AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬ್ಲಾಕ್​ಬಸ್ಟರ್ ಪಕ್ಕಾ’; ಒಂದು ವಾರ ಮೊದಲೇ ಹೊರಬಿತ್ತು ‘ಕೂಲಿ’ ಸಿನಿಮಾ ವಿಮರ್ಶೆ

Coolie Movie Review: ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಆಗಸ್ಟ್ 14 ರಂದು ತೆರೆ ಕಾಣುತ್ತಿದೆ. ಲೋಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ, ಸೌಬಿನ್ ಶಾಹಿರ್, ನಾಗಾರ್ಜುನ ಮುಂತಾದವರು ನಟಿಸಿದ್ದಾರೆ. ಆರಂಭಿಕ ವಿಮರ್ಶೆಗಳು ಸಕಾರಾತ್ಮಕವಾಗಿದ್ದು, ರಜನಿಕಾಂತ್ ಅವರ ಅಭಿನಯ ಹಾಗೂ ಚಿತ್ರದ ಕಥಾವಸ್ತು ಹೆಚ್ಚು ಮೆಚ್ಚುಗೆ ಪಡೆದಿದೆ.

‘ಬ್ಲಾಕ್​ಬಸ್ಟರ್ ಪಕ್ಕಾ’; ಒಂದು ವಾರ ಮೊದಲೇ ಹೊರಬಿತ್ತು ‘ಕೂಲಿ’ ಸಿನಿಮಾ ವಿಮರ್ಶೆ
ಕೂಲಿ
ರಾಜೇಶ್ ದುಗ್ಗುಮನೆ
|

Updated on:Aug 09, 2025 | 7:42 AM

Share

ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ (Coolie Movie) ಆಗಸ್ಟ್ 14ರಂದು ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಸ್ಟಾರ್​ಗಳ ಸಮಾಗಮ ಆಗಿದೆ. ಚಿತ್ರದ ಟ್ರೇಲರ್ ನೋಡಿದರೆ ಇದೊಂದು ಪಕ್ಕಾ ಗ್ಯಾಂಗ್​​ಸ್ಟರ್ ಚಿತ್ರ ಅನ್ನೋದು ಗೊತ್ತಾಗುತ್ತದೆ. ಈ ಸಿನಿಮಾದಲ್ಲಿ ರಜನಿ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. 74ನೇ ವಯಸ್ಸಿನಲ್ಲೂ ಅವರು ಭರ್ಜರಿ ಆ್ಯಕ್ಷನ್ ಮಾಡಿದ್ದಾರೆ. ಈಗ ಸಿನಿಮಾದ ವಿಶೇಷ ಶೋ ನೋಡಿದ ಫ್ಯಾನ್ಸ್ ಇದರ ವಿಮರ್ಶೆ ತಿಳಿಸುತ್ತಿದ್ದಾರೆ. ರಜನಿಕಾಂತ್ ಚಿತ್ರವನ್ನು ಅನೇಕರು ಹೊಗಳಿದ್ದಾರೆ.

‘ಕೂಲಿ’ ಸಿನಿಮಾ ನಿರೀಕ್ಷೆ ಮೂಡಿಸಲು ಹಲವು ಕಾರಣಗಳಿವೆ. ಈ ಸಿನಿಮಾಗೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಜನಿ ಜೊತೆ ಕನ್ನಡದ ಉಪೇಂದ್ರ, ಮಲಯಾಳಂನ ಸೌಬಿನ್ ಶಾಹಿರ್, ನಾಗಾರ್ಜುನ, ಶ್ರುತಿ ಹಾಸನ್, ಸತ್ಯರಾಜ್, ಆಮಿರ್ ಖಾನ್ ನಟಿಸಿದ್ದಾರೆ. ಇದು ಚಿತ್ರದ ಹೈಲೈಟ್. ಸದ್ಯ ರಿಲೀಸ್ ಆಗಿರೋ ಟ್ರೇಲರ್ ಹಲ್​ಚಲ್ ಎಬ್ಬಿಸಿದೆ. ಸಿನಿಮಾ ರಿಲೀಸ್​ಗೆ ಒಂದು ವಾರ ಇರುವಾಗ ಸಿನಿಮಾ ಅಬ್ಬರಿಸಲು ರೆಡಿ ಆಗುತ್ತಿದೆ.

