AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಮೌಳಿ ಪರ್ಫೆಕ್ಷನ್​ನಿಂದ ಸಂಕಷ್ಟಕ್ಕೆ ಸಿಲುಕಿದ ಮಹೇಶ್ ಬಾಬು; ಇಷ್ಟೆಲ್ಲಾ ರಿಸ್ಕ್ ಬೇಕಾ?

ರಾಜಮೌಳಿ ನಿರ್ದೇಶನದ SSMB29 ಚಿತ್ರದಲ್ಲಿ ಮಹೇಶ್ ಬಾಬು ಪ್ರಮುಖ ಪಾತ್ರದಲ್ಲಿದ್ದಾರೆ. ಈ ಆಕ್ಷನ್-ಅಡ್ವೆಂಚರ್ ಚಿತ್ರಕ್ಕಾಗಿ ಮಹೇಶ್ ಬಾಬು ಎಲ್ಲಾ ಸ್ಟಂಟ್‌ಗಳನ್ನು ಸ್ವತಃ ನಿರ್ವಹಿಸುತ್ತಿದ್ದಾರೆ. ಬಾಡಿ ಡಬಲ್​ಗೆ ಇಲ್ಲಿ ಅವಕಾಶ ಇಲ್ಲ. ರಾಜಮೌಳಿ ಅವರ ಪರಿಪೂರ್ಣತೆಯ ಹುಡುಕಾಟವು ಮಹೇಶ್ ಬಾಬು ಅವರ ಮೇಲೆ ಹೆಚ್ಚಿನ ಒತ್ತಡ ಹಾಗೂ ಅಪಾಯವನ್ನು ತಂದಿದೆ.

ರಾಜಮೌಳಿ ಪರ್ಫೆಕ್ಷನ್​ನಿಂದ ಸಂಕಷ್ಟಕ್ಕೆ ಸಿಲುಕಿದ ಮಹೇಶ್ ಬಾಬು; ಇಷ್ಟೆಲ್ಲಾ ರಿಸ್ಕ್ ಬೇಕಾ?
ರಾಜಮೌಳಿ
ರಾಜೇಶ್ ದುಗ್ಗುಮನೆ
|

Updated on:Jul 24, 2025 | 1:54 PM

Share

ನಿರ್ದೇಶಕ ರಾಜಮೌಳಿ ಅವರು ಪರಿಪೂರ್ಣತೆಗೆ ಹೆಸರಾದವರು. ಒಂದು ದೃಶ್ಯ ಸರಿ ಬಂದಿಲ್ಲ ಎಂದರೆ ಅಲ್ಲಿ ನಟಿಸುತ್ತಿರುವವರು ಯಾರೇ ಆದರೂ ಸರಿ ಮನಸ್ಸಿಗೆ ಖುಷಿ ಕೊಡುವವರೆಗೂ ರೀ-ಟೇಕ್ ತೆಗೆದುಕೊಳ್ಳುತ್ತಲೇ ಇರುತ್ತಾರೆ. ಈಗ ಇದೇ ವಿಚಾರ ಮಹೇಶ್ ಬಾಬುಗೆ ಸಂಕಟ ತಂದೊಡ್ಡುವ ಸೂಚನೆ ಕೊಟ್ಟಿದೆ. ಮಹೇಶ್ ಬಾಬು ಹಾಗೂ ರಾಜಮೌಳಿ (SS Rajamouli) ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘SSMB29’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ.

ಸಾಮಾನ್ಯವಾಗಿ ಸ್ಟಂಟ್​ಗಳನ್ನು ಮಾಡುವಾಗ ಹೀರೋಗಳು ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡೋದಿಲ್ಲ. ಈ ಕಾರಣದಿಂದಲೇ ಬಾಡಿ ಡಬಲ್ ಉಪಯೋಗಿಸುತ್ತಾರೆ. ಅಂದರೆ ಅವರನ್ನೇ ಹೋಲವು ಮತ್ತೊಂದು ವ್ಯಕ್ತಿಯಿಂದ ಸ್ಟಂಟ್ ಮಾಡಿಸುತ್ತಾರೆ. ತೆರೆಮೇಲೆ ನೋಡುವಾಗ ಹೀರೋನೆ ಸ್ಟಂಟ್ ಮಾಡುತ್ತಿದ್ದಾನೆ ಎಂಬ ರೀತಿಯಲ್ಲಿ ಕಾಣುತ್ತದೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಆದರೆ, ಈ ಬಾರಿ ಮಹೇಶ್ ಬಾಬುಗೆ ಯಾವುದೇ ಬಾಡಿ ಡಬಲ್ ಇರೋದಿಲ್ಲ.

