AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋನ್ ರಿಪೇರಿಯಿಂದ ಬಯಲಾಗಿತ್ತು ಪಾಕ್ ಆಟಗಾರರ ಕಳ್ಳಾಟ!

2010 spot-fixing scandal: 2010 ರಲ್ಲಿ ಸ್ಪಾಟ್ ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದ ಪಾಕಿಸ್ತಾನ್ ಆಟಗಾರರಾದ ಮೊಹಮ್ಮದ್ ಅಮಿರ್, ಸಲ್ಮಾನ್ ಬಟ್ ಹಾಗೂ ಮೊಹಮ್ಮದ್ ಆಸಿಫ್ ನಿಷೇಧಕ್ಕೆ ಒಳಗಾಗಿದ್ದರು. ಈ ನಿಷೇಧದ ಬಳಿಕ 2016 ರಲ್ಲಿ ಮೊಹಮ್ಮದ್ ಅಮಿರ್ ಕಂಬ್ಯಾಕ್ ಮಾಡಿದರೂ ಇನ್ನಿಬ್ಬರ ಕೆರಿಯರ್ ಅಂತ್ಯವಾಗಿತ್ತು.

ಫೋನ್ ರಿಪೇರಿಯಿಂದ ಬಯಲಾಗಿತ್ತು ಪಾಕ್ ಆಟಗಾರರ ಕಳ್ಳಾಟ!
Asif - Amir - Salman
ಝಾಹಿರ್ ಯೂಸುಫ್
|

Updated on: Mar 12, 2026 | 11:59 AM

Share

2010 ರಲ್ಲಿ ಪಾಕಿಸ್ತಾನ್ ಆಟಗಾರರು ಆಡಿದ ಕಳ್ಳಾಟವು ಹೊಸ ಸಂಚಲನ ಸೃಷ್ಟಿಸಿತ್ತು. ಈ ಸಂಚಲನಕ್ಕೆ ಕಾರಣವಾಗಿದ್ದು ಅಂದಿನ ಪಾಕ್ ತಂಡದ ನಾಯಕ ಸಲ್ಮಾನ್ ಬಟ್, ಮೊಹಮ್ಮದ್ ಅಮಿರ್ ಹಾಗೂ ಮೊಹಮ್ಮದ್ ಆಸಿಫ್. ಈ ಮೂವರು ಸೇರಿ ಲಾರ್ಡ್ಸ್ ಮೈದಾನದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದರು. ಈ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ಎಂಬ ಸ್ಫೋಟಕ ಮಾಹಿತಿಯನ್ನು ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಝಾಕ್ ಬಹಿರಂಗ ಪಡಿಸಿದ್ದಾರೆ.

ಆಗಸ್ಟ್ 26, 2010 ರಂದು ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಲು ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಬಟ್ ನಿರ್ಧರಿಸಿದ್ದರು. ಇದಕ್ಕಾಗಿ ಬುಕ್ಕಿ ಮಜರ್ ಮಜೀದ್ ಭರ್ಜರಿ ಆಫರ್ ನೀಡಿದ್ದರು.

ಇದಕ್ಕೆ ಒಪ್ಪಿದ್ದ ಸಲ್ಮಾನ್ ಬಟ್ ತನ್ನ ಸಹ ಆಟಗಾರರಾದ ಮೊಹಮ್ಮದ್ ಆಸಿಫ್ ಹಾಗೂ ಮೊಹಮ್ಮದ್ ಅಮಿರ್ ಅವರ ಮನವೊಲಿಸಿದ್ದರು. ಅದರಂತೆ ಪಂದ್ಯದ ನಡುವೆ ಸ್ಪಾಟ್ ಫಿಕ್ಸಿಂಗ್ ನಡೆಸಲಾಯಿತು. ಇದಾಗ್ಯೂ ಪಂದ್ಯದಲ್ಲಿ ಫಿಕ್ಸಿಂಗ್ ನಡೆಯುತ್ತಿದೆ ಎಂಬ ವಿಚಾರ ಯಾರಿಗೂ ಗೊತ್ತಾಗಿರಲಿಲ್ಲ.

ಇದರ ನಡುವೆ ಬುಕ್ಕಿ ಮಜರ್ ಮಜೀದ್ ಅವರ ಫೋನ್​ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಅವರು ಅದನ್ನು ಲಂಡನ್​ನಲ್ಲಿರುವ ಮೊಬೈಲ್ ಶಾಪ್​ನಲ್ಲಿ ರಿಪೇರಿಗೆ ನೀಡಿದ್ದಾರೆ. ಇದೇ ಮೊಬೈಲ್ ಶಾಪ್​ನಲ್ಲಿ ಪಾಕಿಸ್ತಾನ್ ತಂಡದ ಆಲ್​ರೌಂಡರ್ ಅಬ್ದುಲ್ ರಝಾಕ್ ಅವರ ಸ್ನೇಹಿತರೊಬ್ಬರು ಕೆಲಸ ಮಾಡುತ್ತಿದ್ದರು.