ಇದನ್ನೂ ಓದಿ
Image
ತೆಲುಗು ರಿಲೀಸ್ ಬೆನ್ನಲ್ಲೇ ಮತ್ತೆ ಹೆಚ್ಚಿತು ‘ಸು ಫ್ರಮ್ ಸೋ’ ಕಲೆಕ್ಷನ್
Image
ಮಾಲಿವುಡ್​ನ ಶ್ರೀಮಂತ ನಟ ಫಹಾದ್ ಫಾಸಿಲ್ ಆಸ್ತಿ ಎಷ್ಟು?
Image
‘ಸು ಫ್ರಮ್ ಸೋ’ ಚಿತ್ರಕ್ಕೆ ಎರಡು ವಾರ; ವಿಶ್ವ ಬಾಕ್ಸ್ ಆಫೀಸ್​ ಲೆಕ್ಕ
Image
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

‘10 ವರ್ಷಗಳಲ್ಲಿ ರಜನಿಕಾಂತ್ ಅವರು ಅದ್ಭುತ ಪರ್ಫಾರ್ಮೆನ್ಸ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನು ಇಡೀ ಚಿತ್ರಕ್ಕೆ ನಾಗಾರ್ಜುನ ಅವರು ಬ್ಯಾಕ್​ಬೋನ್ ಎಂದು ಅವರ ಅಭಿಮಾನಿಗಳು ಕರೆದಿದ್ದಾರೆ. ಆಮಿರ್ ಖಾನ್ ಅವರ ವಿಶೇಷ ಅತಿಥಿ ಪಾತ್ರ ಚಿತ್ರದ ಕಳೆ ಹೆಚ್ಚಿಸಿದೆ ಎಂದು ಫ್ಯಾನ್ಸ್ ಹೇಳಿಕೊಂಡಿದ್ದಾರೆ.

ಕನ್ನಡದ ಉಪೇಂದ್ರ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎನ್ನಲಾಗಿದೆ. ಇನ್ನು, ಶ್ರುತಿ ಹಾಸನ್ ಅವರು ಈ ಸಿನಿಮಾದಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸಿದ್ದಾರೆ ಎಂದು ಸಿನಿಮಾ ನೋಡಿದ ಫ್ಯಾನ್ಸ್ ಬರೆದುಕೊಂಡಿದ್ದಾರೆ.

ಕೂಲಿ ವಿಮರ್ಶೆ

‘ಕೂಲಿ’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಚೆನ್ನೈನಲ್ಲಿ ಓಪನ್ ಆಗಿದೆ. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾಗೆ ಒಳ್ಳೆಯ ರೀತಿಯಲ್ಲಿ ಬುಕಿಂಗ್ ಆಗುತ್ತಿದ್ದು, ಫ್ಯಾನ್ಸ್ ಖುಷಿ ಹೆಚ್ಚಿಸಿದೆ. ಬೆಂಗಳೂರಿನಲ್ಲಿ ಸೋಮವಾರದ ಬಳಿಕ ‘ಕೂಲಿ’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ‘ವಾರ್ 2’ vs ‘ಕೂಲಿ’: ಯಾವ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಹೆಚ್ಚಿದೆ?

ತಮಿಳು ನಾಡಿನಲ್ಲಿ ಮಾರ್ನಿಂಗ್ ಶೋಗಳನ್ನು ಕ್ಯಾನ್ಸಲ್ ಮಾಡಲಾಗಿದೆ. 2023ರಲ್ಲಿ ಫಸ್ಟ್​ ಡೇ ಫಸ್ಟ್ ಶೋ ನೋಡಲು ಬಂದ ಅಭಿಮಾನಿ ಕಾಲ್ತುಳಿತದಲ್ಲಿ ಅಸುನೀಗಿದ್ದರು. ಇದಾದ ಬಳಿಕ ಫ್ಯಾನ್ ಶೋ ಕ್ಯಾನ್ಸಲ್ ಮಾಡಲಾಗಿದೆ. 9 ಗಂಟೆ ಬಳಿಕವೇ ಶೋಗಳು ಪ್ರದರ್ಶನ ಕಾಣಲಿವೆ. ಈ ಸಿನಿಮಾ ಎ ಸರ್ಟಿಫಿಕೇಟ್ ಹೊಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:38 am, Sat, 9 August 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್