ಕೆಲವು ವರದಿಗಳ ಪ್ರಕಾರ ‘SSMB29’ ಚಿತ್ರದ ಶೂಟ್ ವೇಳೆ ಯಾವುದೇ ಬಾಡಿ ಬಲ್ ಮಾಡಲು ಅವಕಾಶ ಇಲ್ಲ. ಎಲ್ಲಾ ಸ್ಟಂಟ್​ಗಳನ್ನು ಮಹೇಶ್ ಬಾಬು ಅವರೇ ಮಾಡಬೇಕು. ಇದು ಹೆಚ್ಚು ರಿಸ್ಕ್ ಕೂಡ ಹೌದು. ಈ ವೇಳೆ ಯಾವುದಾದರೂ ತೊಂದರೆ ಆದರೆ ಜೀವಕ್ಕೆ ಅಪಾಯ ಬರಹುದು. ಹೀಗಾಗಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಇನ್ನು ಮಹೇಶ್ ಬಾಬು ಕೂಡ ಬಾಡಿ ಡಬಲ್ ಆಯ್ಕೆಯನ್ನು ಹೆಚ್ಚು ಇಷ್ಟಪಡೋದಿಲ್ಲ. ಈ ಮೊದಲು ಕೂಡ ಅವರು ಅಂಥ ರಿಸ್ಕ್ ತೆಗೆದುಕೊಂಡಿದ್ದರು.

ಇದನ್ನೂ ಓದಿ
Image
ಥಿಯೇಟರ್​ನಲ್ಲಿ ರಿಲೀಸ್ ಆದ ಒಂದೇ ದಿನಕ್ಕೆ ಈ ಥ್ರಿಲ್ಲರ್ ಚಿತ್ರ ಒಟಿಟಿಗೆ
Image
ನಯನತಾರ ಜೊತೆ ಚಿರಂಜೀವಿ ರೊಮ್ಯಾನ್ಸ್ ; 29 ವರ್ಷ ವಯಸ್ಸಿನ ಅಂತರ
Image
ವೀಕ್ಷಕರು ಹಿಂದೆಂದೂ ಕೇಳಿರದ ರಿಯಾಲಿಟಿ ಶೋನ ತಂದ ಜೀ ಕನ್ನಡ 
Image
ಮುಂದಿನ ಮೂರು ವರ್ಷ ರಜನಿಕಾಂತ್ ಬ್ಯುಸಿ; ಮತ್ತೆ ಮೂರು ಸಿನಿಮಾ ಫೈನಲ್

ಇದನ್ನೂ ಓದಿ: ‘ಬಾಹುಬಲಿ, ‘ಆರ್​ಆರ್​ಆರ್​’ ಅಲ್ಲ, ರಾಜಮೌಳಿಗೆ ಫೇವರಿಟ್ ಈ ಸುದೀಪ್ ಸಿನಿಮಾ

ಈ ಸಿನಿಮಾ ಆ್ಯಕ್ಷನ್ ಅಡ್ವೆಂಡಚರ್ ಸಿನಿಮಾ. ಹೀಗಾಗಿ, ಇದರಲ್ಲಿ ಸಾಕಷ್ಟು ಸ್ಟಂಟ್​ಗಳು ಇದ್ದೇ ಇರುತ್ತವೆ. ಈ ಸಿನಿಮಾದಲ್ಲಿ ದೃಶ್ಯ ವೈಭವ ಕೊಂಚ ಹೆಚ್ಚೇ ಇರಲಿದೆ. ಹೀಗಾಗಿ, ಸಿನಿಮಾ ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಕೂಡ ಇದ್ದಾರೆ. ಈ ಸಿನಿಮಾದ ಒಂದಷ್ಟು ಶೂಟ್ ಭಾರತದಲ್ಲಿ ನಡೆದಿದೆ. ಆ ಬಳಿಕ ತಂಡ ಕೀನ್ಯಾಗೆ ಪ್ರಯಾಣ ಬೆಳೆಸಲಿದೆ. ಅಲ್ಲಿ ಚಿತ್ರದ ಬಹುತೇಕ ಶೂಟ್ ನಡೆಯಲಿದೆ ಎನ್ನಲಾಗುತ್ತಿದೆ. ಅದಕ್ಕೆ ಇನ್ನೂ ಮುಹೂರ್ತ ಫಿಕ್ಸ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:30 am, Fri, 18 July 25