AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸು ಫ್ರಮ್ ಸೋ’ ಚಿತ್ರಕ್ಕೆ ಎರಡು ವಾರ; ವಿಶ್ವ ಬಾಕ್ಸ್ ಆಫೀಸ್​ನಲ್ಲಿ ರಾಜ್ ಶೆಟ್ಟಿ ಸಿನಿಮಾ ಗಳಿಸಿದ್ದೆಷ್ಟು?

‘ಸು ಫ್ರಮ್ ಸೋ’ ಸಿನಿಮಾ ಬಿಡುಗಡೆ ಆಗಿ ಎರಡು ವಾರಗಳಲ್ಲಿ ವಿಶ್ವದಾದ್ಯಂತ ಕೋಟಿ ಕೋಟಿ ಹಣ ಗಳಿಸಿದೆ. ಈ ಚಿತ್ರವು ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲೂ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಕಲೆಕ್ಷನ್ ಮತ್ತಷ್ಟು ಹೆಚ್ಚೋ ನಿರೀಕ್ಷೆ ಇದೆ. ಚಿತ್ರದ ಯಶಸ್ಸಿಗೆ ನಿರ್ಮಾಪಕರು ಮತ್ತು ತಂಡದ ಸದಸ್ಯರು ಧನ್ಯವಾದ ಹೇಳಿದ್ದಾರೆ.

‘ಸು ಫ್ರಮ್ ಸೋ’ ಚಿತ್ರಕ್ಕೆ ಎರಡು ವಾರ; ವಿಶ್ವ ಬಾಕ್ಸ್ ಆಫೀಸ್​ನಲ್ಲಿ ರಾಜ್ ಶೆಟ್ಟಿ ಸಿನಿಮಾ ಗಳಿಸಿದ್ದೆಷ್ಟು?
ಸು ಫ್ರಮ್ ಸೋ
ರಾಜೇಶ್ ದುಗ್ಗುಮನೆ
|

Updated on: Aug 08, 2025 | 7:28 AM

Share

‘ಸು ಫ್ರಮ್ ಸೋ’ ಸಿನಿಮಾ (Su From So) ರಿಲೀಸ್ ಆಗಿ ಎರಡು ವಾರಗಳು ಕಳೆದಿವೆ. ಮೊದಲ ದಿನ ಸಾಧಾರಣ ಓಪನಿಂಗ್ ಪಡೆದ ಈ ಚಿತ್ರ ನಂತರದ ದಿನಗಳಲ್ಲಿ ಅಬ್ಬರಿಸಿತು. ಈ ಸಿನಿಮಾ ವ್ಯಾಪ್ತಿ ದಿನ ಕಳೆದಂತೆ ಹೆಚ್ಚುತ್ತಿದೆ. ವಿದೇಶಗಳಲ್ಲೂ ಸಿನಿಮಾ ಶೋ ಆಯೋಜನೆ ಮಾಡಲಾಗಿದೆ. ಎರಡು ವಾರಗಳಲ್ಲಿ ‘ಸು ಫ್ರಮ್ ಸೋ’ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಎಷ್ಟು ಗಳಿಸಿತು ಎಂಬ ಕುತೂಹಲ ಅನೇಕರಿಗೆ ಇರುತ್ತದೆ. ಆ ಬಗ್ಗೆ ಇಲ್ಲಿದೆ ವಿವರ.

ರಾಜ್ ಬಿ. ಶೆಟ್ಟಿ ನಿರ್ಮಾಣದ, ಜೆಪಿ ತುಮಿನಾಡ ನಿರ್ದೇಶನದ ‘ಸು ಫ್ರಮ್ ಸೋ’ ಜುಲೈ 25ರಂದು ತೆರೆಗೆ ಬಂತು. ಅಂದಿನಿಂದ ಇಲ್ಲಿಯವರೆಗೂ ಸಿನಿಮಾ ಅಬ್ಬರಿಸುತ್ತಲೇ ಇದೆ. ಈ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದ ಸಿನಿಮಾ ಮಲಯಾಳಂನಲ್ಲೂ ಬಿಡುಗಡೆ ಆಯಿತು. ಇಂದಿನಿಂದ (ಆಗಸ್ಟ್ 8) ತೆಲುಗಿನಲ್ಲೂ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

‘ಸು ಫ್ರಮ್ ಸೋ’ ಸಿನಿಮಾ ಗಳಿಕೆ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 57.5 ಕೋಟಿ ರೂಪಾಯಿ ಆಗಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ sacnilk ವರದಿ ಮಾಡಿದೆ. ಸತತ 10 ದಿನಗಳ ಕಾಲ ಸಿನಿಮಾ 3 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರೋದು ಚಿತ್ರದ ಹೆಚ್ಚುಗಾರಿಕೆ. ಇನ್ನು, ಈ ಸಿನಿಮಾ 10ನೇ ದಿನ 6.15 (ಆಗಸ್ಟ್ 3, ಭಾನುವಾರ) ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದು ಚಿತ್ರದ ಒಂದು ದಿನದ ಅತ್ಯಧಿಕ ಗಳಿಕೆ.

ಇದನ್ನೂ ಓದಿ
Image
‘ಹಣ ಕೊಟ್ಟು ಟ್ರೋಲ್ ಮಾಡಿಸಿದರು, ಬೆಳೆಯದಂತೆ ತಡೆದರು’; ರಶ್ಮಿಕಾ ಮಂದಣ್ಣ
Image
ದಕ್ಷಿಣ ಚಿತ್ರರಂಗಲ್ಲಿ ಹೊಕ್ಕುಳದ ಗೀಳು ಜಾಸ್ತಿ ಎಂದು ಆರೋಪಿಸಿದ ಮಾಳವಿಕಾ
Image
50 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಸು ಫ್ರಮ್ ಸೋ’; ಎಲ್ಲಿಂದ ಎಷ್ಟು ಬಂತು?
Image
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

ಇದನ್ನೂ ಓದಿ: 50 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಸು ಫ್ರಮ್ ಸೋ’; ಎಲ್ಲಿಂದ ಎಷ್ಟು ಬಂತು? ಇಲ್ಲಿದೆ ವಿವರ

‘ಸು ಫ್ರಮ್ ಸೋ’ ಸಿನಿಮಾದ ಕನ್ನಡ ವರ್ಷನ್​ನಿಂದ 45.78 ಕೋಟಿ ರೂಪಾಯಿ ಗಳಿಕೆ ಆಗಿದೆ ಎನ್ನಲಾಗಿದೆ. ಮಲಯಾಳಂನಿಂದ ಸರಿ ಸುಮಾರು 2 ಕೋಟಿ ರೂಪಾಯಿ ಬಂದಿದೆ. ವಿದೇಶದಿಂದಲೂ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಹಣದ ಹೊಳೆ ಹರಿದು ಬಂದಿದೆ. ಸಿನಿಮಾ ಯಶಸ್ಸಿಗೆ ಕಾರಣಾರದ ಎಲ್ಲರಿಗೂ ತಂಡದವರು ಧನ್ಯವಾದ ತಿಳಿಸಿದ್ದಾರೆ. ರಾಜ್ ಸದ್ಯ ವಿದೇಶದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.