AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ’ ಚಿತ್ರದ ಕಂಬಳ ದೃಶ್ಯದಲ್ಲಿ ಮಿಂಚಿದ್ದ ಅಪ್ಪು ಕೋಣ ಸಾವು

ಕಾಂತಾರ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಪ್ಪು ಕೋಣ ನಿಧನ ಹೊಂದಿದೆ. ರಿಷಬ್ ಶೆಟ್ಟಿ ಅವರ ತರಬೇತಿಗೆ ಸಹಾಯ ಮಾಡಿದ ಈ ಕೋಣ, ಹಲವು ಕಂಬಳ ಸ್ಪರ್ಧೆಗಳಲ್ಲಿ ಚಾಂಪಿಯನ್ ಆಗಿತ್ತು. ಅಪ್ಪು ಕೋಣದ ಸಾವು ಕಂಬಳ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಕಾಂತಾರ ಚಿತ್ರದ ಯಶಸ್ಸಿನಲ್ಲಿ ಅಪ್ಪು ಕೋಣದ ಪಾತ್ರ ಮಹತ್ವದ್ದಾಗಿತ್ತು.

‘ಕಾಂತಾರ’ ಚಿತ್ರದ ಕಂಬಳ ದೃಶ್ಯದಲ್ಲಿ ಮಿಂಚಿದ್ದ ಅಪ್ಪು ಕೋಣ ಸಾವು
ಕಾಂತಾರ
ಪ್ರಜ್ವಲ್ ಅಮೀನ್​, ಉಡುಪಿ
| Updated By: ರಾಜೇಶ್ ದುಗ್ಗುಮನೆ|

Updated on:Aug 09, 2025 | 10:52 AM

Share

‘ಕಾಂತಾರ’ (Kantara) ಸಿನಿಮಾ 2022ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರದ ಮೂಲಕ ಅನೇಕ ಕಲಾವಿದರು ಜನಪ್ರಿಯತೆ ಪಡೆದರು. ಈ ಸಿನಿಮಾದಲ್ಲಿ ಕರಾವಳಿಯ ಸಂಪ್ರದಾಯದ ಬಗ್ಗೆ ಹೇಳಲಾಗಿತ್ತು. ದಕ್ಷಿಣ ಕನ್ನಡದ ಜನತೆಯ ಉಸಿರಿನ ಜೊತೆ ಬೆರೆತು ಹೋದ ಕಂಬಳದ ದೃಶ್ಯಗಳೂ ಇದ್ದವು. ಈ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ಸಾವನ್ನಪ್ಪಿದೆ. ಅಪ್ಪು ಕೋಣದ ಮಾಲೀಕರು ಹಾಗೂ ಕಂಬಳ ಪ್ರಿಯರಿಗೆ ಈ ವಿಚಾರ ಬೇಸರ ಮೂಡಿಸಿದೆ.

‘ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಹೀರೋ ಆಗಿ ಮಿಂಚಿದ್ದರು. ಈ ಚಿತ್ರದ ನಿರ್ದೇಶನ ಕೂಡ ಅವರದ್ದೇ. ಅವರು ಈ ಸಿನಿಮಾಗಾಗಿ ಕಷ್ಟಪಟ್ಟು ಕಂಬಳ ಓಡಿಸೋದನ್ನು ಕಲಿತಿದ್ದರು. ಇದಕ್ಕಾಗಿ ಬೈಂದೂರು ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು ಸಾಕಿದ್ದ ಕೋಣ ಬಳಕೆ ಆಗಿತ್ತು. ಈ ಕೋಣಗಳಿಗೆ ಅಪ್ಪು ಹಾಗೂ ಕಾಲಾ ಎಂದು ಹೆಸರು ಇಡಲಾಗಿತ್ತು. ಈ ಪೈಕಿ ಅಪ್ಪು ಕೋಣ ನಿಧನ ಹೊಂದಿದೆ.