ಇತ್ತ ಮೊಬೈಲ್ ರಿಪೇರಿ ವೇಳೆ ಮಜರ್ ಮಜೀದ್ ಅವರ ಫೋನ್​ಗೆ ಮೆಸೇಜ್​ಗಳು ಬಂದಿವೆ. ಈ ಮೆಸೇಜ್​ಗಳು ಪಾಕಿಸ್ತಾನ್ ಕ್ರಿಕೆಟ್​ಗೆ ಸಂಬಂಧಿಸಿದ್ದಾಗಿತ್ತು. ಅದರಲ್ಲಿ ಫಿಕ್ಸಿಂಗ್ ಹೇಗೆ ಮಾಡಬೇಕೆಂಬುದನ್ನು ತಿಳಿಸಲಾಗಿತ್ತು. ಈ ವಿಚಾರವನ್ನು ಮೊಬೈಲ್ ಶಾಪ್​ನಲ್ಲಿದ್ದ ಸ್ನೇಹಿತ ಅಬ್ದುಲ್ ರಝಾಕ್​ಗೆ ತಿಳಿಸಿದ್ದಾರೆ.

ತಕ್ಷಣವೇ ಅಬ್ದುಲ್ ರಝಾಕ್ ಈ ವಿಷಯವನ್ನು ತಂಡದಲ್ಲಿದ್ದ ಹಿರಿಯ ಆಟಗಾರ ಶಾಹಿದ್ ಅಫ್ರಿದಿ ಗಮನಕ್ಕೆ ತಂದಿದ್ದಾರೆ. ಕೂಡಲೇ ಅಫ್ರಿದಿ, ಮೊಹಮ್ಮದ್ ಅಮಿರ್​ನನ್ನು ಕರೆದು ಈ ಕುರಿತು ವಿಚಾರರಿಸಿದ್ದಾರೆ.

ಎಷ್ಟೇ ಕೇಳಿದರೂ ಮೊಹಮ್ಮದ್ ಅಮಿರ್ ಬಾಯಿ ಬಿಡುತ್ತಿರಲಿಲ್ಲ. ಇದರಿಂದ ಕೋಪಗೊಂಡ ಶಾಹಿದ್ ಅಫ್ರಿದಿ ಮೊಹಮ್ಮದ್ ಅಮಿರ್​ಗೆ ಕೆನ್ನೆಗೆ ಬಾರಿಸಿದ್ದಾರೆ. ಏಟು ಬೀಳುತ್ತಲೇ ಅಮಿರ್ ಅಳುತ್ತಾ ಸತ್ಯ ಒಪ್ಪಿಕೊಂಡಿದ್ದರು ಎಂಬ ವಿಚಾರವನ್ನು ಅಬ್ದುಲ್ ರಝಾಕ್ ಬಹಿರಂಗಪಡಿಸಿದ್ದಾರೆ.

ಅಂದರೆ ಮ್ಯಾಚ್ ಫಿಕ್ಸಿಂಗ್ ಬುಕ್ಕಿ ಮಜರ್ ಮಜೀದ್ ಅವರ ಮೊಬೈಲ್ ಫೋನ್ ಅಬ್ದುಲ್ ರಝಾಕ್ ಅವರ ಗೆಳೆಯನಿಗೆ ರಿಪೇರಿಗೆ ನೀಡಿದ್ದರಿಂದ ಪಾಕ್ ಆಟಗಾರರ ಈ ಕಳ್ಳಾಟ ಬಹಿರಂಗವಾಗಿತ್ತು.

ಇನ್ನು ಈ ಹಗರಣದ ಹಿಂದಿನ ಮಾಸ್ಟರ್ ಮೈಂಡ್ ನಾಯಕ ಸಲ್ಮಾನ್ ಬಟ್ ಎಂದು ರಜಾಕ್ ಆರೋಪಿಸಿದ್ದಾರೆ. ಸಲ್ಮಾನ್ ಬಟ್ ಸೂಚನೆಯ ಮೇರೆಗೆ ಅಮಿರ್ ಮತ್ತು ಮೊಹಮ್ಮದ್ ಆಸಿಫ್ ನೋ-ಬಾಲ್ ಎಸೆದಿದ್ದರು ಎಂಬುದು ಸಾಬೀತಾಗಿತ್ತು.

ಇದನ್ನೂ ಓದಿ: ವೈಯುಕ್ತಿಕ ದಾಖಲೆಗಾಗಿ ಆಡುವುದನ್ನು ನಿಲ್ಲಿಸಿ… ಗಂಭೀರ್ ಖಡಕ್ ಸೂಚನೆ

ಈ ಘಟನೆಯ ನಂತರ ಮೊಹಮ್ಮದ್ ಅಮಿರ್​ಗೆ 5 ವರ್ಷಗಳ ನಿಷೇಧ ಹೇರಲಾಗಿತ್ತು. ಇನ್ನು ಸಲ್ಮಾನ್ ಬಟ್​ಗೆ 10 ವರ್ಷ ಹಾಗೂ ಮೊಹಮ್ಮದ್ ಆಸಿಫ್​ಗೆ 7 ವರ್ಷಯ ಬ್ಯಾನ್ ಹೇರಲಾಗಿತ್ತು. ಇದಾದ ಬಳಿಕ 2016 ರಲ್ಲಿ ಮೊಹಮ್ಮದ್ ಅಮಿರ್ ಕಂಬ್ಯಾಕ್ ಮಾಡಿದರೂ, ಸಲ್ಮಾನ್ ಬಟ್ ಹಾಗೂ ಮೊಹಮ್ಮದ್ ಆಸಿಫ್ ಅವರ ಕ್ರಿಕೆಟ್ ಕೆರಿಯರ್ ಈ ಬ್ಯಾನ್​ನೊಂದಿಗೆ ಅಂತ್ಯವಾಗಿತ್ತು.

Follow Us
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು