AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಬಿ. ಶೆಟ್ಟಿ ಖಡಕ್ ಉತ್ತರ

ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಮತ್ತು ರಾಜ್ ಬಿ. ಶೆಟ್ಟಿ ಅವರ ಸಹಯೋಗದಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಶೈಲಿಯ ಸಿನಿಮಾಗಳು ಬಂದಿವೆ. ‘ಕಾಂತಾರ’,‘ಕಿರಿಕ್ ಪಾರ್ಟಿ’ ಮುಂತಾದ ಯಶಸ್ವಿ ಚಿತ್ರಗಳನ್ನು ಈ ತಂಡ ನೀಡಿದೆ. "ಶೆಟ್ಟಿ ಗ್ಯಾಂಗ್" ಎಂಬ ಹೆಸರಿನಿಂದ ಕರೆಯಲ್ಪಡುವ ಈ ಗುಂಪಿನ ಬಗ್ಗೆ ರಾಜ್ ಬಿ. ಶೆಟ್ಟಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಬಿ. ಶೆಟ್ಟಿ ಖಡಕ್ ಉತ್ತರ
ರಿಷಬ್-ರಾಜ್-ರಕ್ಷಿತ್
ರಾಜೇಶ್ ದುಗ್ಗುಮನೆ
|

Updated on:Aug 05, 2025 | 8:22 AM

Share

ಕನ್ನಡದಲ್ಲಿ ರಿಷಬ್ ಶೆಟ್ಟ, ರಾಜ್ ಬಿ. ಶೆಟ್ಟಿ (Raj B Shetty), ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಬಂದಮೇಲೆ ಚಿತ್ರರಂಗಕ್ಕೆ ಹೊಸ ಹೊಸ ರೀತಿಯ ಸಿನಿಮಾಗಳು ಸಿಕ್ಕಿವೆ. ‘ಒಂದು ಮೊಟ್ಟೆಯ ಕಥೆ’, ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ’, ‘ಕಾಂತಾರ’, ‘ಸು ಫ್ರಮ್ ಸೋ’ ಹೀಗೆ ಪಟ್ಟಿ ಬೆಳೆಯುತ್ತೇ ಹೋಗುತ್ತದೆ. ಅನೇಕರು ಈ ಗ್ಯಾಂಗ್​ನ ಮಾಫಿಯಾ ಎಂದು ಕರೆದಿದ್ದಾರಂತೆ. ಈ ಬಗ್ಗೆ ರಾಜ್ ಬಿ. ಶೆಟ್ಟಿಗೆ ಅಸಮಾಧಾನ ಇದೆ. ಅನುಪಮಾ ಚೋಪ್ರಾ ಅವರ ‘ಹಾಲಿವುಡ್​ ರಿಪೋರ್ಟರ್ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ರಿಷಬ್, ರಕ್ಷಿತ್, ರಾಜ್ ಹಾಗೂ ಇತರರು ಒಳ್ಳೆಯ ಸಿನಿಮಾ ನೀಡುವ ಪ್ರಯತ್ನದಲ್ಲಿ ಇದ್ದಾರೆ. ಕೆಲವೊಮ್ಮೆ ಇವರು ಸೋತಿದ್ದಾರೆ, ಇನ್ನೂ ಕೆಲವೊಮ್ಮೆ ದೊಡ್ಡ ಗೆಲುವು ಕಂಡಿದ್ದಾರೆ. ‘ಕಿರಿಕ್ ಪಾರ್ಟಿ’, ‘ಕಾಂತಾರ’, ‘ಬೆಲ್ ಬಾಟಂ’, ‘ಸು ಫ್ರಮ್ ಸೋ’, ‘ಟೋಬಿ’ ಸಿನಿಮಾಗಳು ಯಶಸ್ಸು ಕಂಡಿವೆ. ವಿಮರ್ಶೆಯಲ್ಲಿ ಮೆಚ್ಚುಗೆ ಪಡೆದಿವೆ. ‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ರಾಜ್ ಬಿ ಶೆಟ್ಟಿ ವಿವಿಧ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಆಗ ಅವರು ಶೆಟ್ಟಿ ಗ್ಯಾಂಗ್ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ
Image
ತಗ್ಗೋ ಮಾತೇ ಇಲ್ಲ; 50 ಕೋಟಿ ರೂ. ಕ್ಲಬ್ ಸೇರಲಿದೆ ‘ಸು ಫ್ರಮ್ ಸೋ’
Image
ಕೆಟ್ಟದಾಗಿ ಕಮೆಂಟ್ ಮಾಡಿದವರ ವಿರುದ್ಧ ರಮ್ಯಾ ರೀತಿಯೇ ಕೇಸ್ ಹಾಕಿದ ನಟಿ
Image
ನಟಿ ಕಾಜೋಲ್ ಬಳಿ ಆಸ್ತಿ ಇಷ್ಟೊಂದಾ? ಅಜಯ್ ದಂಪತಿ ಪೈಕಿ ಯಾರು ಶ್ರೀಮಂತರು?
Image
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?

