AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಸ್ ಗೇಲ್ ಜೊತೆ ಚಂದನ್ ಶೆಟ್ಟಿ ವಿಡಿಯೋ ಸಾಂಗ್; ಕನ್ನಡ ಹಾಡಿಗೆ ಎಗ್ಸೈಟ್ ಆದ ಯೂನಿವರ್ಸಲ್ ಬಾಸ್

ಚಂದನ್ ಶೆಟ್ಟಿ ಅವರು ವಿಶ್ವಪ್ರಸಿದ್ಧ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್ ಜೊತೆ ಹೊಸ ಸಾಂಗ್ ಮಾಡುತ್ತಿದ್ದಾರೆ. ‘ಲೈಫ್ ಈಸ್ ಕಸಿನೋ’ ಎಂಬ ಈ ಹಾಡು ಕನ್ನಡ ಸಿನಿಮಾ ರಂಗದಲ್ಲಿ ಹೊಸ ಅಧ್ಯಾಯವನ್ನು ತೆರೆಯಲಿದೆ. ಕ್ರಿಸ್ ಗೇಲ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಘೋಷಿಸಿದ್ದಾರೆ. ಇದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಕ್ರಿಸ್ ಗೇಲ್ ಜೊತೆ ಚಂದನ್ ಶೆಟ್ಟಿ ವಿಡಿಯೋ ಸಾಂಗ್; ಕನ್ನಡ ಹಾಡಿಗೆ ಎಗ್ಸೈಟ್ ಆದ ಯೂನಿವರ್ಸಲ್ ಬಾಸ್
ಚಂದನ್-ಗೇಲ್
ರಾಜೇಶ್ ದುಗ್ಗುಮನೆ
|

Updated on: Aug 12, 2025 | 6:55 AM

Share

ಚಂದನ್ ಶೆಟ್ಟಿ ಅವರು ಈಗಾಗಲೇ ಹಲವು ಹಿಟ್ ಹಾಡುಗಳನ್ನು ನೀಡಿದ್ದಾರೆ. ಅದರಲ್ಲೂ ಅವರ ಆಲ್ಬಂ ಸಾಂಗ್​ಗಳು ತುಂಬಾನೇ ಫೇಮಸ್. ಈಗ ಅವರು ವೆಸ್ಟ್ ಇಂಡೀಸ್, ಆರ್​ಸಿಬಿಯ ಮಾಜಿ ಆಟಗಾರ ಕ್ರಿಸ್ ಗೇಲ್ ಜೊತೆ ವಿಡಿಯೋ ಸಾಂಗ್ ಒಂದನ್ನು ಶೂಟ್ ಮಾಡುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಕ್ರಿಸ್ ಗೇಲ್ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರ ಕೇಳಿ ಚಂದನ್ ಶೆಟ್ಟಿ (Chandan Shetty)  ಅಭಿಮಾನಿಗಳು ಹಾಗೂ ಕನ್ನಡಿಗರಿಗೆ ಖುಷಿ ಆಗಿದೆ. ಈ ವಿಡಿಯೋ ಸಾಂಗ್ ಯಾವ ರೀತಿಯಲ್ಲಿ ಇರಲಿದೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

ಚಂದನ್ ಶೆಟ್ಟಿ ಅವರು ಹಲವು ಹಿಟ್ ಹಾಡುಗಳನ್ನು ನೀಡುತ್ತಾ ಬಂದಿದ್ದಾರೆ. ಅವರ ಹಾಡುಗಳಿಗೆ ದೊಡ್ಡ ಅಭಿಮಾನಿ ವರ್ಗ ಇದೆ. ಆದರೆ, ಇತ್ತೀಚೆಗೆ ಅವರು ಹಾಡುಗಳನ್ನು ಮಾಡೋದನ್ನು ಕಡಿಮೆ ಮಾಡಿದ್ದಾರೆ. ಅಷ್ಟಾಗಿ ಸಾಂಗ್​ಗಳನ್ನು ಅವರಿಂದ ಮೂಡಿ ಬಂದಿರಲಿಲ್ಲ. ಬದಲಿಗೆ ನಟನೆಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದರು. ಇದರ ಜೊತೆಗೆ ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತ ಉಂಟಾಯಿತು. ಈಗ ಅದೆಲ್ಲವನ್ನೂ ಮರೆತು ಮುಂದೆ ಸಾಗುತ್ತಿದ್ದಾರೆ.