ಚಿತ್ರೀಕರಣಕ್ಕೂ ಮೊದಲಿನಿಂದಲೇ ಅಪ್ಪು ಮತ್ತು ಕಾಲಾ ಕೋಣಗಳ ಮೂಲಕ ರಿಷಬ್ ತಬೇತಿ ಪಡೆದಿದ್ದರು. ಇವುಗಳ ಜೊತೆ ರಿಷಬ್​ಗೆ ಆಪ್ತತೆ ಬೆಳೆದಿತ್ತು. ಆ ಬಳಿಕ ಸಿನಿಮಾಗಳಲ್ಲೂ ಕೋಣಗಳು ಕಾಣಿಸಿಕೊಂಡಿದ್ದವು. ಈ ಪೈಕಿ ಒಂದು ಕೋಣ ನಿಧನ ಹೊಂದಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ
Image
ಮಹೇಶ್ ಬಾಬು ಇಷ್ಟೊಂದು ಶ್ರೀಮಂತರೇ? ನಟನ ಆಸ್ತಿ ಬಗ್ಗೆ ಇಲ್ಲಿದೆ ವಿವರ
Image
‘ಬ್ಲಾಕ್​ಬಸ್ಟರ್’; ಒಂದು ವಾರ ಮೊದಲೇ ಹೊರಬಿತ್ತು ಕೂಲಿ ಸಿನಿಮಾ ವಿಮರ್ಶೆ
Image
ತೆಲುಗು ರಿಲೀಸ್ ಬೆನ್ನಲ್ಲೇ ಮತ್ತೆ ಹೆಚ್ಚಿತು ‘ಸು ಫ್ರಮ್ ಸೋ’ ಕಲೆಕ್ಷನ್
Image
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

ಇದನ್ನೂ ಓದಿ: ‘ಕಾಂತಾರ’ ಚಿತ್ರದಲ್ಲಿ ನಟಿಸಿದ್ದ ಟಿ. ಪ್ರಭಾಕರ್ ಹೃದಯಾಘಾತದಿಂದ ನಿಧನ

ಪ್ರಶಸ್ತಿಗಳ ಸರಮಾಲೆ..

ಸಿನಿಮಾಗಳಲ್ಲಿ ಮಾತ್ರ ಅಪ್ಪು ಹಾಗೂ ಕಾಲಾ ಕೋಣಗಳು ಚಾಂಪಿಯನ್ ಅಲ್ಲ, ನಿಜ ಜೀವನದಲ್ಲೂ ಇವು ಸಾಕಷ್ಟು ಅವಾರ್ಡ್ ಗೆದ್ದಿವೆ. ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದವು. ಕುಂದಾಪುರ ಭಾಗದಲ್ಲಿ ನಡೆಯುವ ಕಂಬಳದಲ್ಲಿ 5 ವರ್ಷ ಈ ಕೋಣಗಳು ಚಾಂಪಿಯನ್ ಆಗಿದ್ದವು. ಬೆಂಗಳೂರು ಕಂಬಳದಲ್ಲೂ ಕನೆಹಲಗೆ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದಿದ್ದವು. ಕರಾವಳಿಯ ಬಹುತೇಕ ಕಂಬಳಗಳಲ್ಲಿ ಕೀರ್ತಿ-ಬಹುಮಾನ ಸಂಪಾದಿಸಿದ್ದ ಅಪ್ಪು ಕೋಣ ಈಗ ಅಗಲಿದೆ.

‘ಕಾಂತಾರ: ಚಾಪ್ಟರ್ 1’

‘ಕಾಂತಾರ’ ಯಶಸ್ಸಿನ ಬಳಿಕ ರಿಷಬ್ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.  ಈ ಸಿನಿಮಾದಲ್ಲಿಯೂ ಕಂಬಳದ ದೃಶ್ಯಗಳು ಇರುವುದು ಅನುಮಾನ ಎನ್ನಲಾಗುತ್ತಿದೆ. ಇದಕ್ಕಾಗಿ ರಿಷಬ್ 3 ವರ್ಷ ಶ್ರಮ ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:38 am, Sat, 9 August 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