ಶೆಟ್ಟಿ ಗ್ಯಾಂಗ್ ಬಗ್ಗೆ ರಾಜ್ ಬಿ. ಶೆಟ್ಟಿ ಆಡಿದ ಮಾತು

‘ಕರ್ನಾಟಕದಲ್ಲಿ ಶೆಟ್ಟಿ ಮಾಫಿಯಾ, ಶೆಟ್ಟಿ ಗ್ಯಾಂಗ್ ಎನ್ನುತ್ತಾರೆ. ನೀವು ಕೂಡ ಗ್ಯಾಂಗ್ ಮಾಡಿ ಬ್ರದರ್. ನಿಮಗೆ ಒಂಟಿಯಾಗಿ ಓಡಾಡಿ ಎಂದು ಹೇಳಿದವರು ಯಾರು? ನೀವು ಕೂಡ ಗ್ಯಾಂಗ್ ಮಾಡಿ. ನಿಮಗೆ ಎಲ್ಲಾ ಗ್ಲೋರಿ, ಜನಪ್ರಿಯತೆ ಬೇಕು. ನೀವು ಬೇರೆಯವರ ಜೊತೆ ಕೊಲ್ಯಾಬರೇಟ್ ಆಗುತ್ತಿಲ್ಲ ಎಂಬುದು ನಮ್ಮ ಸಮಸ್ಯೆ ಅಲ್ಲ. ನಿಮ್ಮದೇ ಗ್ಯಾಂಗ್ ಕಟ್ಟಿಕೊಳ್ಳಿ’ ಎಂದು ರಾಜ್ ಬಿ. ಶೆಟ್ಟಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ರಾಜ್ vs ರಾಜ್; ‘ಸು ಫ್ರಮ್ ಸೋ’ ಅಬ್ಬರದ ಮಧ್ಯೆಯೇ ರಿಲೀಸ್ ಆಗಲಿದೆ ರಾಜ್ ಬಿ. ಶೆಟ್ಟಿ ಹೊಸ ಸಿನಿಮಾ

ರಾಜ್ ಬಿ. ಶೆಟ್ಟಿ, ರಿಷಬ್, ರಕ್ಷಿತ್ ಒಬ್ಬರ ಸಿನಿಮಾಗೆ ಮತ್ತೊಬ್ಬರು ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ‘ಕಾಂತಾರ’ ಸಿನಿಮಾನ ರಿಷಬ್ ಮಾಡಿದಾಗ ಅದನ್ನು ನೋಡಿ ರಕ್ಷಿತ್ ತುಂಬಾನೇ ಖುಷಿ ಆಗಿದ್ದರು. ಅವರು ಹೋಗಿ ರಿಷಬ್​​ನ ತಬ್ಬಿಕೊಂಡಿದ್ದರು. ಈ ರೀತಿಯ ಅನೇಕ ಘಟನೆಗಳು ನಡೆದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:17 am, Tue, 5 August 25

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು