‘ವಾರ್ 2’ vs ‘ಕೂಲಿ’: ಯಾವ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಹೆಚ್ಚಿದೆ?
War 2 vs Coolie movie: ಆಗಸ್ಟ್ 14 ರಂದು ಎರಡು ದೊಡ್ಡ ಬಜೆಟ್ನ ಸ್ಟಾರ್ ನಟರುಗಳು ಸಿನಿಮಾ ಬಿಡುಗಡೆ ಆಗುತ್ತಿವೆ. ಅದುವೇ ‘ವಾರ್ 2’ ಮತ್ತು ‘ಕೂಲಿ’. ಎರಡೂ ಸಿನಿಮಾಗಳ ಅಡ್ವಾನ್ಸ್ ಬುಕಿಂಗ್ ಅಮೆರಿಕದಲ್ಲಿ ಓಪನ್ ಆಗಿದ್ದು, ಪ್ರೇಕ್ಷಕರು ಮುಗಿಬಿದ್ದು ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಎರಡೂ ಸಿನಿಮಾಗಳಲ್ಲಿ ಯಾವ ಸಿನಿಮಾದ ಟಿಕೆಟ್ ಹೆಚ್ಚು ಮಾರಾಟ ಆಗುತ್ತಿದೆ.

ಆಗಸ್ಟ್ ತಿಂಗಳಲ್ಲಿ ದೊಡ್ಡ ಬಜೆಟ್ನ, ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಅದರಲ್ಲೂ ಆಗಸ್ಟ್ 14ಕ್ಕೆ ಎರಡು ದೊಡ್ಡ ಸಿನಿಮಾಗಳು ಪರಸ್ಪರ ಎದುರಾಗುತ್ತಿವೆ. ವಿಶೇಷವೆಂದರೆ ಈ ಎರಡೂ ಸಿನಿಮಾಗಳು ಬಹುತಾರಾಗಣದ ಸಿನಿಮಾಗಳು, ಎರಡೂ ಸಿನಿಮಾಗಳು ಬಹು ಭಾಷೆಯಲ್ಲಿ ಬಿಡುಗಡೆ ಆಗುತ್ತಿವೆ. ಎರಡೂ ಸಿನಿಮಾಗಳೂ ಪಕ್ಕಾ ಆಕ್ಷನ್ ಸಿನಿಮಾಗಳು. ಎರಡೂ ಸಿನಿಮಾಗಳ ಹಿಂದೆಯೂ ದೊಡ್ಡ ನಿರ್ಮಾಣ ಸಂಸ್ಥೆಯಿದ್ದು, ಕೋಟ್ಯಂತರ ರೂಪಾಯಿ ಬಂಡವಾಳ ತೊಡಗಿಸಲಾಗಿದೆ. ‘ವಾರ್ 2’ ಮತ್ತು ‘ಕೂಲಿ’ ಸಿನಿಮಾಗಳು ಪರಸ್ಪರ ಎದುರಾಗುತ್ತಿದ್ದು, ಎರಡರಲ್ಲಿ ಆರಂಭಿಕ ಮುನ್ನಡೆ ಯಾವ ಸಿನಿಮಾಕ್ಕ ದೊರೆತಿದೆ?
ಹೃತಿಕ್ ರೋಷನ್ ಮತ್ತು ಜೂ ಎನ್ಟಿಆರ್ ಒಟ್ಟಿಗೆ ನಟಿಸಿರುವ ‘ವಾರ್ 2’ ಹಾಗೂ ರಜನೀಕಾಂತ್, ನಾಗಾರ್ಜುನ, ಆಮಿರ್ ಖಾನ್, ಉಪೇಂದ್ರ ನಟಿಸಿರುವ ‘ಕೂಲಿ’ ಸಿನಿಮಾಗಳು ಆಗಸ್ಟ್ 14 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಹಲವೆಡೆ ಓಪನ್ ಆಗಿದೆ. ಸಿನಿಮಾ ಪ್ರೇಮಿಗಳು ಮುಗಿಬಿದ್ದು ಟಿಕೆಟ್ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಅಷ್ಟಕ್ಕೂ ಈ ಎರಡು ಸಿನಿಮಾಗಳಲ್ಲಿ ಈ ವರೆಗೆ ಹೆಚ್ಚಿನ ಅಡ್ವಾನ್ಸ್ ಬುಕಿಂಗ್ ಯಾವ ಸಿನಿಮಾಕ್ಕೆ ಆಗಿದೆ?
ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾದ ಅಡ್ವಾನ್ಸ್ ಬುಕಿಂಗ್, ‘ವಾರ್ 2’ಗಿಂತಲೂ ಹೆಚ್ಚಾಗಿದೆ. ಅಮೆರಿಕದಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಈ ವರೆಗೆ ‘ವಾರ್ 2’ ಸಿನಿಮಾದ 10500 ಕ್ಕೂ ತುಸು ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ. ಇದರಲ್ಲಿ ಸಿನಿಮಾದ ತೆಲುಗು ಆವೃತ್ತಿಯ ಟಿಕೆಟ್ಗಳೇ ಹೆಚ್ಚಾಗಿ ಮಾರಾಟವಾಗಿವೆ. ವಿಶೇಷವಾಗಿ ತೆಲುಗು ಭಾಷಿಕರು ಹೆಚ್ಚಾಗಿರುವ ಉತ್ತರ ಅಮೆರಿಕ ಭಾಗದಲ್ಲಿ ‘ವಾರ್ 2’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಜೋರಾಗಿದೆ. ಸಿನಿಮಾದ ಬಿಡುಗಡೆಗೆ ಇನ್ನೂ ಏಳು ದಿನ ಇರುವಂತೆ ಅಡ್ವಾನ್ಸ್ ಬುಕಿಂಗ್ ಮೂಲಕ 2.33 ಕೋಟಿ ಹಣವನ್ನು ಈ ಸಿನಿಮಾ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ:‘ವಾರ್ 2’ ಚಿತ್ರಕ್ಕಿಂತಲೂ ‘ಕೂಲಿ’ ಸಿನಿಮಾದ್ದೇ ಮೇಲುಗೈ; ಇದು ರಜನಿಕಾಂತ್ ಹವಾ
ಇನ್ನು ‘ಕೂಲಿ’ ಸಿನಿಮಾ, ‘ವಾರ್ 2’ಗಿಂತಲೂ ಬಹಳ ಮುಂದಿದೆ. ಈ ಸಿನಿಮಾ 51200 ಕ್ಕೂ ಹೆಚ್ಚು ಟಿಕೆಟ್ಗಳು ಅಮೆರಿಕದಲ್ಲಿ ಈಗಾಗಲೇ ಮಾರಾಟವಾಗಿವೆ. ‘ಕೂಲಿ’ ಸಿನಿಮಾದ ಟಿಕೆಟ್ಗಳು ಸಹ ಉತ್ತರ ಅಮೆರಿಕ ಭಾಗದಲ್ಲಿಯೇ ಹೆಚ್ಚಾಗಿ ಬುಕ್ ಆಗಿವೆ. ಅಮೆರಿಕ ಮಾತ್ರವಲ್ಲದೆ ಮಲೇಷ್ಯಾ, ಸಿಂಗಪುರ್ನಲ್ಲಿಯೂ ಸಹ ತಮಿಳು ಸಿನಿಮಾಗಳಿಗೆ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದು, ಅಲ್ಲಿಯೂ ಸಹ ಈ ಸಿನಿಮಾ ಬಂಪರ್ ಕಲೆಕ್ಷನ್ ಮಾಡಲಿದೆ. ಪ್ರಸ್ತುತ ಅಮೆರಿಕದಲ್ಲಿ ಮಾತ್ರ ಸಿನಿಮಾ ಬಿಡುಗಡೆಗೆ ಏಳು ದಿನ ಇರುವಂತೆಯೇ 11.66 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ.
ಸಿನಿಮಾ ಬಿಡುಗಡೆಗೆ ಏಳು ದಿನ ಬಾಕಿ ಇರುವಂತೆ ‘ಕೂಲಿ’ ಸಿನಿಮಾ ‘ವಾರ್ 2’ಗಿಂತಲೂ ಬಹಳ ಮುಂದಿದೆ. ‘ವಾರ್ 2’ ಸಿನಿಮಾಕ್ಕಿಂತಲೂ ಐದು ಪಟ್ಟು ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ. ಕಲೆಕ್ಷನ್ ಸಹ ಐದು ಪಟ್ಟು ಹೆಚ್ಚಾಗಿಯೇ ಇದೆ. ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗಲಿದ್ದು, ಆ ದಿನ ಯಾವ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗೆಲ್ಲಲಿದೆ ಎಂಬುದು ತಿಳಿಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




