ಮಹೇಶ್ ಬಾಬು ಇಷ್ಟೊಂದು ಶ್ರೀಮಂತರೇ? ನಟನ ಆಸ್ತಿ ಬಗ್ಗೆ ಇಲ್ಲಿದೆ ವಿವರ
Mahesh Babu Birthdayಟಾಲಿವುಡ್ ನಟ ಮಹೇಶ್ ಬಾಬು ಅವರಿಗೆ ಈಗ 50 ವರ್ಷ. ಇಂದು ಅವರು ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿದ್ದಾರೆ.‘ರಾಜಕುಮಾರುಡು" ಚಿತ್ರದ ಮೂಲಕ ಖ್ಯಾತಿ ಪಡೆದ ಅವರು, ಈಗ 300 ಕೋಟಿಗೂ ಅಧಿಕ ಆಸ್ತಿಯನ್ನು ಹೊಂದಿದ್ದಾರೆ. ರಾಜಮೌಳಿ ಅವರ ಮುಂಬರುವ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಅದಕ್ಕಾಗಿ ಅವರು ಭಾರೀ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದಾರೆ.

ಟಾಲಿವುಡ್ನ ಸ್ಟಾರ್ ನಟ ಮಹೇಶ್ ಬಾಬು (Mahesh Babu) ಅವರಿಗೆ ಇಂದು (ಆಗಸ್ಟ್ 9) ಬರ್ತ್ಡೇ. ಟಾಲಿವುಡ್ನಲ್ಲಿ ಅವರದ್ದು ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಸ್ಟಾರ್ ಹೀರೋ ಹಾಗೂ ನಿರ್ಮಾಪಕ ಕೃಷ್ಣ ಅವರ ಮಗ ಮಹೇಶ್ ಬಾಬು. 1975ರಲ್ಲಿ ಜನಿಸಿದ ಅವರಿಗೆ ಈಗ 50 ವರ್ಷ. ಅವರು ಸ್ಟೈಲ್ನಲ್ಲಿ ಎಲ್ಲರನ್ನೂ ಬೀಟ್ ಮಾಡುವಂತಿದ್ದಾರೆ. ಅವರ ಬಗ್ಗೆ, ಅವರ ಆಸ್ತಿ ಬಗ್ಗೆ ಇಂದು ತಿಳಿದುಕೊಳ್ಳೋಣ.
ಮಹೇಶ್ ಬಾಬು ಅವರು 1979ರಲ್ಲಿ ‘ನೀದಾ’ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದರು. ಆಗ ಅವರಿಗೆ 4 ವರ್ಷ. ನಂತರ ಹಲವು ಚಿತ್ರಗಳಲ್ಲಿ ಬಾಲ ಕಲಾವಿದನಾಗಿ ಗಮನ ಸೆಳೆದರು. ಸ್ಟಾರ್ ಹೀರೋ ಮಗ ಎಂಬ ಕಾರಣಕ್ಕೆ ಅವಕಾಶ ಸಿಗೋದು ಕಷ್ಟ ಆಗಲೇ ಇಲ್ಲ. 1999ರ ‘ರಾಜಕುಮಾರುಡು’ ಅವರ ನಟನೆಯ ಮೊದಲ ಚಿತ್ರ. ಈ ಸಿನಿಮಾದಲ್ಲಿ ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು ಮಹೇಶ್ ಬಾಬು. ಆ ಸಿನಿಮಾ ಸೂಪರ್ ಹಿಟ್ ಆಯಿತು.
