‘ಲ್ಯಾಂಡ್ಲಾರ್ಡ್’ ಸಿನಿಮಾ ಮೋಷನ್ ಪೋಸ್ಟರ್ ಬಿಡುಗಡೆ; ಅಬ್ಬರಿಸಿದ ವಿಜಯ್ ಕುಮಾರ್
ವರಮಹಾಲಕ್ಷ್ಮಿ ಹಬ್ಬದ ದಿನವೇ ‘ಲ್ಯಾಂಡ್ಲಾರ್ಡ್’ ಸಿನಿಮಾದ ಮೋಷನ್ ಪೋಸ್ಟರ್ ಹೊರಬಂದಿದೆ. ಈ ಪೋಸ್ಟರ್ನಲ್ಲಿ ನಟ ವಿಜಯ್ ಕುಮಾರ್ ಅವರು ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್, ರಿತನ್ಯ ವಿಜಯ್ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ಬಹುತೇಕ ಮುಕ್ತಾಯ ಆಗಿದೆ.

ನಟ ವಿಜಯ್ ಕುಮಾರ್ (ದುನಿಯಾ ವಿಜಯ್) ಸಖತ್ ಬ್ಯುಸಿ ಆಗಿದ್ದಾರೆ. ‘ಸಲಗ’, ‘ಭೀಮ’ ಸಿನಿಮಾಗಳ ಸಕ್ಸಸ್ ಬಳಿಕ ಅವರ ಡಿಮ್ಯಾಂಡ್ ಹೆಚ್ಚಾಗಿದೆ. ಈಗ ಅವರು ‘ಲ್ಯಾಂಡ್ಲಾರ್ಡ್’ (Landlord) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ‘ಸಾರಥಿ ಫಿಲ್ಮ್ಸ್’ ಬ್ಯಾನರ್ ಮೂಲಕ ಹೇಮಂತ್ ಗೌಡ ಕೆ.ಎಸ್. ಮತ್ತು ಕೆ.ವಿ. ಸತ್ಯಪ್ರಕಾಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಜಡೇಶ್ ಕೆ. ಹಂಪಿ ಅವರು ನಿರ್ದೇಶನ ಮಾಡುತ್ತಿರುವ ‘ಲ್ಯಾಂಡ್ಲಾರ್ಡ್’ ಸಿನಿಮಾ ಮೇಲೆ ವಿಜಯ್ ಕುಮಾರ್ (Vijay Kumar) ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ.
ವರಮಹಾಲಕ್ಷ್ಮಿ ಹಬ್ಬದ ದಿನವೇ ವಿಜಯ್ ಕುಮಾರ್ ಫ್ಯಾನ್ಸ್ಗೆ ಮೋಷನ್ ಪೋಸ್ಟರ್ ಉಡುಗೊರೆಯಾಗಿ ಸಿಕ್ಕಿದೆ. ಜೊತೆಗೆ ಒಂದು ಗುಡ್ ನ್ಯೂಸ್ ನೀಡಲಾಗಿದೆ. ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ಪ್ರತಿಷ್ಠಿತ ‘ಆನಂದ್ ಆಡಿಯೋ’ ಕಂಪನಿ ಪಡೆದುಕೊಂಡಿದೆ. ಭಾರಿ ಮೊತ್ತಕ್ಕೆ ಆಡಿಯೋ ಹಕ್ಕುಗಳು ಸೇಲ್ ಆಗಿವೆ. ಮೋಷನ್ ಪೋಸ್ಟರ್ ಮೂಲಕ ಈ ವಿಷಯ ತಿಳಿಸಲಾಗಿದೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡುತ್ತಿದ್ದಾರೆ.
ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯ ಆಗಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿವೆ. ಈ ಹೊತ್ತಲ್ಲಿ ಚಿತ್ರತಂಡದವರು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಅಪ್ಡೇಡ್ ನೀಡಿದ್ದಾರೆ. ಅಂದಹಾಗೆ, ಆನಂದ್ ಆಡಿಯೋ ಪಾಲಿಗೆ ಇದು ಲಕ್ಕಿ ಮತ್ತು ಸೂಪರ್ ಹಿಟ್ ಕಾಂಬಿನೇಷನ್ ಎಂಬುದು ವಿಶೇಷ.
View this post on Instagram
ಈ ಹಿಂದೆ ವಿಜಯ್ ಕುಮಾರ್ ನಟನೆಯ ಸಿನಿಮಾಗಳು ಆನಂದ್ ಆಡಿಯೋ ಕಂಪನಿಗೆ ಒಳ್ಳೆಯ ಬಿಸ್ನೆಸ್ ಮಾಡಿಕೊಟ್ಟಿವೆ. ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಮತ್ತು ನಿರ್ದೇಶ ಜಡೇಶ್ ಕೆ. ಹಂಪಿ ಅವರ ಕಾಂಬಿನೇಶನ್ಲಲ್ಲಿ ಬಂದ ಸಿನಿಮಾಗಳು ಕೂಡ ಆನಂದ್ ಆಡಿಯೋನಲ್ಲಿ ಸಕ್ಸಸ್ ಕಂಡಿವೆ. ಈಗ ಅಜನೀಶ್ ಲೋಕನಾಥ್, ಜಡೇಶ್, ವಿಜಯ್ ಕುಮಾರ್ ಅವರ ಕಾಂಬಿನೇಷನ್ನಲ್ಲಿ ಬರುತ್ತಿರುವ ‘ಲ್ಯಾಂಡ್ಲಾರ್ಡ್’ ಸಿನಿಮಾದ ಜೊತೆಗೂ ಆನಂದ್ ಆಡಿಯೋ ಕೈ ಜೋಡಿಸಿದೆ.
ಇದನ್ನೂ ಓದಿ: ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
‘ಲ್ಯಾಂಡ್ಲಾರ್ಡ್’ ಸಿನಿಮಾದಲ್ಲಿ ವಿಜಯ್ ಕುಮಾರ್ ಅವರ ಹಿರಿಯ ಮಗಳು ರಿತನ್ಯ ನಟಿಸುತ್ತಿದ್ದಾರೆ. ವಿಜಯ್ ಅವರಿಗೆ ಜೋಡಿಯಾಗಿ ರಚಿತಾ ರಾಮ್ ಅಭಿನಯಿಸುತ್ತಿದ್ದಾರೆ. ಪಾತ್ರವರ್ಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಬಿಟ್ಟುಕೊಡಲಿದೆ. ದಸರಾ ಅಥವಾ ದೀಪಾವಳಿಗೆ ಸಿನಿಮಾ ಬಿಡುಗಡೆ ಮಾಡುವ ಪ್ಲ್ಯಾನ್ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