ಇದನ್ನೂ ಓದಿ
Image
ಎಷ್ಟು ಅರ್ಥಗರ್ಭಿತವಾಗಿತ್ತು ನೋಡಿ 11 ವರ್ಷಗಳ ಹಿಂದೆ ಬಂದ ರಾಜ್ ಕಿರುಚಿತ್ರ
Image
‘ಕಾಟೇರ’ ಕಲೆಕ್ಷನ್​ ದಾಖಲೆ ಮುರಿಯಲು ‘ಸು ಫ್ರಮ್ ಸೋ’ಗೆ ಬೇಕು ಕೆಲವೇ ಕೋಟಿ
Image
‘ಕೂಲಿ’ ಚಿತ್ರದ ರಜನಿ ಸಂಭಾವನೆಯಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು
Image
‘ಬ್ಲಾಕ್​ಬಸ್ಟರ್’; ಒಂದು ವಾರ ಮೊದಲೇ ಹೊರಬಿತ್ತು ಕೂಲಿ ಸಿನಿಮಾ ವಿಮರ್ಶೆ

ಚಂದನ್ ಶೆಟ್ಟಿ ಅವರು ಸದ್ಯ ವಿದೇಶದಲ್ಲಿ ಇದ್ದಾರೆ. ಕ್ರಿಸ್ ಗೇಲ್ ಅವರು ತಮ್ಮ ಇನ್​ಸ್ಟಾಗ್ರಾಮ್ ಸ್ಟೇಟಸ್​​ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಚಂದನ್ ಶೆಟ್ಟಿ ಜೊತೆ ವಿಡಿಯೋ ಸಾಂಗ್ ಶೂಟ್ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಕ್ರಿಸ್ ಗೇಲ್ ಸ್ಟೇಟಸ್

‘ನಾವು ಹಾಡು ಮಾಡುತ್ತಿದ್ದೇವೆ. ಅದರ ಹೆಸರು ಲೈಫ್ ಈಸ್ ಕಸಿನೋ. ನಾನು ಎಗ್ಸೈಟ್ ಆಗಿದ್ದೇನೆ. ನಾನು ಈ ಹಾಡಿನ ಫ್ಯಾನ್ ಆಗಿದ್ದೇನೆ’ ಎಂದಿದ್ದಾರೆ ಚಂದನ್ ಶೆಟ್ಟಿ. ಇದಕ್ಕೆ ಕ್ರಿಸ್ ಗೇಲ್ ಕೂಡ ಖುಷಿ ಆಗಿದ್ದು, ಅವರು ಹೆಮ್ಮೆಯಿಂದ ಈ ಬಗ್ಗೆ ಹೇಳಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾಯಿರಿ ಎಂದಿದ್ದಾರೆ.

ಇದನ್ನೂ ಓದಿ: ‘ನಿವೇದಿತಾಳನ್ನು ಈಗಲೂ ಮಿಸ್ ಮಾಡಿ ಕೊಳ್ತೀನಿ’; ಚಂದನ್ ಶೆಟ್ಟಿ

ಕ್ರಿಸ್ ಗೇಲ್ ಅವರಿಗೆ ಬೆಂಗಳೂರಿನ ಬಗ್ಗೆ, ಕನ್ನಡಿಗರ ವಿಶೇಷ ಪ್ರೀತಿ ಇದೆ. ಇದಕ್ಕೆ ಕಾರಣ ಆರ್​ಸಿಬಿ. ಅವರು ಹಲವು ವರ್ಷಗಳ ಕಾಲ ಆರ್​ಸಿಬಿ ಪರ ಆಡಿದ್ದರು. ಅವರು ಅನೇಕ ಬಾರಿ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಆದರೆ, ಈವರೆಗೆ ಅವರು ಕನ್ನಡದ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.