AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೈಮಾಟ ಹಾಡು ನನ್ನ ವೈಯಕ್ತಿಕ ಜೀವನ ಅಲ್ಲ’: ಸ್ಪಷ್ಟನೆ ನೀಡಿದ ಚಂದನ್ ಶೆಟ್ಟಿ

ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡುವ ಮೂಲಕ ಗಾಯಕ ಚಂದನ್ ಶೆಟ್ಟಿ ಅವರು ತಮ್ಮ ಹೊಸ ಹಾಡಿನ ಕುರಿತು ಅಂತೆ-ಕಂತೆಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ. ‘ಮೈಮಾಟ’ ಹಾಡಿನ ಸಾಹಿತ್ಯಕ್ಕೂ ತಮ್ಮ ವೈಯಕ್ತಿಕ ಜೀವನದ ಘಟನೆಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಚಂದನ್ ಶೆಟ್ಟಿ ಅವರು ಸ್ಪಷ್ಟಪಡಿಸಿದ್ದಾರೆ.

‘ಮೈಮಾಟ ಹಾಡು ನನ್ನ ವೈಯಕ್ತಿಕ ಜೀವನ ಅಲ್ಲ’: ಸ್ಪಷ್ಟನೆ ನೀಡಿದ ಚಂದನ್ ಶೆಟ್ಟಿ
Chandan Shetty, Niveditha Gowda
ಮದನ್​ ಕುಮಾರ್​
|

Updated on: Oct 28, 2026 | 9:55 PM

Share

ಗಾಯಕ, ಸಂಗೀತ ಸಂಯೋಜಕ ಚಂದನ್ ಶೆಟ್ಟಿ ಅವರ ಹೊಸ ಹಾಡು ‘ಮೈಮಾಟ’ ಬಿಡುಗಡೆ ಆದಾಗಿನಿಂದ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಹಾಡಿನಲ್ಲಿ ಇರುವ ಸಾಹಿತ್ಯವನ್ನು ಗಮನಿಸಿದ ವೀಕ್ಷಕರು ಬಗೆಬಗೆಯ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಚಂದನ್ ಶೆಟ್ಟಿ ಅವರ ಮಾಜಿ ಪತ್ನಿ ನಿವೇದಿತಾ ಗೌಡ ಅವರಿಗೆ ಈ ಸಾಹಿತ್ಯ ಸಂಬಂಧಿಸಿದೆ ಎಂದು ಕೆಲವರು ಊಹಿಸಿದ್ದಾರೆ. ಆದರೆ ಅಂತಹ ಊಹಾಪೋಹಗಳಿಗೆ ಈಗ ಸ್ವತಃ ಚಂದನ್ ಶೆಟ್ಟಿ ಅವರೇ ಸ್ಪಷ್ಟನೆ ನೀಡಿದ್ದಾರೆ.

‘ಎಲ್ಲರಿಗೂ ಒಂದು ಸಣ್ಣ ಸ್ಪಷ್ಟನೆ. ನನ್ನ ಇತ್ತೀಚಿನ ‘ಮೈಮಾಟ’ ಹಾಡಿನ ಆರಂಭದಲ್ಲೇ ತಿಳಿಸಿರುವಂತೆ, ಈ ಹಾಡನ್ನು ಕೇವಲ ಮನರಂಜನೆಗಾಗಿ ರಚಿಸಲಾಗಿದ್ದು, ಯಾರನ್ನೂ ನೋಯಿಸುವ ಅಥವಾ ಗುರಿಯಾಗಿಸುವ ಉದ್ದೇಶ ಹೊಂದಿಲ್ಲ. ಈ ರೀತಿಯ ಹೊಸ ಸಂಗೀತ ಶೈಲಿಯನ್ನು ಪ್ರಯತ್ನಿಸಬೇಕೆಂಬ ಆಸೆ ನನಗೆ ಬಹಳ ಹಿಂದಿನಿಂದಲೂ ಇತ್ತು. ನನ್ನ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಘಟನೆಗಳಿಗೂ ಮೊದಲೇ ಈ ಹಾಡನ್ನು ಸಿದ್ಧಪಡಿಸಲಾಗಿತ್ತು’ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

