ರಣವೀರ್ ಸಿಂಗ್ ಹೇಳಿದ್ದರಂತೆ.
‘ಇದು ಇಬ್ಬರೂ ತೆಗೆದುಕೊಳ್ಳುವ ನಿರ್ಧಾರ. ಆದರೆ, ಮಗುವನ್ನು ಹೆರೋದು ನೀನು. ನೀನು ಯಾವಾಗ ರೆಡಿ ಎಂದು ಹೇಳುತ್ತೀಯೋ ಆಗ ಮಗು ಮಾಡಿಕೊಳ್ಳೋಣ ಎಂದು ರಣವೀರ್ ನನಗೆ ಹೇಳಿದ್ದ’ ಎಂಬುದಾಗಿ ದೀಪಿಕಾ ಪಡುಕೋಣೆ ರಿವೀಲ್ ಮಾಡಿದ್ದಾರೆ. ಈಗಿರುವ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಮಗು ಮಾಡಿಕೊಳ್ಳುವಂತೆ ಪತ್ನಿಗೆ ಒತ್ತಡ ಹೇರುತ್ತಾರೆ. ಆದರೆ, ರಣವೀರ್ ಈ ವಿಚಾರದಲ್ಲಿ ಭಿನ್ನ. ರಣವೀರ್ ಪ್ರಬುದ್ಧತೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.
ದೀಪಿಕಾ ಹಾಗೂ ರಣವೀರ್ ಮಗುವಿಗೆ ದುವಾ ಎಂದು ಹೆಸರು ಇಟ್ಟಿದ್ದಾರೆ. ಈ ಪ್ರಕ್ರಿಯೆ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ‘ನಾನು ರಣವೀರ್ಗೆ ದುವಾ ಎಂದು ಕಳುಹಿಸಿದೆ. ಇದು ರಣವೀರ್ಗೆ ಇಷ್ಟ ಆಯಿತು’ ಎಂದಿದ್ದಾರೆ ಅವರು. ಮಗುವಿಗೆ ಹೆಸರು ನಿರ್ಧರಿಸಲು ಎರಡು ತಿಂಗಳು ಬೇಕಾಯಿತು ಎಂದು ದಂಪತಿ ಹೇಳಿದ್ದಾರೆ.
ಸದ್ಯ ರಣವೀರ್ ಸಿಂಗ್ ಹಾಗೂ ದೀಪಿಕಾ ಮಗುವಿನ ಖಾಸಗಿತನವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಅನುಷ್ಕಾ ಶರ್ಮಾ ಅವರನ್ನೇ ದೀಪಿಕಾ ಫಾಲೋ ಮಾಡುತ್ತಿದ್ದಾರೆ. ಅನುಷ್ಕಾ ಅವರು ಮಗುವಿನ ಫೋಟೋನ ಎಲ್ಲೂ ಹಂಚಿಕೊಂಡಿಲ್ಲ. ದೀಪಿಕಾ ಕೂಡ ಇದೇ ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ: ರಣಬೀರ್-ರಣವೀರ್ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಅವರು ಮಗುವನ್ನು ಹೊಂದಿದ ಬಳಿಕ ನಟನೆಗೆ ಮರಳಲು ರೆಡಿ ಆಗಿದ್ದಾರೆ. ‘ಕಲ್ಕಿ 2898 ಎಡಿ 2’ ಚಿತ್ರಕ್ಕೆ ಅವರೇ ನಾಯಕಿ. ಅಲ್ಲದೆ, ‘ಸ್ಪಿರಿಟ್’ ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದಲ್ಲಿ ಪ್ರಭಾಸ್ ಮತ್ತು ದೀಪಿಕಾ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದಂತೆ ಆಗಲಿದೆ. ಆದರೆ, ಈ ವಿಚಾರ ಇನ್ನೂ ಅಧಿಕೃತ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.