ಮಹೇಶ್ ಬಾಬು ಟಾಲಿವುಡ್ನ ಶ್ರೀಮಂತ ಹೀರೋಗಳಲ್ಲಿ ಒಬ್ಬರು. ಅವರ ಆಸ್ತಿ 300 ಕೋಟಿ ರೂಪಾಯಿಗೂ ಅಧಿಕವಾಗಿದೆ ಎನ್ನುತ್ತವೆ ವರದಿ. ಅವರು ಪ್ರತಿ ಚಿತ್ರಕ್ಕೆ 50-80 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ಮಹೇಶ್ ಬಾಬು ಸದ್ಯ ರಾಜಮೌಳಿ ನಿರ್ದೇಶನದ ‘ಎಸ್ಎಸ್ಎಂಬಿ 29’ನ ಭಾಗ ಆಗುತ್ತಿದ್ದು, ಈ ಚಿತ್ರಕ್ಕಾಗಿ ಹಲವು ವರ್ಷ ಮುಡಿಪಿಡುತ್ತಿದ್ದಾರೆ. ಇದಕ್ಕಾಗಿ ಅವರು ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 125 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ.
ಮಹೇಶ್ ಬಾಬು ಮೊದಲ ಚಿತ್ರಕ್ಕೆ ಪಡೆದಿದ್ದು ಕೇವಲ 75 ಲಕ್ಷ ರೂಪಾಯಿ. ಈಗ ಅವರು ನುರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುವ ರೀತಿ ಬೆಳೆದಿದ್ದಾರೆ. ಅವರ ನಟನೆಯ ‘ಸರ್ಕಾರು ವಾರಿ ಪಾಠ’ ಸಿನಿಮಾ ಸಾಧಾರಣ ಯಶಸ್ಸು ಕಂಡಿತು. ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದ ‘ಗುಂಟೂರು ಖಾರಂ’ ಚಿತ್ರ ಸೋತಿದೆ.
ಮಹೇಶ್ ಬಾಬು ಅವರು ಹೈದರಾಬಾದ್ನ ಜುಬ್ಲೀ ಹಿಲ್ಸ್ನಲ್ಲಿ ಮನೆ ಹೊಂದಿದ್ದಾರೆ. ಈ ಮನೆಯ ಬೆಲೆ 30 ಕೋಟಿ ರೂಪಾಯಿಗೂ ಅಧಿಕವಂತೆ. ಅವರು ನಟಿ ಹಾಗೂ ಉದ್ಯಮಿ ನಮ್ರತಾ ಶಿರೋಡ್ಕರ್ ಅವರನ್ನು 2005ರಲ್ಲಿ ಮದುವೆ ಆದರು. ಈ ದಂಪತಿಗೆ ಸಿತಾರಾ ಹಾಗೂ ಗೌತಮ್ ಹೆಸರಿನ ಮಕ್ಕಳು ಇದ್ದಾರೆ.
ಇದನ್ನೂ ಓದಿ: ರಾಜಮೌಳಿ ಪರ್ಫೆಕ್ಷನ್ನಿಂದ ಸಂಕಷ್ಟಕ್ಕೆ ಸಿಲುಕಿದ ಮಹೇಶ್ ಬಾಬು; ಇಷ್ಟೆಲ್ಲಾ ರಿಸ್ಕ್ ಬೇಕಾ?
ಮಹೇಶ್ ಬಾಬುಗೆ ಕಾರುಗಳ ಬಗ್ಗೆ ಕ್ರೇಜ್ ಇದೆ. ಅವರು ಹೊಸ ಹೊಸ ಕಾರನ್ನು ಖರೀದಿ ಮಾಡಿ ತಮ್ಮ ಗ್ಯಾರೇಜ್ಗೆ ಸೇರಿಸಿಕೊಳ್ಳುತ್ತಾರೆ. ಬರ್ತ್ಡೇ ಪ್ರಯುಕ್ತ ಅವರ ಸಿನಿಮಾ ಬಗ್ಗೆ ಮಾಹಿತಿ ಸಿಗೋ ಸಾಧ್ಯತೆ ಇದೆ. ರಾಜಮೌಳಿ ನಿರ್ದೇಶನ ಇರುವ ಈ ಚಿತ್ರಕ್ಕೆ ಪ್ರಿಯಾಂಕಾ ನಾಯಕಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