‘ಆದರೆ ಇತ್ತೀಚೆಗೆ ಕೆಲವು ಸುದ್ದಿ ಮಾಧ್ಯಮಗಳಲ್ಲಿ, ಯೂಟ್ಯೂಬ್ ಚಾನೆಲ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡನ್ನು ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಬಿಂಬಿಸಲಾಗುತ್ತಿದೆ. ಈ ಬಗ್ಗೆ ಅನೇಕ ಪ್ರಶ್ನೆಗಳು ಹಾಗೂ ಊಹಾಪೋಹಗಳು ಕೇಳಿಬರುತ್ತಿರುವುದರಿಂದ ಈ ಸ್ಪಷ್ಟನೆ ನೀಡುತ್ತಿದ್ದೇನೆ. ದಯವಿಟ್ಟು ಈ ಹಾಡನ್ನು ನನ್ನ ವೈಯಕ್ತಿಕ ಜೀವನದೊಂದಿಗೆ ಹೋಲಿಸಿ ಅನಗತ್ಯ ಊಹಾಪೋಹಗಳು ಹಾಗೂ ನಕಾರಾತ್ಮಕತೆಯನ್ನು ಹರಡಬೇಡಿ ಎಂದು ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತೇನೆ’ ಎಂದು ಚಂದನ್ ಶೆಟ್ಟಿ ಮನವಿ ಮಾಡಿದ್ದಾರೆ.

‘ಸಂಗೀತ ಎನ್ನುವುದು ಸೃಜನಶೀಲತೆಯ ಅಭಿವ್ಯಕ್ತಿ. ಪ್ರತಿಯೊಂದು ಹಾಡೂ ಕಲಾವಿದನ ವೈಯಕ್ತಿಕ ಜೀವನದ ಕಥೆಯಾಗಿರಬೇಕೆಂದಿಲ್ಲ. ಈ ಹಾಡಿಗೆ ನೀವು ತೋರಿಸುತ್ತಿರುವ ಅಪಾರ ಪ್ರೀತಿ, ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿಯೇ ನನಗೆ ಇನ್ನಷ್ಟು ಹೊಸ ಪ್ರಯೋಗಗಳನ್ನು ಮಾಡಲು ಸ್ಫೂರ್ತಿ. ಎಲ್ಲರಿಗೂ ಪ್ರೀತಿ ಮತ್ತು ಗೌರವ’ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ‘ಭೂತಕಾಲ ನನ್ನ ಬಿಡುತ್ತಿಲ್ಲ’; ಚಂದನ್ ಶೆಟ್ಟಿಗೆ ಕೌಂಟರ್ ಕೊಟ್ರಾ ನಿವೇದಿತಾ ಗೌಡ?

ಈ ಹಾಡು ಬಿಡುಗಡೆ ಆದ ಸಂದರ್ಭದಲ್ಲೇ ನಿವೇದಿತಾ ಗೌಡ ಅವರು ಒಂದು ಪೋಸ್ಟ್ ಮಾಡಿದರು. ‘ನಾನು ಎಲ್ಲೋ ಓದಿದ್ದೆ- ಮಹತ್ವಾಕಾಂಕ್ಷೆ ಇರುವ ಹುಡುಗಿ ಅದ್ಭುತ ಸ್ನೇಹಿತರನ್ನು ಹೊಂದಿರುವುದು ಮತ್ತು ದುರಾದೃಷ್ಟದ ಪ್ರೇಮ ಜೀವನವನ್ನು ಹೊಂದಿರುವುದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ತರಹ. ಆದರೆ ನನ್ನದು ಒಂದು ಹಾರರ್ ಕಥೆ ಆಗಿತ್ತು. ಭೂತಕಾಲ ನನ್ನನ್ನು ಬಿಟ್ಟು ಕದಲುತ್ತಿಲ್ಲ’ ಎಂದು ಬರೆದುಕೊಂಡಿದ್ದರು. ಆ ಕಾರಣದಿಂದಲೇ ಚರ್ಚೆ ಶುರುವಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More