AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಷಬ್, ರಕ್ಷಿತ್​ನ ಹಾಡಿ ಹೊಗಳಿದ ರಾಜ್ ಬಿ. ಶೆಟ್ಟಿ; ಗೆಳೆತನ ಬೆಳೆದಿದ್ದು ಹೀಗೆ

ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಅವರ ನಡುವೆ ಆಳವಾದ ಗೆಳೆತನ ಇದೆ. ರಾಜ್ ಬಿ ಶೆಟ್ಟಿ ಅವರ ‘ಒಂದು ಮೊಟ್ಟೆಯ ಕಥೆ’ ಚಿತ್ರದ ಮೂಲಕ ಆರಂಭವಾದ ಈ ಬಾಂಧವ್ಯ, ಈಗಲೂ ಮುಂದುವರಿದಿದೆ. ಇವರ ಯಶಸ್ಸು ಮತ್ತು ಸ್ನೇಹದ ಬಗ್ಗೆ ರಾಜ್ ಮಾತನಾಡಿದ್ದಾರೆ.

ರಿಷಬ್, ರಕ್ಷಿತ್​ನ ಹಾಡಿ ಹೊಗಳಿದ ರಾಜ್ ಬಿ. ಶೆಟ್ಟಿ; ಗೆಳೆತನ ಬೆಳೆದಿದ್ದು ಹೀಗೆ
ರಿಷಬ್-ರಾಜ್-ರಕ್ಷಿತ್
ರಾಜೇಶ್ ದುಗ್ಗುಮನೆ
|

Updated on:Aug 05, 2025 | 11:03 AM

Share

ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ. ಶೆಟ್ಟಿ (Raj B Shetty) ಮಧ್ಯೆ ಒಳ್ಳೆಯ ಗೆಳೆತನ ಇದೆ. ಇವರು ಒಳ್ಳೆಯ ಫ್ರೆಂಡ್ಸ್. ಇವರ ಬಾಂಧವ್ಯ ಎಂದಿಗೂ ಕಡಿಮೆ ಆಗುವಂಥದ್ದಲ್ಲ. ರಾಜ್ ಬಿ ಶೆಟ್ಟಿ ಅವರು ಈಗ ರಿಷಬ್ ಹಾಗೂ ರಕ್ಷಿತ್ ಗೆಳೆತನವನ್ನು ನೆನಪಿಸಿಕೊಂಡಿದ್ದಾರೆ. ಇವರ ಮಧ್ಯೆ ಬಾಂಡಿಂಗ್ ಬೆಳೆಯಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ. ‘ದಿ ಹಾಲಿವುಡ್ ರಿಪೋರ್ಟರ್​ಗೆ’ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ರಾಜ್ ಬಿ. ಶೆಟ್ಟಿ ‘ಒಂದು ಮೊಟ್ಟೆಯ ಕಥೆ’ ಹೆಸರಿನ ಸಿನಿಮಾ ಮಾಡಿದರು. ಈ ಚಿತ್ರ ಮೆಚ್ಚುಗೆ ಪಡೆಯಿತು. ಸಿನಿಮಾದ ಗಂಧ ಗಾಳಿ ಗೊತ್ತಿಲ್ಲದೆ ರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಮೊದಲ ಪ್ರಯತ್ನದಲ್ಲೇ ಅವರು ಯಶಸ್ಸು ಕಂಡರು. ಈ ವೇಳೆ ರಕ್ಷಿತ್ ಹಾಗೂ ರಾಜ್. ಬಿ ಶೆಟ್ಟಿ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರಂತೆ. ಹೀಗೆ ಇವರ ಗೆಳೆತನ ಆರಂಭ ಆಯಿತು.

ರಾಜ್ ಬಿ. ಶೆಟ್ಟಿ ಸಂದರ್ಶನ

ಇದನ್ನೂ ಓದಿ
Image
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ
Image
ತಗ್ಗೋ ಮಾತೇ ಇಲ್ಲ; 50 ಕೋಟಿ ರೂ. ಕ್ಲಬ್ ಸೇರಲಿದೆ ‘ಸು ಫ್ರಮ್ ಸೋ’
Image
ಕೆಟ್ಟದಾಗಿ ಕಮೆಂಟ್ ಮಾಡಿದವರ ವಿರುದ್ಧ ರಮ್ಯಾ ರೀತಿಯೇ ಕೇಸ್ ಹಾಕಿದ ನಟಿ
Image
ನಟಿ ಕಾಜೋಲ್ ಬಳಿ ಆಸ್ತಿ ಇಷ್ಟೊಂದಾ? ಅಜಯ್ ದಂಪತಿ ಪೈಕಿ ಯಾರು ಶ್ರೀಮಂತರು?

‘ಸಿನಿಮಾದಿಂದ ಗೆಳೆತನ ಶುರುವಾಯಿತು. ನಾನು ಒಂದು ಮೊಟ್ಟೆಯ ಕಥೆ ಸಿನಿಮಾ ಮಾಡಿದಾಗ ಅವರು ಚಿತ್ರವನ್ನು ನೋಡಿ ನನಗೆ ಕರೆ ಮಾಡಿದರು. ಹೀಗೆ ಗೆಳೆತನ ಆರಂಭ ಆಗಿದ್ದು. ನಾನು ಮಂಗಳೂರಿನವನು. ಸಿನಿಮಾ ರಂಗಕ್ಕೆ ನಾನು ಎಕ್ಸ್​ಪೋಸ್ ಆಗಿರಲಿಲ್ಲ. ರಿಷಬ್ ಹಾಗೂ ರಕ್ಷಿತ್ ಹಲವು ವರ್ಷಗಳಿಂದ ಸಿನಿಮಾದಲ್ಲಿ ಆ್ಯಕ್ಟೀವ್ ಆಗಿದ್ದರು. ನಿಮ್ಮಲ್ಲಿ ಯಾರಿಗಾದರೂ ನಾನು ಬರೆಯಬಹುದೇ ಎಂದು ಕೇಳಿದೆ. ಆಗ ನಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬರೆದೆ. ಚಾರ್ಲಿಗೆ ಬರೆದೆ. ಕಾಂತಾರದ ಒಂದು ಭಾಗ ಬರೆದೆ’ ಎಂದರು ರಾಜ್.

ಇದನ್ನೂ ಓದಿ: ‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಬಿ. ಶೆಟ್ಟಿ ಖಡಕ್ ಉತ್ತರ

‘ನಾನು ಗರುಡ ಗಮನ ವೃಷಭ ವಾಹನ ಮಾಡಿದೆ. ನಾನು ರಕ್ಷಿತ್​ಗೆ ತೋರಿಸಿದೆ. ಅವನೇ ಕರೆ ಮಾಡಿ ನಾನು ಪ್ರೆಸೆಂಟ್ ಮಾಡ್ತೀನಿ ಎಂದ. ನಮ್ಮ ಗೆಳೆತನ ಆಳವಾಗಿದೆ. ಎಲ್ಲರೂ ಪ್ರಾಮಾಣಿಕವಾಗಿದ್ದಾರೆ. ಇಲ್ಲಿ ಸ್ಪರ್ಧೆ ಇಲ್ಲ. ರಕ್ಷಿತ್ ಈಗಲೂ ಮೆಸೇಜ್ ಮಾಡುತ್ತಾನೆ. ನಮ್ಮ ಮಧ್ಯೆ ಇರುವ ಫ್ರೆಂಡ್​ಶಿಪ್​ನಲ್ಲಿ ಕುತಂತ್ರ ಇಲ್ಲ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:47 am, Tue, 5 August 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