AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೈವ ಮೊದಲೇ ನೀಡಿತ್ತು ಎಚ್ಚರಿಕೆ: ಗುಟ್ಟು ಬಿಚ್ಚಿಟ್ಟ ಕಾಂತಾರ ನಿರ್ಮಾಪಕ

Kantara Chapter one: ಹೊಂಬಾಳೆ ನಿರ್ಮಾಣ ಮಾಡಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾ ಶೂಟಿಂಗ್ ವೇಳೆ ಸಾಕಷ್ಟು ಅವಘಡಗಳು ನಡೆದಿವೆ. ಸಿನಿಮಾದ ನಿರ್ಮಾಪಕರು ಈ ಬಗ್ಗೆ ಮಾತನಾಡಿದ್ದು ಸಿನಿಮಾದ ಶೂಟಿಂಗ್ ಶುರುವಾಗುವ ಮುಂಚೆಯೇ ದೈವವು ತಮಗೆ ನೀಡಿದ್ದ ಎಚ್ಚರಿಕೆ ಬಗ್ಗೆ ಮಾತನಾಡಿದ್ದಾರೆ.

ದೈವ ಮೊದಲೇ ನೀಡಿತ್ತು ಎಚ್ಚರಿಕೆ: ಗುಟ್ಟು ಬಿಚ್ಚಿಟ್ಟ ಕಾಂತಾರ ನಿರ್ಮಾಪಕ
Kantara Chapter 1
ಮಂಜುನಾಥ ಸಿ.
|

Updated on:Aug 12, 2025 | 11:21 AM

Share

‘ಕಾಂತಾರ’ (Kantara) ಸಿನಿಮಾ ಅಭೂತಪೂರ್ವ ಯಶಸ್ಸು ಗಳಿಸಿದೆ. ಸಾಧಾರಣ ಬಜೆಟ್​ನಲ್ಲಿ ಯಾವುದೇ ಹೆಚ್ಚಿನ ನಿರೀಕ್ಷೆಗಳಿಲ್ಲದೆ ಮಾಡಿದ ಸಿನಿಮಾ ತನ್ನ ಸ್ವಂತ ಶಕ್ತಿಯಿಂದ ರಾಜ್ಯ, ದೇಶಗಳ ಗಡಿಯನ್ನು ದಾಟಿ ಐತಿಹಾಸಿಕ ವಿಜಯ ಸಾಧಿಸಿತು. ಸಿನಿಮಾದ ಗೆಲುವಿಗೆ ದೈವದ ಆಶೀರ್ವಾದವೇ ಕಾರಣ ಎನ್ನಲಾಗಿತ್ತು. ಇದೀಗ ‘ಕಾಂತಾರ’ ಸಿನಿಮಾದ ಪ್ರೀಕ್ವಲ್ ನಿರ್ಮಾಣ ಆಗುತ್ತಿದ್ದು, ಆ ಸಿನಿಮಾಕ್ಕೆ ಒಂದರ ಹಿಂದೊಂದರಂತೆ ವಿಘ್ನಗಳು ಎದುರಾಗುತ್ತಲೇ ಇವೆ. ಆದರೆ ಈ ಸಿನಿಮಾ ನಿರ್ಮಾಣ ಪ್ರಾರಂಭಕ್ಕೂ ಮುಂಚೆಯೇ ದೈವ ಎಚ್ಚರಿಕೆ ನೀಡಿತ್ತೆಂದು ನಿರ್ಮಾಪಕರು ಗುಟ್ಟು ರಟ್ಟು ಮಾಡಿದ್ದಾರೆ.

ಈಗ ನಿರ್ಮಾಣ ಹಂತದಲ್ಲಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾಕ್ಕೆ ಸಂಬಂಧಿಸಿದ ಕೆಲವರು ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಕೆಲವರು ಅಕಾಲಿಕ ಮರಣಕ್ಕೆ ಈಡಾಗಿದ್ದಾರೆ. ಸೆಟ್​ನಲ್ಲಿ ಕೆಲವು ಅವಘಡಗಳು ಉಂಟಾಗಿವೆ. ಅಪಘಾತಗಳಾಗಿವೆ. ಇದಕ್ಕೆಲ್ಲ ದೈವದ ಶಾಪವೇ ಕಾರಣ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಸಿನಿಮಾದ ಸಹ ನಿರ್ಮಾಪಕರಾಗಿರುವ ಚೆಲುವೇ ಗೌಡ ಅವರು ಸಿನಿಮಾ ಚಿತ್ರೀಕರಣಕ್ಕೆ ಮುಂಚೆಯೇ ದೈವ ಕೊಟ್ಟಿದ್ದ ಎಚ್ಚರಿಕೆ ಬಗ್ಗೆ ಮಾತನಾಡಿದ್ದಾರೆ.

‘ಈ ವರೆಗೆ ನಡೆದ ಅನಾಹುತಕಾರಿ ಘಟನೆಗಳು ಯಾವುವೂ ಸಹ ಸಿನಿಮಾದ ಸೆಟ್​​ನಲ್ಲಿ ನಡೆದಿಲ್ಲ. ಕೇವಲ ಒಂದು ಘಟನೆ ಮಾತ್ರ ಸಿನಿಮಾ ಸೆಟ್​ನಲ್ಲಿ ನಡೆದಿದೆ. ಸಿನಿಮಾ ಸೆಟ್​ನಲ್ಲಿಯೇ ಎಲ್ಲವೂ ನಡೆದಿದೆ ಎಂಬುದು ಸುಳ್ಳು. ಅಲ್ಲದೆ ಸಿನಿಮಾ ಭಾರಿ ಬೃಹತ್ ಆಗಿದ್ದು, ಇಂಥಹಾ ಬೃಹತ್ ಸಿನಿಮಾಗಳನ್ನು ನಿರ್ಮಾಣ ಮಾಡುವಾಗ ಸೆಟ್​​ನಲ್ಲಿ ಅವಘಡಗಳು ನಡೆಯುವುದು ಸಾಮಾನ್ಯ. ಆದರೂ ನಾವು ಸಕಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ’ ಎಂದಿದ್ದಾರೆ.

‘ನಾವು ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡುವ ಮುಂಚೆಯೇ ದೈವದ ಬಳಿ ಹೋಗಿದ್ದೆವು, ಪಂಜುರ್ಲಿ ಆಗಲೇ ನಮಗೆ ಎಚ್ಚರಿಕೆ ಕೊಟ್ಟಿತ್ತು. ಚಿತ್ರೀಕರಣದ ಸಂದರ್ಭದಲ್ಲಿ ಸಾಕಷ್ಟು ಅಡೆ-ತಡೆಗಳು ಬರುತ್ತವೆ ಆದರೆ ನೀವು ನಿಲ್ಲಬೇಡಿ, ಇದು ಯಶಸ್ವಿ ಆಗುತ್ತದೆ’ ಎಂದಿತ್ತು. ಅದರಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ನಾವು ದೇವರಲ್ಲಿ, ದೈವದಲ್ಲಿ ನಂಬಿಕೆ ಇಡುವ ಜನ, ಪ್ರತಿದಿನವೂ ಪೂಜೆ ಮಾಡಿಯೇ ಚಿತ್ರೀಕರಣ ಪ್ರಾರಂಭಿಸುತ್ತೇವೆ, ದೈವದ ಆಶೀರ್ವಾದಗಳನ್ನು ಪಡೆಯುತ್ತೇವೆ’ ಎಂದಿದ್ದಾರೆ ಚೆಲುವೇ ಗೌಡ.

ಇದನ್ನೂ ಓದಿ:‘ಕಾಂತಾರ’ ಚಿತ್ರದ ಕಂಬಳ ದೃಶ್ಯದಲ್ಲಿ ಮಿಂಚಿದ್ದ ಅಪ್ಪು ಕೋಣ ಸಾವು

ಸಿನಿಮಾದ ಚಿತ್ರೀಕರಣವನ್ನು ನಾವು ಬಹಳ ಕಠಿಣವಾದ ಪರಿಸ್ಥಿತಿಗಳಲ್ಲಿ ಮಾಡುತ್ತಿದ್ದೇವೆ. ಸಿನಿಮಾದ 80% ಚಿತ್ರೀಕರಣ ಕರಾವಳಿಯ ಕಾಡುಗಳು, ಕಾಡಂಚಿನ ಹಳ್ಳಿಗಳಲ್ಲಿ ಚಿತ್ರೀಕರಣಗೊಂಡಿದೆ. ಸಿನಿಮಾದ ಎಲ್ಲ ತಂತ್ರಜ್ಞರು ನಟರುಗಳು ಬೆಳಿಗ್ಗೆ 4ಕ್ಕೆ ಎದ್ದು ಪ್ರಯಾಣ ಮಾಡಿ ಸೆಟ್ ತಲುಪಬೇಕು. ಸಾಕಷ್ಟು ಇಂಟೀರಿಯರ್​​ನಲ್ಲಿ ಚಿತ್ರೀಕರಣ ನಡೆಯುತ್ತಿರುವ ಕಾರಣದಿಂದ ಚಿತ್ರೀಕರಣದಲ್ಲಿ ಸಾಕಷ್ಟು ಸವಾಲುಗಳು ಇದ್ದೇ ಇರುತ್ತವೆ ಇವು ಸಹ ಕೆಲವು ಅವಘಡಗಳಿಗೆ ಕಾರಣವಾಗಿವೆ’ ಎಂದಿದ್ದಾರೆ.

ಚಿತ್ರೀಕರಣ ಆರಂಭವಾದಾಗ ಕಲಾವಿದರಿದ್ದ ಬಸ್ಸು ಅಪಘಾತಕ್ಕೆ ಈಡಾಗಿತ್ತು. ಅದಾದ ಬಳಿಕ ಕೆಲವು ಜೂನಿಯರ್ ನಟರು ಸೆಟ್​​ನಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಬೆಂಕಿ ಅವಘಡವೊಂದು ಸೆಟ್​​ನಲ್ಲಿ ನಡೆಯಿತು ಆದರೆ ಯಾರಿಗೂ ಸಮಸ್ಯೆ ಆಗಲಿಲ್ಲ. ಬಳಿಕ ಸಿನಿಮಾಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬ ನೀರಲ್ಲಿ ಮುಳುಗಿ ನಿಧನ ಹೊಂದಿದೆ. ಸಿನಿಮಾದಲ್ಲಿ ನಟಿಸಿದ್ದ ಹಾಸ್ಯ ಕಲಾವಿದನೊಬ್ಬ ಹೃದಯಾಘಾತದಿಂದ ನಿಧನ ಹೊಂದಿದ. ಬಳಿಕ ರಿಷಬ್ ಶೆಟ್ಟಿಯೂ ಇದ್ದ ಬೋಟು ಚಿತ್ರೀಕರಣದ ವೇಳೆ ಮುಳುಗಿತು ಆದರೆ ಯಾರಿಗೂ ಹಾನಿ ಆಗಲಿಲ್ಲ ಆದರೆ ಕ್ಯಾಮೆರಾ ಇನ್ನಿತರೆ ವಸ್ತುಗಳಿಗೆ ಹಾನಿಯಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:17 am, Tue, 12 August 25